ಬೆಂಗಳೂರು(ನ.03): ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನಾಭರಣ ದೋಚಿ ರೈಲಿನಲ್ಲಿ ರಾಜಸ್ಥಾನದ ಅಜ್ಮೇರಾಕ್ಕೆ ಪ್ರಯಾಣ ಬೆಳೆಸುತ್ತಿದ್ದ ಆರೋಪಿಯನ್ನು ಬೆನ್ನಟ್ಟಿದ್ದ ಬಸವನಗುಡಿ ಪೊಲೀಸರು, ವಿಮಾನದಲ್ಲಿ ಪ್ರಯಾಣ ಬೆಳೆಸಿ ಆತನಿಗಿಂತ ಮೊದಲೇ ಅಜ್ಮೇರಾ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಅಜ್ಮಿರಾ ಮೂಲದ ಕುಶಾಲ್‌ ಸಿಂಗ್‌ ರಜಪೂತ್‌ ಬಂಧಿತ. ಆರೋಪಿಯಿಂದ . 38.32 ಲಕ್ಷ ಮೌಲ್ಯದ 955 ಗ್ರಾಂ ಚಿನ್ನಾಭರಣ ಹಾಗೂ 281 ಗ್ರಾಂನ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉಪಚುನಾವಣೆ ಬಳಿಕ ಸರ್ಕಾರದ ಬಗ್ಗೆ ಮಾತಾಡಲಿ : BSY ಸಂದರ್ಶನ

ರಾಜಸ್ಥಾನ ಮೂಲದ ಉದ್ಯಮಿ ಮೆಹಕ್‌.ವಿ.ಪಿರಂಗಲ್‌ ಎಂಬುವರು ಹಲವು ವರ್ಷಗಳಿಂದ ಕುಟುಂಬ ಸಮೇತ ಬಸವನಗುಡಿಯಲ್ಲಿ ನೆಲೆಸಿದ್ದಾರೆ. ಮೆಹಕ್‌ ಅವರು ಚಿಕ್ಕಪೇಟೆಯಲ್ಲಿ ಬಟ್ಟೆಮಳಿಗೆ ಹೊಂದಿದ್ದಾರೆ. ಮನೆ ಕೆಲಸಕ್ಕಾಗಿ ಮೆಹಕ್‌ ಕುಟುಂಬ ಒಳ್ಳೆಯವನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಮೆಹಕ್‌ ಅವರಿಗೆ ಸ್ನೇಹಿತರ ಮೂಲಕ ಕುಶಾಲ್‌ ಪರಿಚಯವಾಗಿದ್ದ. ಕುಶಾಲ್‌ ರಾಜಸ್ಥಾನ ಮೂಲದವನಾದ ಕಾರಣ ಮೆಹಕ್‌ ಆತನನ್ನು ಸೆ.27ರಂದು ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಮದ್ಯ ಪ್ರಿಯರಿಗೆ ಬಿಗ್ ಶಾಕ್: ಡ್ರಿಂಕ್ಸ್ ನಿಷೇಧದ ಬಗ್ಗೆ BSY ವಿಚಾರ ಬಹಿರಂಗಪಡಿಸಿದ ಬಿಜೆಪಿ MP

ಅದೇ ದಿನ ಮೆಹಕ್‌ ದೀಪಾವಳಿ ಹಬ್ಬದ ನಿಮಿತ್ತ ಪೂಜೆಗೆಂದು ಕುಟುಂಬ ಸಮೇತ ಅಂಗಡಿಗೆ ತೆರಳಿದ್ದರು. ಆ ವೇಳೆ ಮನೆ ಕಾವಲಿಗೆ ಕುಶಾಲ್‌ನನ್ನು ಬಿಟ್ಟು ಹೋಗಿದ್ದರು. ಇತ್ತ ಮಾಲೀಕರ ಕುಟುಂಬ ತೆರಳಿದ ಕೂಡಲೇ ಕುಶಾಲ್‌, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಪೂಜೆ ಮುಗಿಸಿ ಮನೆಗೆ ಮರಳಿದಾಗ ಕಳ್ಳತನ ಕೃತ್ಯ ಮೆಹಕ್‌ಗೆ ಗಮನಕ್ಕೆ ಬಂದಿತ್ತು. ಕೂಡಲೇ ಬಸನವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು:

ಆರೋಪಿ ಮೊಬೈಲ್‌ ಸಂಖ್ಯೆ ಪಡೆದ ಬಸವನಗುಡಿ ಠಾಣೆ ಪೊಲೀಸರು ಆತನ ಲೋಕೇಷನ್‌ ಪರಿಶೀಲಿಸಿದ್ದರು. ಈ ವೇಳೆ ಆರೋಪಿ ರೈಲಿನಲ್ಲಿ ರಾಜಸ್ಥಾನಕ್ಕೆ ಹೋಗುತ್ತಿರುವ ಮಾಹಿತಿ ಲಭ್ಯವಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿಮಾನದಲ್ಲಿ ಆರೋಪಿಗಿಂತ ಮೊದಲೇ ರಾಜಸ್ಥಾನಕ್ಕೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಅಜ್ಮಿರಾಗೆ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪೆಟ್‌ ಕಟೋಚ್‌ ತಿಳಿಸಿದ್ದಾರೆ.