Asianet Suvarna News Asianet Suvarna News

KIADB ಎಲ್ಲಾ ವ್ಯವಹಾರ ವಾದ್ರಾ ಒಡೆತನ ಡಿಎಲ್‌ಎಫ್‌ನಲ್ಲಿ ಆಫೀಸ್‌ನಲ್ಲಿ ನಡೆಯುತ್ತೆ: ಎಚ್‌ಡಿಕೆ ಹೊಸ ಬಾಂಬ್!

ಕೆಐಎಡಿಬಿಯ ಎಲ್ಲಾ ವ್ಯವಹಾರವನ್ನು ಕಾಂಗ್ರೆಸ್ ಸರ್ಕಾರ ರಾಬರ್ಟ್ ವಾದ್ರಾ ಒಡೆತನದ ಡಿಎಲ್‌ಎ ಆಫೀಸ್‌ನಲ್ಲಿ ನಡೆಸುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Formers CM HD Kumaraswamy outraged against DK Shivakumar at ramangara rav
Author
First Published Oct 26, 2023, 12:47 PM IST

ಬೆಂಗಳೂರು (ಅ.26): ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜಟಾಪಟಿ ತಾರಕಕ್ಕೇರಿದೆ.  ನನ್ನ ಜೀವನದ ಕೊನೆ ಅಂತ್ಯ ಕಾಣೋದು ಇದೇ ರಾಮನಗರ ಮಣ್ಣಲ್ಲಿ. ಹುಟ್ಟಿದ್ದು ಹಾಸನದಲ್ಲಿ ಆದರೂ ಬೆಳೆದಿದ್ದು ರಾಮನಗರದಲ್ಲಿ. ಯಾವ ಕಾರಣಕ್ಕೂ ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಬಿಡುವುದಿಲ್ಲ. ನನ್ನ ಹೋರಾಟಕ್ಕೆ ರಾಮನಗರದ ಜನರ ಬೆಂಬಲ ಕೋರುತ್ತೇವೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮನವಿ ಮಾಡಿದರು.

ರಾಮನಗರ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ರಾಮನಗರ ಜಿಲ್ಲೆಯ ಮೆಲೆ ಭಾವನಾತ್ಮಕ ಸಂಬಂಧವಿದೆ. ವ್ಯವಹಾರಿಕ ಸಂಬಂಧವಿಲ್ಲ. ಹಾಗೇ ಹೆಸರು ಬದಲಾವಣೆಯಾದ್ರೆ ಅಮರಣಾಂತ ಉಪವಾಸ ಮಾಡುತ್ತೇನೆ. ಆರೋಗ್ಯ ಸರಿ ಇಲ್ಲದಿದ್ರೂ ಕೊನೆ ತನಕ ಹೋರಾಟ ಮಾಡುತ್ತೇನೆ. ನಾನು ಈ ಚಾಲೆಂಜ್ ಸ್ವೀಕರಿಸುತ್ತೇನೆ ಎಂದು ಬೆಂಚ್ ತಟ್ಟಿ ಜೋರು ಧ್ಚನಿಯಲ್ಲಿ ಗರ್ಜಿಸಿದ ಕುಮಾರಸ್ವಾಮ

ಕ್ಯಾಪ್ಟನ್ ಆಫ್ ದಿ ಶಿಪ್ ಕುಮಾರಣ್ಣ: ಲೋಕಸಭೆಯ ಸನಿಹದಲ್ಲಿ ಇದೆಂಥಾ ಬದಲಾವಣೆ..?

ರಾಮನಗರ ಜಿಲ್ಲೆಯಾಗಿ ಹದಿನೇಳು ವರ್ಷ ಆಯ್ತು, ಈಗ ಯಾಕೆ  ಮಾಡ್ತಿದ್ದಿರ? ರಾಮನಗರ ಹೆಸರು ಇಟ್ಟುಕೊಂಡೇ ಯಾಕೆ ಅಡಿ ಲೆಕ್ಕ ಮಾಡಲು ಆಗ್ತಿಲ್ಲ..? 450 ಕೋಟಿ ಆಸ್ಪತ್ರೆ ಮಾಡಲು ಕನಕಪುರದಲ್ಲಿ ಅವಕಾಶ ಕೊಟ್ಟೆ. 100 ಕೋಟಿ ಕೂಡ ಬಿಡುಗಡೆ ಮಾಡಿದ್ದೆ. ಬಿಜೆಪಿ ಸರ್ಕಾರ ಬಂದಾಗ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದ್ರು. ಕನಕಪುರ ಆಸ್ಪತ್ರೆ ಮಾಡಲು ಈಗ ಹಣ ಬಿಡುಗಡೆ ಮಾಡಿಸಿಕೊಳ್ಳಲಿ. ಮೆಡಿಕಲ್ ಕಾಲೇಜು ಮಾಡಿಕೊಳ್ಳಿ ನಾನು ಅವರನ್ನು ಹಿಡಿದುಕೊಂಡಿದ್ದೇನಾ? ಕನಕಪುರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಟೀಚರ್ ಇಲ್ಲ, ಏನೋ ಶಾಲೆಗೆ ಭೂಮಿ ಕೊಟ್ಟಿದ್ದರಂತೆ. ಬೆಂಗಳೂರಲ್ಲಿ ಉಚಿತ ಕೊಟ್ಟು ಏನ್ ಏನ್ ಮಾಡಿದ್ರು ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಡಿಸಿಎಂ ಶಿವಕುಮಾರ ವಿರುದ್ಧ ಕಿಡಿಕಾರಿದರು.

ಬೆಂಗಳೂರಲ್ಲಿ‌ ರಸ್ತೆ ಗುಂಡಿಗಳು ಹೆಚ್ಚಾಗ್ತಿದೆ ಎಂಬ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಇವರು ಅದಕ್ಕೆ ಬ್ರ್ಯಾಂಡ್ ಬೆಂಗಳೂರು ಮಾಡೋಕೆ ಹೋರಟಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಕೆಐಎಡಿಬಿಯ ಎಲ್ಲಾ ವ್ಯವಹಾರವನ್ನು ಕಾಂಗ್ರೆಸ್ ಸರ್ಕಾರ ರಾಬರ್ಟ್ ವಾದ್ರಾ ಒಡೆತನದ ಡಿಎಲ್‌ಎಫ್ ಆಫೀಸ್‌ನಲ್ಲಿ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಾಜ್ ವೆಸ್ಟ್ ಎಂಡ್ ವಿಚಾರವನ್ನು ಸಿಎಂ ಪದೇಪದೆ ಹೇಳ್ತಾರೆ. ಕುಮಾರಸ್ವಾಮಿ ತಾಜ್ ಹೋಟೆಲ್‌ನಲ್ಲಿದ್ರು ಜನರಿಗೆ ಸಿಗ್ತಿರಲಿಲ್ಲವಂತೆ, ಅವರಿಗೆ ನಾನು ರಾಜಕೀಯ ವಿಲನ್ ಅಂತೆ ಏನೇನೋ ಹೇಳ್ತಾರೆ. ಹೌದು ನಾನು ಅವರಿಗೆ ರಾಜಕೀಯ ವಿಲನ್. ನಾನು 18 ತಿಂಗಳ ಅವದಿಯಲ್ಲಿ ನನ್ನ ಕಾರ್ಯಕಲಾಪಗಳ ದಾಖಲೆ ನಿಮ್ಮ ಮುಂದೆ ಇಟ್ಟಿದ್ದೇನೆ, ಅಧಿವೇಶನದಲ್ಲಿ ಚರ್ಚೆ ಮಾಡ್ತೀನಿ. ದಾಖಲೆ ಮುಂದಿಟ್ಟು ಸಿಎಂ ಸಿದ್ದರಾಮಯ್ಯ ಗೆ ಚಾಲೆಂಜ್ ಹಾಕಿದ ಕುಮಾರಸ್ವಾಮಿ.

ಎಚ್‌ಡಿ ಕುಮಾರಸ್ವಾಮಿ ಮಹಾಭಾರತದ ಶಕುನಿ ಇದ್ದಹಾಗೆ: ಕಾಂಗ್ರೆಸ್ ವಾಗ್ದಾಳಿ

ನಾನು ಕೃಷ್ಣಾದಲ್ಲಿ ಜನರಿಗೆ, ಶಾಸಕರಿಗೆ ಯಾವ ರೀತಿ ಸ್ಪಂದಿಸಿದೆ ಅನ್ನೋ ದಾಖಲೆ ಕೊಡ್ತೀನಿ ನೋಡಿ. ಅವತ್ತು ಕೃಷ್ಣಾದಲ್ಲಿ ನನ್ನನ್ನ ಬಿಕಾರಿ ತರ ಮಾಡಿ ಒಬ್ಬ ಹಿಂಡಿ ಶಾಸಕರು ಯಶ್ವಂತ್ ರಾಯ್ ಪಾಟೀಲ್ ಲೆಟರ್ ಗಳನ್ನ ನನ್ನ ಮೇಲೆ ಎಸಿದಿದ್ರು. ನಾನು ಸಿಎಂ ಅನ್ನೋದು ನೋಡದೆ ಇಸ್ಪೀಟ್ ಎಲೆ ಎಸೆದಂತೆ ಪೊಪೆಟ್ ತರ ನಡೆಸಿಕೊಂಡ್ರು. ಬಿಜೆಪಿಯವರು ಸರ್ಕಾರ ತೆಗೆಯಲಿಕ್ಕೆ ಎಲ್ಲಾ ವೇದಿಕೆ ಸಿದ್ದಮಾಡಿಕೊಟ್ಟಿದ್ದು ಸಿಎಂ, ಡಿಸಿಎಂ ನೀವೆ ಅಲ್ವೆ? ಬಿಜೆಪಿಯವರಿಗೆ ಬಿಲ ಕೊರೆದು ಅವಕಾಶ ಮಾಡಿ ಕೊಟ್ಟಿದ್ದೇ ನೀವು. ಪದೇ ಪದೇ ವೆಸ್ಟ್ ಎಂಡ್ ಹೋಟೆಲ್, ಅಮೇರಿಕಾದಲ್ಲಿ ಕೂತಿದ್ದೆ ಅನ್ನೋದಲ್ಲ. ನಾನು ಅಮೇರಿಕಾ ಗೆ ಹೋಗಿದ್ದು ನಮ್ಮ ಸ್ವಾಮೀಜಿಯವರು ದೇವಸ್ಥಾನ ಉದ್ಘಾಟನೆಗೆ ಕರೆದಿದ್ದಕ್ಕೆ ಸಿಎಂ ಅವರೇ  ನಿಮ್ಮ ಸರಕಾರದ  ಚರಿತ್ರೆ  ಸದನದಲ್ಲಿ ಹೇಳಿದ್ರೆ ಅದಕ್ಕೆ 2 ದಿನ ಬೇಕಾಗುತ್ತೆ ಅಷ್ಟಿದೆ ಎಂದು ವಾಗ್ದಾಳಿ ನಡೆಸಿದ ಎಚ್‌ಡಿಕೆ.

Follow Us:
Download App:
  • android
  • ios