15 ವರ್ಷದ ಹಿಂದೆ ಕುಣಿ ತೋಡಿದ್ದ ವ್ಯಕ್ತಿ ನಿಧನ: ಅದೇ ಕುಣಿಯಲ್ಲಿ ಅಂತ್ಯಸಂಸ್ಕಾರ!
: ತಾಲೂಕಿನ ಹಿಪ್ಪರಗಾ (ಎಸ್.ಎನ್) ಗ್ರಾಮದಲ್ಲಿ ಒಬ್ಬ ವ್ಯಕ್ತಿ 15 ವರ್ಷಗಳ ಹಿಂದೆಯೇ ಕುಣಿ ತೋಡಿದ್ದ. ಬುಧವಾರ ಆ ವ್ಯಕ್ತಿ ನಿಧನರಾದ ಹಿನ್ನೆಲೆ ಅದೇ ಕುಣಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜೇವರ್ಗಿ (ಜೂ.30) : ತಾಲೂಕಿನ ಹಿಪ್ಪರಗಾ (ಎಸ್.ಎನ್) ಗ್ರಾಮದಲ್ಲಿ ಒಬ್ಬ ವ್ಯಕ್ತಿ 15 ವರ್ಷಗಳ ಹಿಂದೆಯೇ ಕುಣಿ ತೋಡಿದ್ದ. ಬುಧವಾರ ಆ ವ್ಯಕ್ತಿ ನಿಧನರಾದ ಹಿನ್ನೆಲೆ ಅದೇ ಕುಣಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಿಪ್ಪರಗಾ ಗ್ರಾಮದ ಸಿದ್ದಪ್ಪ (96) ನಿಧನ ಹೊಂದಿದ ವ್ಯಕ್ತಿ. ಸಾವಿಗೆ ಮುನ್ನವೇ ಸಿದ್ದಪ್ಪ ತನಗೆ ತಾನೆ ಕುಣಿ ತೋಡಿಟ್ಟುಕೊಂಡಿದ್ದರು. ಇವರಿಗೆ ನಾಲ್ಕು ಜನ ಪುತ್ರರಿದ್ದಾರೆ. ತಾನು ಸತ್ತ ಮೇಲೆ ಯಾರಿಗೂ ಭಾರವಾಗಬಾರದು ಮತ್ತು ತನ್ನ ಶವ ಮಣ್ಣು ಮಾಡುವುದಕ್ಕೆ ಬೇಕಾಗುವ ಕುಣಿಯನ್ನು 15 ವರ್ಷಗಳ ಹಿಂದೆಯೇ ಸ್ವತಃ ತಾವೇ ತೊಡಿಕೊಂಡು ಇದುವರೆಗೆ ಜೋಪಾನ ಮಾಡಿಕೊಂಡು ಬಂದಿದ್ದರು.
9 ವರ್ಷದ ಹಿಂದೆ ಮೃತಪಟ್ಟವ ಧುತ್ತನೇ ಪ್ರತ್ಯಕ್ಷ : ಡಿಎನ್‌ಎ ಪರೀಕ್ಷೆ ನಡೆಸಿದ ಪೊಲೀಸರಿಗೆ ಶಾಕ್
6 ವರ್ಷಗಳ ಹಿಂದೆ ಅವರ ಪತ್ನಿ ನೀಲಮ್ಮ ನಿಧನ ಹೊಂದಿದಾಗ ಇದೆ ಕುಣಿ ಪಕ್ಕದಲ್ಲಿ ಮಣ್ಣು ಮಾಡಲಾಗಿತ್ತು. ಮೃತ ಸಿದ್ದಪ್ಪ ಮೂಲತಃ ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮದವರು. ಕಳೆದ 60 ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಹಿಪ್ಪರಗಾ (ಎಸ್.ಎನ್) ಗ್ರಾಮಕ್ಕೆ ಕುಟುಂಬ ಸಮೇತ ಬಂದು ಇಲ್ಲಿಯೇ ನೆಲೆಸಿದ್ದರು ಎಂದು ಹಿಪ್ಪರಗಾ (ಎಸ್.ಎನ್) ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮೃತ ಸಿದ್ದಪ್ಪ ತಂದೆ ಮಲ್ಕಪ್ಪ ಅಪ್ಪಟ ಕೃಷಿಕರಾಗಿದ್ದರು. ತಮ್ಮ ಜೀವನದುದ್ದಕ್ಕೂ ತನ್ನ ಸ್ವಂತ ಜಮೀನಿನಲ್ಲಿ ವಾಸವಾಗಿದ್ದರು. ಆ ಜಾಗದಲ್ಲೆ ಅವರ ಸಮಾಧಿ ಮೇಲೆ ಅವರ ಮನೆ ದೇವರು ಸಿದ್ಧರಾಯ ಅವರ ಚಿಕ್ಕ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಅವರ ಸಾವಿನ ಸುದ್ದಿ ತಿಳಿದು ಜನರು ತಂಡೋಪ ತಂಡವಾಗಿ ಆಗಮಿಸಿ ಕುಣಿ ವೀಕ್ಷಿಸುತ್ತಿರುವುದು ಸಾಮಾನ್ಯವಾಗಿತ್ತು.
- ವಿರುಪಾಕ್ಷಯ್ಯ ನಂದಿಕೋಲಮಠ, ಗ್ರಾಮಸ್ಥ