Asianet Suvarna News Asianet Suvarna News

ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು, ನಾಪತ್ತೆಯಾಗಿದ್ದ ಶಿಕ್ಷಕಿ ಅನ್ಯಕೋಮಿನ ಯುವಕನೊಂದಿಗೆ ಹಾಜರು!

ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿಬಂದಿರುವ ಹಿನ್ನೆಲೆ ಲವ್ ಜಿಹಾದ್ ಖಂಡಿಸಿ ವಿಶ್ವ ಹಿಂದೂ ಪರಿಷತ್‌ನಿಂದ ಬದಿಯಡ್ಕ ಗಣೇಶ ಮಂದಿರದಿಂದ ಪೊಲೀಸ್ ಠಾಣೆವರೆಗೆ ಕಾರ್ಯಕರ್ತರು ಮಾರ್ಚ್ ನಡೆಸಿದರು.

Love jihad allegation in Kasaragod VHP activists outraged against badiyadka police rav
Author
First Published Jun 1, 2024, 4:33 PM IST

ಕಾಸರಗೋಡು (ಜೂ.1) ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿಬಂದಿರುವ ಹಿನ್ನೆಲೆ ಲವ್ ಜಿಹಾದ್ ಖಂಡಿಸಿ ವಿಶ್ವ ಹಿಂದೂ ಪರಿಷತ್‌ನಿಂದ ಬದಿಯಡ್ಕ ಗಣೇಶ ಮಂದಿರದಿಂದ ಪೊಲೀಸ್ ಠಾಣೆವರೆಗೆ ಕಾರ್ಯಕರ್ತರು ಮಾರ್ಚ್ ನಡೆಸಿದರು.

ಠಾಣೆಯ ಎದುರು ಜಮಾಯಿಸಿದ ಕಾರ್ಯಕರ್ತರು ಕೇರಳ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು ಬಳಿಕ ವೇಳೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯಿತು. ಲವ್ ಜಿಹಾದ್ ಗೆ ಬದಿಯಡ್ಕ ಪೊಲೀಸರೇ ಸಾಥ್ ನೀಡ್ತಿರೋದಾಗಿ ವಿಎಚ್ ಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು? ಮುಸ್ಲಿಂ ಲೀಗ್ ನೇತಾರನ ಷಡ್ಯಂತ್ರ ಎನ್ನುತ್ತಿದೆ ವಿಎಚ್‌ಪಿ!

ಏನಿದು ಲವ್ ಜಿಹಾದ್ ಪ್ರಕರಣ?

 ಬದಿಯಡ್ಕದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಯುವತಿ ನೇಹಾ ಮೇ.23ರಂದು ಮನೆಯಿಂದ ಹೊರಟವಳು ವಾಪಸ್ ಆಗದೇ ದಿಢೀರ್ ನಾಪತ್ತೆಯಾಗಿದ್ದಳು. ಹೀಗೆ ನಾಪತ್ತೆಯಾಗಿದ್ದ ಯುವತಿ ಅನ್ಯಮತೀಯ ಯುವಕ ಮಿರ್ಶಾದ್ ಎಂಬ ಯುವಕನೊಂದಿಗೆ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿ ಮೇ.27ರಂದು ಬದಿಯಡ್ಕ ಠಾಣೆಗೆ ಹಾಜರಾಗಿದ್ದಳು.

ಏನೂ ತಿಳಿಯದ ಪ್ರಾಯದಲ್ಲಿ ಪ್ರೀತಿ-ಪ್ರೇಮ, ಮನೆಯಲ್ಲಿ ಗೊತ್ತಾಗಿದ್ದಕ್ಕೆ ಓಡಿ ಹೋದ ಹಿಂದೂ-ಮುಸ್ಲಿಂ ಅಪ್ರಾಪ್ತ ಜೋಡಿ!

ವ್ಯವಸ್ಥಿತ ಷಡ್ಯಂತ್ರ?

ಲವ್ ಜಿಹಾದ್ ಗೆ ಕೇರಳದ ಮುಸ್ಲಿಂಲೀಗ್ ನೇತಾರನ ಷಡ್ಯಂತ್ರ ಆರೋಪ ಕೇಳಿಬಂದಿದೆ. ಮುಸ್ಲಿಂ ನೇತಾರನೊಬ್ಬ ಷಡ್ಯಂತ್ರ ರೂಪಿಸಿ ಪ್ರೇಮಾಂಕುರವಾಗುವಂತೆ ಮಾಡಿದ್ದಾನೆ. ಅದರಂತೆ ಮದುವೆಯಾಗಿರುವ ಯುವತಿಯನ್ನ ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಭಾರೀ ಸಂಚು ರೂಪಿಸಿದ್ದ ಆರೋಪವೂ ಕೇಳಿಬಂದಿದೆ. ಈ ಪ್ರಕರಣವು ಕಾಸರಗೋಡು ಜಿಲ್ಲೆಯಲ್ಲೂ ಲವ್‌ ಜಿಹಾದ್‌ ಸಕ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಬದಿಯಡ್ಕ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios