ಡಿಕೆಶಿ ವೈಯಕ್ತಿಕ ವಿಚಾರಕ್ಕೆ ಯಾಕೆ ಹೋಗ್ತೀರಿ? : ಎಚ್‌ಡಿಕೆಗೆ ಮಾಗಡಿ ಶಾಸಕ ತಿರುಗೇಟು

ಕುಮಾರಸ್ವಾಮಿಯವರು ಕರ್ನಾಟಕ ಮಾಜಿ ಸಿಎಂ ತಮ್ಮ ಘನತೆಗೆ ತಕ್ಕಂತೆ ಮಾತಾಡಬೇಕು. ಯಾರೋ ಏನೋ ಹೇಳ್ತಾರೆಂದು ಏನೇನೋ ಮಾತನಾಡಬಾರದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.

Magadi MLA Balakrishna statement against HD Kumaraswamy at bengaluru rav

ಬೆಂಗಳೂರು (ಅ.26): ಕುಮಾರಸ್ವಾಮಿಯವರು ಕರ್ನಾಟಕ ಮಾಜಿ ಸಿಎಂ ತಮ್ಮ ಘನತೆಗೆ ತಕ್ಕಂತೆ ಮಾತಾಡಬೇಕು. ಯಾರೋ ಏನೋ ಹೇಳ್ತಾರೆಂದು ಏನೇನೋ ಮಾತನಾಡಬಾರದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.

ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರ ಸಂಬಂಧ ಏಷಿಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಎಲ್ಲಿಯೂ ಕನಕಪುರವನ್ನು ಬೆಂಗಳೂರಿಗೆ ಸೇರಿಸುವೆ ಎಂದಿಲ್ಲ. ಆ ರೀತಿ ಅವರು ಹೇಳಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳೋದು ಬೇಡ. ಅದೆಲ್ಲ ಮಾಡುವುದು ಸಾಧ್ಯವಾಗದ ಮಾತು. ರಾಮನಗರ ಅಂತ ಇರುವ ಹೆಸರಿನ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ಉದ್ದೇಶ ಇದೆ. ಅದನ್ನು ಅವರು ಹೇಳಿದ್ದಾರೆ. ಎಲ್ಲಿಯೂ ಕನಕಪುರವನ್ನು ಬೆಂಗಳೂರಿಗೆ ತಂದು ಸೇರಿಸುತ್ತೇವೆ ಎಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲ​ಕೃಷ್ಣ

ಇದೇನು ಸುಪ್ರೀಂ ಕೋರ್ಟ್ ಆದೇಶ ಅಲ್ಲ:

ರಾಮನಗರ ಜಿಲ್ಲೆ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ. ಮಾಗಡಿ, ಕನಕಪುರ, ರಾಮನಗರ ಮೊದಲು ಬೆಂಗಳೂರು ಜಿಲ್ಲೆಯೆ ಆಗಿತ್ತು. ಬೆಂಗಳೂರು ಎಂದು ನಾಮಕರಣ ಮಾಡಿದರೆ ಬ್ರಾಂಡ್ ವೆಲ್ಯು ಹೆಚ್ಚಳ ಆಗುತ್ತದೆ. ನೀವು ಅಧಿಕಾರಕ್ಕೆ ಬಂದ ಮೇಲೆ ಬೇಕಾದರೆ ಮತ್ತೆ ರಾಮನಗರ ಎಂದು ಮಾಡಿಕೊಳ್ಳಿ. ಈಗ ಜನ ನಮಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ ನಾವು ಮಾಡುತ್ತೇವೆ. ಇದೇನು ಸುಪ್ರೀಂ ಕೋರ್ಟ್ ಆದೇಶ ಅಲ್ಲ ಎಂದ ಎಚ್‌ಡಿಕೆಗೆ ತಿರುಗೇಟು ನೀಡಿದರು.

10 ಶ್ರೀಮಂತ ರಾಜಕಾರಣಿ ಪೈಕಿ ನೀವೂ ಒಬ್ಬರು:

ಡಿಕೆ ಶಿವಕುಮಾರ ಅವರ ವೈಯಕ್ತಿ ವಿಚಾರಕ್ಕೆ ಯಾಕೆ ಹೋಗ್ತೀರಿ ಎಂದು ಪ್ರಶ್ನಿಸಿದ ಮಾಗಡಿ ಶಾಸಕ ಬಾಲಕೃಷ್ಣ, ಡಿಕೆ ಶಿವಕುಮಾರ್ ಕಣ್ಣಿಗೆ ಕಾಣುವಂತೆ ಬ್ಯುಸಿನೆಸ್ ಆದರೂ ಮಾಡ್ತಾರೆ. ನೀವು ಕಣ್ಣಿಗೆ ಕಾಣದ ಹಾಗೆ ಬೇನಾಮಿ ಹೆಸರಲ್ಲಿ ಮಾಡ್ತೀರಿ 10 ಶ್ರೀಮಂತ ರಾಜಕಾರಣಿಗಳ ಪೈಕಿ ಕುಮಾರಸ್ವಾಮಿ ಕೂಡ ಒಬ್ಬರು  ಎಂದು ಎಚ್‌ಡಿಕೆ ಮೇಲೆ ವಾಗ್ದಾಳಿ ನಡೆಸಿದರು. ಇನ್ನು ಧರ್ಮಸ್ಥಳದ ಆಣೆ ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ತೇನೆ. ನೀವು ಸರ್ಕಾರದ ಹಣ ಬಳಸಿಕೊಂಡಿಲ್ಲವಾ? ವರ್ಗಾವಣೆಯಲ್ಲಿ ಹಣ ಪಡೆದಿಲ್ವಾ? ಧರ್ಮಸ್ಥಳದ ಮಂಜುನಾಥನ ಮುಂದೆ ಪ್ರಮಾಣ ಮಾಡಿ. ಎಲ್ಲವೂ ನನಗೆ ಗೊತ್ತಿದೆ. ಕುಮಾರಸ್ವಾಮಿ ನಮ್ಮ ಮಾಜಿ ಗುರುಗಳು. ನೀವು ವರ್ಗಾವಣೆಯಲ್ಲಿ ಹಣ ಪಡೆದಿದ್ರಿ ಎಂದು ನಾನು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡುವೆ ನೀವೂ ಪಡೆದಿಲ್ಲ ಎಂದು ಮಾಡಿ ಎಂದು ಸವಾಲು ಹಾಕಿದರು.

ಚುನಾವಣೆ ವೇಳೆ ಸಾವಿರಾರು ಕೋಟಿ ರೂ. ಘೋಷಣೆ ಮಾಡಿದ್ರಿ. ಅಷ್ಟು ಹಣ ಎಲ್ಲಿಂದ ಬಂತು. ಇನ್ನು ಸಿನಿಮಾದಿಂದ ಹಣ ಮಾಡಿದ್ದೇನೆ ಎಂದು ಹೇಳುತ್ತೀರಿ. ಇದು ಶುದ್ಧ ಸುಳ್ಳು. ಬ್ಲಾಕ್ ಮನಿ ವೈಟ್ ಮಾಡೋಕೆ ಸಿನಿಮಾ ಮಾಡೋದು. ಸಿನಿಮಾ ಮಾಡಿ ಸಾಲ ಮಾಡಿಕೊಂಡವರು ಅದೆಷ್ಟೋ ಜನ
ಆದರೆ ಸಿನಿಮಾ ಮಾಡಿ ಬದುಕಿರೋರು ಕುಮಾರಸ್ವಾಮಿ ಒಬ್ಬರೆ. ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಿದ ಬಾಲಕೃಷ್ಣ

ಕುಮಾರಸ್ವಾಮಿ ಯಾರನ್ನೂ ಬಿಟ್ಟಿಲ್ಲ. ಅಧಿಕಾರ ಇಲ್ಲ ಎಂದರೆ ಅವರು ತಡೆದುಕೊಳ್ಳಲ್ಲ. ಹಿಂದೆ ಯಡಿಯೂರಪ್ಪರನ್ನು ಬಿಟ್ಟಿಲ್ಲ. ಅವರನ್ನು ಅಧಿಕಾರ ದಿಂದ ಕೆಳಗಿಳಿಸಿದರು. ಯಡಿಯೂರಪ್ಪರನ್ನು ಜೈಲಿಗೆ ಕೂಡ ಹಾಕಿಸಿದ್ರು. ತಮ್ಮ ಪಕ್ಷದಲ್ಲಿ ಕುಮಾರಸ್ವಾಮಿ ಯಾರನ್ನು ಬೆಳೆಸಿದ್ದಾರೆ? ಸಿದ್ದರಾಮಯ್ಯರನ್ನ ಬೆಳೆಸಿದ್ದಾರ? ಅಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರುವಾಗಲೇ ನಾನು ಸೇರಬೇಕಿತ್ತು. ಆದರೆ ಕುಮಾರಸ್ವಾಮಿ ನಂಬಿ ಕುಳಿತುಕೊಂಡ್ವಿ. ಏನು ಮಾಡಿಲ್ಲ. ಕುಮಾರಸ್ವಾಮಿ ಯಾರನ್ನೂ ಬೆಳೆಸಿಲ್ಲ ಎಂದರು.

KIADB ಎಲ್ಲಾ ವ್ಯವಹಾರ ವಾದ್ರಾ ಒಡೆತನ ಡಿಎಲ್‌ಎಫ್‌ನಲ್ಲಿ ಆಫೀಸ್‌ನಲ್ಲಿ ನಡೆಯುತ್ತೆ: ಎಚ್‌ಡಿಕೆ ಹೊಸ ಬಾಂಬ್!

ಇನ್ನು ಸಿಪಿ ಯೋಗಿಶ್ವರ್ ಗೆ ನಾನು ಏಕವಚನದಲ್ಲಿ ಮಾತಾಡಬಾರದಿತ್ತು. ಅದಕ್ಕೆ ನನಗೆ ಬೇಸರ ಆಗಿದೆ. ನಾನು ಸಿಪಿ ಯೋಗಿಶ್ವರ್ ಗೆ ಕ್ಷಮೆ ಕೇಳುತ್ತೇನೆ 
ನಾನು ಹೇಳಿದ ವಿಚಾರಕ್ಕೆ ಬದ್ಧ ಆದರೆ ಬಳಸಿದ ಭಾಷೆ ಸರಿಯಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ ಅವರು ನಮ್ಮ ಭಾಗದವರು ಹಿರಿಯರು ಇದ್ದಾರೆ ಹಾಗೆ ಮಾತನಾಡಬಾರದಿತ್ತು ಎಂದು ಕ್ಷಮೆ ಕೇಳಿದ ಶಾಸಕ ಬಾಲಕೃಷ್ಣ.

Latest Videos
Follow Us:
Download App:
  • android
  • ios