ಸಿಂಧನೂರು(ಡಿ.06): ಇನ್ನೇನು ಮದುಮಗನಾಗಿ ತಾಳಿ ಕಟ್ಟುವ ಹಿಂದಿನ ದಿನವೇ ಸಾವನಪ್ಪಿರುವ ಧಾರುಣ ಘಟನೆ ಶನಿವಾರ ಸಂಜೆ ಸಿಂಧನೂರು ತಾಲೂಕಿನಲ್ಲಿ ಜರುಗಿದೆ. 

ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಯಲ್ಲಪ್ಪ ಅವರ ಮಗ ಹುಲುಗಪ್ಪ (36)ರಾಮತ್ನಾಳ ಗ್ರಾಮ ಪಂಚಾಯಿತಿಯಎಸ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ವಿವಾಹ ಮಹೋತ್ಸವ ಡಿ. 6 ರಂದು ತಾಲೂಕಿನ ಗೋರೆಬಾಳ ಗ್ರಾಮದ ಶರಣ  ಬಸವೇಶ್ವರ ದೇವಸ್ಥಾನದಲ್ಲಿ ನಿಶ್ಚಯಿಸಲಾಗಿತ್ತು. ಮದುಮಗಳು ದೈಹಿಕ ಶಿಕ್ಷಕಿ ಹಾಗೆ ಕಾರ್ಯನಿರ್ವಹಿಸುತ್ತಿದ್ದರು.

ಇವರ ಮದುವೆ ಹಿಂದಿನ ಶಾಸ್ತ್ರಗಳೆಲ್ಲವೂ ಶನಿವಾರ ಪೂರ್ಣಗೊಂಡಿದ್ದವು. ಇನ್ನೇನು ರವಿವಾರ ತಾಳಿ ಕಟ್ಟುವುದೊಂದೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ಮದುಮಗನಿಗೆ ಶನಿವಾರ ಸಂಜೆ ಹೃದಯಾಘಾತವಾಗಿ ಸಾವನಪ್ಪಿದ್ದಾರೆ.

ಬೀಗರು ಸಂಬಂಧಿಕರು ಅನೇಕರು ಮದುವೆಗೆಂದು ಆಗಮಿಸಿದವರು ಮದುಮಗನ ಅಂತಿಮ ದರ್ಶನ ಪಡೆಯುವಂತೆ ಆಗಿದೆ.