Asianet Suvarna News Asianet Suvarna News

ಹೃದಯಸ್ತಂಭನ: ಬಿಎಂಟಿಸಿ ಬಸ್‌ನಲ್ಲಿ ಕುಳಿತಿದ್ದಾಗಲೇ ವ್ಯಕ್ತಿ ಸಾವು

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಾವು ಕುಳಿತ ಆಸನದಲ್ಲಿಯೇ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಅಬ್ದುಲ್‌ ಖಾದಿರ್‌ (61) ಮೃತಪಟ್ಟಿರುವ ವ್ಯಕ್ತಿ. 

man dies of heart attack at bmtc bus in bengaluru gvd
Author
First Published Mar 9, 2023, 7:02 AM IST

ಬೆಂಗಳೂರು (ಮಾ.09): ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಾವು ಕುಳಿತ ಆಸನದಲ್ಲಿಯೇ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಅಬ್ದುಲ್‌ ಖಾದಿರ್‌ (61) ಮೃತಪಟ್ಟಿರುವ ವ್ಯಕ್ತಿ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ತೆರಳಲು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ ಮಂತ್ರಿ ಮಾಲ್‌ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ತಾವು ಕುಳಿತಿದ್ದ ಸೀಟ್‌ ಮೇಲೆಯೇ ಕುಸಿದು ಬಿದ್ದಿದ್ದಾರೆ.

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಅವರನ್ನು ಕೆಳಗಿಳಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಾತರಿ ಪಡಿಸಿದರು. ಈ ಕುರಿತು ಉಪ್ಪಾರ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಿವೃತ್ತ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಮುನಿನಂಜಯ್ಯ ಎಂಬುವರು ಹೃದಯಸ್ತಂಭನದಿಂದ ಮೃತಪಟ್ಟಿದ್ದರು.

ಪಾಠ ಮಾಡುತ್ತಿದ್ದಾಗ್ಲೇ ಶಿಕ್ಷಕರಿಗೆ ಹಾರ್ಟ್ ಅಟ್ಯಾಕ್, ಕುರ್ಚಿಯಲ್ಲಿ ಕುಳಿತಲ್ಲೇ ಹೋದ ಜೀವ!

ಹೃದಯಸ್ತಂಭನಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಜೀವನಶೈಲಿಯ ಆಯ್ಕೆ: ಮಣಿಪಾಲ್ ಹಾಸ್ಪಿಟಲ್ಸ್‍ನ ಸಮಾಲೋಚಕ ಇಂಟರ್‍ವೆನ್ಶನಲ್ ಕಾರ್ಡಿಯಾಲಜಿಸ್ಟ್ ಮತ್ತು ಸ್ಟ್ರಕ್ಚರಲ್ ಇಂಟರ್‍ವೆನ್ಶನ್ ಸ್ಪೆಶಲಿಸ್ಟ್ ಡಾ. ಸೂರಜ್ ನರಸಿಂಹನ್ ಎ ಮಾತನಾಡಿ, 2030ರ ವೇಳೆಗೆ ವಿಶ್ವವ್ಯಾಪಿಯಾಗಿ ಭಾರತವು ಅತ್ಯಧಿಕ ಪ್ರಮಾಣದ ಹೃದ್ರೋಗ ಮರಣಗಳನ್ನು ಹೊಂದುತ್ತದೆ ಎಂದು ಹೇಳಲಾಗುತ್ತಿದೆ. ಈ ಏರಿಕೆಗೆ ಮುಖ್ಯ ಕಾರಣ ಅನಾರೋಗ್ಯಕರ ಜೀವನಶೈಲಿ ಆಯ್ಕೆಗಳು ಮತ್ತು ಹೆಚ್ಚಿದ ಒತ್ತಡ. ಈಗ ಜನರು, ಹೆಚು ಕ್ಯಾಲೊರಿ ಮತ್ತು ಸಕ್ಕರೆ ಇರುವ ಸಂಸ್ಕರಿತ ಆಹಾರಗಳನ್ನು ಸೇವಿಸುತ್ತಿದ್ದು ಇವು ಆರೋಗ್ಯಕ್ಕೆ ಬಾಧಕವಾಗಿವೆ. 

ವಯಸ್ಸಾದಂತೆ ಹೃದಯವೂ ಬದಲಾಗುತ್ತೆ, ಹೇಗಿರಬೇಕು ಲೈಫ್‌ಸ್ಟೈಲ್

ಧೂಮಪಾನ ಮತ್ತು ಮದ್ಯಪಾನ ಹೃದ್ರೋಗ ಏರ್ಪಡುವುದಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲ, ಮನೆಯಿಂದ ಕೆಲಸ ಮಾಡುವುದು ಆರಾಮದಾಯಕವಾದರೂ, ಅನೇಕರಿಗೆ ಇದು ದಿನನಿತ್ಯದ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಿದೆ. ಆನರು ಇದರಿಂದ ಬಿಡುವು ಮಾಡಿಕೊಂಡು ತಮ್ಮ ಆಸಕ್ತಿಗೆ ತಕ್ಕಂತೆ ಓಟ, ಜಾಗಿಂಗ್ ಅಥವಾ ನಡಿಗೆ ಕೈಗೊಳ್ಳಬೇಕು. ಮಕ್ಕಳು ಹಾಗೂ ಯುವಜನರೂ ಕೂಡ ಪ್ರತಿನಿತ್ಯ ಕನಿಷ್ಟ 40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ, ಅವರ ಹೃದಯದ ಆರೋಗ್ಯ ಹಾಗೂ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ' ಎಂದು ಹೇಳುತ್ತಾರೆ. 

Follow Us:
Download App:
  • android
  • ios