Asianet Suvarna News Asianet Suvarna News

ಮದುರೈ- ಬೆಂಗ್ಳೂರು ವಂದೇ ಭಾರತ್‌ ಪ್ರಾಯೋಗಿಕ ಸಂಚಾರ: 2 ನಗರಗಳ ಮಧ್ಯೆ ಕೇವಲ 6 ಗಂಟೆ ಜರ್ನಿ?

ಎರಡು ನಗರಗಳನ್ನು ಸರಿ ಸುಮಾರು 6 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ರೈಲಿನ ವೇಗ, ನಿಲುಗಡೆ ನಿಲ್ದಾಣ ನಿಗದಿ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರಾಥಮಿಕ ಮಾಹಿತಿಯಂತೆ ರೈಲು ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ ಹೊಸೂರು ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ. 

Madurai Bengaluru Vande Bharat Trial Run Conducted grg
Author
First Published Jun 18, 2024, 7:41 AM IST

ಬೆಂಗಳೂರು(ಜೂ.18):  ರಾಜ್ಯದ 8ನೇ ವಂದೇ ಭಾರತ್ ರೈಲು ಸೋಮವಾರ ಮದುರೈ- ಸರ್‌ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಮೊದಲ ಪ್ರಾಯೋಗಿಕ ಸಂಚಾರ ನಡೆಸಿತು. ಸೋಮವಾರ ಬೆಳಗ್ಗೆ 5.15ಕ್ಕೆ ಮಧುರೈ ನಿಲ್ದಾಣದಿಂದ ಹೊರಟು ಬೆಂಗಳೂರನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿ ಪುನಃ ತೆರಳಿತು. 

ಎರಡು ನಗರಗಳನ್ನು ಸರಿ ಸುಮಾರು 6 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ರೈಲಿನ ವೇಗ, ನಿಲುಗಡೆ ನಿಲ್ದಾಣ ನಿಗದಿ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರಾಥಮಿಕ ಮಾಹಿತಿಯಂತೆ ರೈಲು ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ ಹೊಸೂರು ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ. 

ವಂದೇ ಭಾರತ್ ರೈಲಿನಲ್ಲಿ ಸ್ಮೋಕ್‌ ಸೆನ್ಸಾರ್‌, ಸಿಗರೇಟ್ ಸೇದಿದ್ರೆ ಹೊಡಕೊಳ್ಳುತ್ತೆ ಅಲಾರಂ, ಬೀಳುತ್ತೆ ಫೈನ್!

ವಿಸ್ತರಣೆಗೆ ಒತ್ತಾಯ

ಮಧುರೈ-ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲಿನಿಂದ ರಾಜ್ಯದವರಿಗೆ ಹೆಚ್ಚು ಪ್ರಯೋಜನ ಆಗಲಾರದು. ಧಾರ್ಮಿಕ ಯಾತ್ರಾ ಕ್ಷೇತ್ರ ಮಧುರೈ, ತಮಿಳುನಾಡಿಗೆ ಹೋಗುವವರಿಗೆ ಅನುಕೂಲ. ಕೃಷ್ಣರಾಜಪುರ, ಬಂಗಾರಪೇಟೆಯಲ್ಲಿ ನಿಲುಗಡೆ ಆದಲ್ಲಿ ಬೆಂಗಳೂರು, ಕೋಲಾರದವರಿಗೆ ಪ್ರಯೋಜನ ಆಗುತ್ತದೆ. ಜೊತೆಗೆ ಎಸ್‌ಎಂವಿಟಿ ಬದಲು ಕೆಎಸ್‌ಆರ್, ಯಶವಂತಪುರ ಅಥವಾ ಕಂಟೋನ್ವೆಂಟ್ ರೈಲ್ವೆ ನಿಲ್ದಾಣದವರೆಗೆ ತಂದಲ್ಲಿ ಒಂದಿಷ್ಟು ಅನುಕೂಲ ಆಗಲಿದೆ ಎಂದು ರೈಲ್ವೆ ಸಾರಿಗೆ ತಜ್ಞ ಕೃಷ್ಣಪ್ರಸಾದ್ ಹೇಳಿದರು.

Latest Videos
Follow Us:
Download App:
  • android
  • ios