Tipu Jayanti  

(Search results - 74)
 • tippu sultan jayanthi

  NEWS18, Sep 2019, 7:18 AM IST

  ಟಿಪ್ಪು ಜಯಂತಿ ರದ್ದು : ಸರ್ಕಾರಕ್ಕೆ ಸಂಕಷ್ಟ?

  ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ರದ್ದುಪಡಿಸಿ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು ಈ ಸಂಬಂಧ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. 

 • Karnataka Districts2, Aug 2019, 8:18 AM IST

  'ಮೋದಿಗಿಂತ ಟಿಪ್ಪು 100ಪಟ್ಟು ಉತ್ತಮ ಆಡಳಿತಗಾರ'..!

  ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕಿಂತಲೂ ಟಿಪ್ಪು ಸುಲ್ತಾನ್‌ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದರು. ಪ್ರಸ್ತುತ ದಿನನಿತ್ಯ ಕೋಮು ಗಲಭೆ, ಮಹಿಳೆಯ ಮೇಲೆ ನಿರಂತರ ಅತ್ಯಾಚಾರ, ರೈತರ ಆತ್ಮಹತ್ಯೆ, ದಲಿತರ ಮೇಲೆ ದೌರ್ಜನ್ಯ ಯಾವುದನ್ನು ತಡೆಯಲಾಗದ ಬಿಜೆಪಿ ಸರ್ಕಾರಕ್ಕಿಂತ ಟಿಪ್ಪು ನೂರುಪಟ್ಟು ಉತ್ತಮ ಆಡಳಿತಗಾರ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ ಹೇಳಿದರು.

 • Video Icon

  NEWS1, Aug 2019, 6:15 PM IST

  ಬಿಎಸ್‌ವೈರಿಂದ ಎಸಿಬಿಗೆ ಕೊನೆ ಮೊಳೆ, ಮತ್ತೆ ಲೋಕಾಯುಕ್ತಕ್ಕೆ ಪವರ್?

  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೇಮಕ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ [ಎಸಿಬಿ]ಗೆ ಕೊನೆ ಮೊಳೆ ಹೊಡೆಯುವುದು ಪಕ್ಕಾ ಆಗಿದೆ. ಎಸಿಬಿ ರದ್ದು ಮಾಡಲು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಿದ್ಧತೆ ಮಾಡಿಕೊಂಡಿದೆ.

 • NEWS1, Aug 2019, 8:32 AM IST

  ಟಿಪ್ಪು ಜಯಂತಿ ಆಚರಣೆಗೆ ವಾಟಾಳ್ ಆಗ್ರಹ

  ಟಿಪು ಸುಲ್ತಾನ್ ಜಯಂತಿ ಆಚರಣೆ ರದ್ದು ಮಾಡಿರುವ ಸಂಬಂಧ ಕರ್ನಾಟಕ ಸರ್ಕಾರ ವಿರುದ್ಧ ವಾಟಾಳ್ ನಾಗರಾಜ್ ಅಸಮಾಧಾನ ಹೊರ ಹಾಕಿದರು. ಮತ್ತೆ ಆಚರಣೆ ಆರಂಭಿಸಲು ಆಗ್ರಹಿಸಿದರು.

 • siddaramaiah cm

  NEWS31, Jul 2019, 10:03 PM IST

  ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’  ಆದರೆ ಬಿಜೆಪಿ ಮಾಡ್ತಿರೋದೇನು?

  ಅಧಿಕಾರಕ್ಕೆ ಏರಿದ ತಕ್ಷಣವೇ ರಾಜ್ಯದ ಬಿಜೆಪಿ ಸರ್ಕಾರ ವಿವಾದಿತ ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ. ಸಹಜವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.

 • NEWS30, Jul 2019, 5:13 PM IST

  ‘ನಾವು ಆಚರಣೆ ಮಾಡೇ ಮಾಡ್ತಿವಿ, ಯಾರಿಂದಲೂ ತಡೆಯೋಕಾಗಲ್ಲ’

  ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

 • Udupi17, Dec 2018, 5:03 PM IST

  ಟಿಪ್ಪು ಚರ್ಚ್ ನಾಶ ಮಾಡಿದ್ದಾನೆ: ಮಾಜಿ ಕೈ ಸಚಿವ

  ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಟಿಪ್ಪು ಜಯಂತಿ ಬಗ್ಗೆ ಆಡಿರುವ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಕಿಚ್ಚು ಹತ್ತಿಸಿದೆ.

 • Siddaramaiah

  state21, Nov 2018, 7:47 AM IST

  ಮಾಜಿ ಸಿಎಂ ಸಿದ್ದರಾಮಯ್ಯರಿಂದ ಹೊಸ ಪ್ಲಾನ್

  ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಇದೀಗ ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ. 

 • Shikaripur
  Video Icon

  NEWS15, Nov 2018, 9:52 PM IST

  ಶಿಕಾರಿಪುರದಲ್ಲೇ ಟಿಪ್ಪು ಗುಣಗಾನ ಮಾಡಿದ ಬಿಎಸ್‌ವೈ ಕಟ್ಟಾ ಬೆಂಬಲಿಗ.. ವಿಡಿಯೋ ವೈರಲ್

  ಟಿಪ್ಪು ಮತಾಂಧ ಅಲ್ಲ, ಟಿಪ್ಪು ಒಬ್ಬ ದೇಶ ಪ್ರೇಮಿ.. ಬ್ರಿಟಿಷ್ ವಿರುದ್ಧ ಹೊರಾಡಿದ್ದಾರೆ. ಅದಕ್ಕೆ ಅವರನ್ನ ಟಿಪ್ಪು ಹುಲಿ ಅನ್ನೋದು.. ಇತಿಹಾಸ ಓದಿದ್ದರೆ ಅವರ ಬಗ್ಗೆ ತಿಳಿಯುತ್ತೆ
  ಇತಿಹಾಸ ಗೊತ್ತಿಲ್ಲದವರು ಟೀಕೆ ಮಾಡ್ತಾರೆ ಆ ಟೀಕೆ ಗೆ ಕಿವಿಗೊಡೋದು ಬೇಡ. 316 ದೇವಾಲಯಗಳನ್ನ ಜೀರ್ಣೋದ್ಧಾರ ಮಾಡಿದ್ದಾರೆ. 

 • Siddaramaiah and Shilpa Ganesh

  state15, Nov 2018, 12:40 PM IST

  ಟಿಪ್ಪು ಜಯಂತಿ: ಸಿದ್ದುಗೆ ಶಿಲ್ಪಾ ಗಣೇಶ್ ಟಾಂಗ್!

  ಇನ್ನೇನು ಟಿಪ್ಪು ಜಯಂತಿ ಮುಗಿಯಿತು, ಪರಿಸ್ಥಿತಿ ಶಾಂತಗೊಂಡಿತು ಎಂಬುವಷ್ಟರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.

 • Video Icon

  NEWS14, Nov 2018, 7:21 PM IST

  ಟಿಪ್ಪುವಿನ ಮೇಲೆ ಮೈಸೂರು ರಾಜಮಾತೆ ಮಾಡಿದ ಗಂಭೀರ ಆರೋಪವೇನು?

  ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ, ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದು ಯಾವ ಆಧಾರದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಸರ್ಕಾರ ಏಕೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ, ಇದರ ಹಿಂದಿನ ಉದ್ದೇಶವೇನೆಂದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

 • Santosh Tammaiah

  NEWS13, Nov 2018, 7:32 PM IST

  ಟಿಪ್ಪು ಜಯಂತಿ ವಿರೋಧ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಬಿಗ್ ರಿಲೀಫ್

  ಟಿಪ್ಪು ಜಯಂತಿ ಆಚರಣೆ ಸಂಬಂಧ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.

 • Santosh Tammaiah

  state13, Nov 2018, 8:17 AM IST

  ಟಿಪ್ಪು ಜಯಂತಿ ವಿರೋಧಿ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ

  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಸಂತೋಷ್ ತಮ್ಮಯ್ಯನನ್ನು ಬಂಧಿಸಲಾಗಿದೆ. ಇವರು ಉಘೇ ವೀರಭೂಮಿಗೆ ಎಂಬ ತಮ್ಮ ಕಾಲಂನಲ್ಲಿ ’ಹೊರುತ್ತೇವೆ ಮೊಕದ್ದಮೆ ಉತ್ತರ ಸಿಗುವ ತನಕ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಈ ಲೇಖನದಲ್ಲಿ ಟಿಪ್ಪು ಜಯಂತಿ ವಿರುದ್ಧವಾಗಿ ಬರೆದಿದ್ದು, ಆಚರಣೆ ಮಾಡುವುದು ಯಾಕೆ ಸರಿಯಲ್ಲ ಎಂದು ವಿಮರ್ಶಿಸಿದ್ದರು. ಸದ್ಯ ಈ ಲೇಖನ ಸಂತೋಷ್ ಬಂಧನಕ್ಕೆ ಕಾರಣವಾಗಿದೆ.

 • NEWS12, Nov 2018, 9:48 AM IST

  ಬಿಎಸ್‌ವೈ ಹಾಳಾಗಲು ಕಾರಣವೇ ಇದು : ಈಶ್ವರಪ್ಪ

  ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಯನ್ನು ಬಿಟ್ಟು ಕೆಜೆಪಿ ಸ್ಥಾಪಿಸಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿ ಹಾಳಾಗಿದ್ದರು. ಆದರೆ ಬಿಜೆಪಿಗೆ ಬಂದ ಬಳಿಕ ಅವರು ಮತ್ತೆ ಉದ್ದಾರವಾದರು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

 • Prathap Simha and HD Kumaraswamy

  state12, Nov 2018, 9:23 AM IST

  ಸಿಎಂ ಕುಮಾರಸ್ವಾಮಿಗೆ ಪ್ರತಾಪ್‌ ಸಿಂಹ ಅಭಿನಂದಿಸಿದ್ದೇಕೆ..?

  ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಅಭಿನಂದಿಸಿದ್ದಾರೆ.