ಬೆಂಗಳೂರು(ಏ.12): ಲಂಡನ್‌ನಿಂದ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ 52 ವರ್ಷದ ವ್ಯಕ್ತಿಗೆ ಮಾರ್ಚ್ 22 ರಂದು ಕೊರೋನಾ ಸೋಂಕು ತಗುಲಿತ್ತು. ಇವರಿಂದಾಗಿ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ ಇಡೀ ಕುಟುಂಬಕ್ಕೆ ಕೊರೋನಾ ಅಂಟಿದೆ.

ಮನೆ ಮಾಲೀಕ ಕೊರೋನಾದಿಂದ ಗುಣಮುಖನಾಗಿ ಮೂರ್ನಾಲ್ಕು ದಿನಗಳ ಹಿಂದೆಯೇ ಮನೆ ಸೇರಿದ್ದಾನೆ. ಆದರೆ, ಆತನಿಂದ ಆತನ ಮನೆ ಕೆಲಸದ 35 ವರ್ಷದ ಮಹಿಳೆಗೆ ಸೋಂಕು ಹರಡಿತ್ತು. ಬಳಿಕ ಆಕೆಯಿಂದ ಆಕೆಯ 40 ವರ್ಷದ ಪತಿಗೂ ಸೋಂಕು ಹರಡಿ ಇಂದಿಗೂ ಆಸ್ಪತ್ರೆಯಲ್ಲಿದ್ದಾರೆ. 

ಸಂಕಷ್ಟದಲ್ಲಿರೋ ಜನರ ಪರವಾಗಿ ಮೋದಿಗೆ ವಿಶೇಷ ಮನವಿ ಮಾಡಿಕೊಂಡ ಕುಮಾರಸ್ವಾಮಿ

ಇದೀಗ ಶನಿವಾರ ಮನೆಕೆಲಸದ ಮಹಿಳೆಯ 10 ವರ್ಷದ ಮಗನಿಗೂ ಸೋಂಕು ದೃಢಪಟ್ಟಿದೆ. ಈ ಮೂಲಕ ಮಾಲೀಕನಿಂದ ಮನೆಕೆಲಸದ ಇಡೀ ಕುಟುಂಬ ಆಸ್ಪತ್ರೆ ಪಾಲಾಗುವಂತಾಗಿದೆ. ಆ ವ್ಯಕ್ತಿ ಜವಾಬ್ದಾರಿಯುತವಾಗಿ ಕ್ವಾರಂಟೈನ್‌ ಆಗಿದ್ದರೆ ಇಷ್ಟುಮಂದಿಗೆ ಸೋಂಕು ಹರಡುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.