ಕೇಂದ್ರ ಸರ್ಕಾರದ ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಮತ್ತು ಗುಜರಿ ನೀತಿ ಜಾರಿಗೊಳಿಸುವ ಮೂಲಕ ಸರಕು ಸಾಗಾಣಿಕೆ ವಾಹನಗಳ ಮಾಲೀಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡಿ ಉದ್ಯಮ ಏಳಿಗೆಗೆ ಮಾರಕವಾಗಿದೆ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಆರೋಪಿಸಿದ್ದಾರೆ.

ಬೆಂಗಳೂರು (ಡಿ.19) : ಕೇಂದ್ರ ಸರ್ಕಾರದ ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಮತ್ತು ಗುಜರಿ ನೀತಿ ಜಾರಿಗೊಳಿಸುವ ಮೂಲಕ ಸರಕು ಸಾಗಾಣಿಕೆ ವಾಹನಗಳ ಮಾಲೀಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡಿ ಉದ್ಯಮ ಏಳಿಗೆಗೆ ಮಾರಕವಾಗಿದೆ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಆರೋಪಿಸಿದ್ದಾರೆ.

ಭಾನುವಾರ ಬಸವನಗುಡಿ ರಸ್ತೆಯಲ್ಲಿರುವ ಮರಾಠಾ ಹಾಸ್ಟೆಲ್‌ ಆವರಣದಲ್ಲಿ ನಡೆದ ದಿ ಬೆಂಗಳೂರು ಲೋಕಲ್‌ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಸುವರ್ಣ ಮಹೋತ್ಸವ ಮತ್ತು ರಾಜ್ಯಲಾರಿ ಮಾಲಿಕರ ಸಮ್ಮೇಳನದದಲ್ಲಿ ಅವರು ಮಾತನಾಡಿದರು.

Bengaluru: ಐಟಿ-ಬಿಟಿ ಉದ್ಯಮಿಗಳ ಜತೆ ಕೇಂದ್ರ ಸಚಿವ ಸಭೆ

ಪ್ರಸ್ತುತ ಇರುವ ಮೋಟಾರು ವಾಹನ ಕಾಯ್ದೆಯು, ಸರಕು ಸಾಗಾಣಿಕೆ ವಾಹನಗಳ ಮಾಲಿಕರಿಗೆ ಸಂಪೂರ್ಣ ವಿರುದ್ಧವಾಗಿದೆ. ಅಲ್ಲದೆ ಬದಲಾದ ಕೆಲವು ವ್ಯವಸ್ಥೆಗಳಿಂದಾಗಿ, ಲಾರಿ ಮಾಲಿಕರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ರಸ್ತೆ ಸುರಕ್ಷತೆಯ ಹೆಸರಲ್ಲಿ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಕನಿಷ್ಠ .5,000 ದಿಂದ 20,000ಕ್ಕೆ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ನಿಯಮದಿಂದ ಪರಿಸ್ಥಿತಿ ಸುಧಾರಿಸಿಲ್ಲ, ಅಪಘಾತ, ಸಾವು ನೋವುಗಳ ಪ್ರಮಾಣದಲ್ಲೂ ಯಾವುದೇ ನಿಯಂತ್ರಣ ಕಂಡುಬಂದಿಲ್ಲ ಎಂದರು.

ಗುಜರಿ ನೀತಿ ವಿಷಾದನೀಯ:

ಹಳೆಯ ವಾಹನಗಳು ಸುವ್ಯವಸ್ಥೆಯಲ್ಲಿವೆಯೋ ಇಲ್ಲವೋ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ಧಾರ ಮಾಡಬಹುದಾಗಿದೆ. ಸುವ್ಯವಸ್ಥೆಯಲ್ಲಿರುವ ವಾಹನಗಳಿಗೆ ಮಾತ್ರ ಅರ್ಹತಾ ಪತ್ರ, ನವೀಕರಣ ಪತ್ರ ನೀಡಬೇಕು. ಇಲ್ಲವಾದಲ್ಲಿ ನಿರಾಕರಿಸಬೇಕು. ಆದರೆ, ಕೇಂದ್ರ ಸರ್ಕಾರ 15 ವರ್ಷ ಹಳೆಯದಾದ ವಾಹನಗಳಿಗೆ ಗುಜರಿ ನೀತಿ ಜಾರಿ ಮಾಡಿರುವುದು ವಿಷಾದನೀಯ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ವಾಹನ ಖರೀದಿಸಿರುವವರಿಗೆ ಇದು ಆರ್ಥಿಕವಾಗಿ ಹೊರೆಯಾಗಲಿದೆ. ಅಷ್ಟೇ ಅಲ್ಲದೆ ಹಳೆಯ ವಾಹನಗಳ ರಿಪೇರಿ ಉದ್ಯೋಗ, ಬಿಡಿ ಭಾಗಗಳ ವ್ಯಾಪಾರಿ ಅಂಗಡಿಯನ್ನೇ ನಂಬಿಕೊಂಡು ಲಕ್ಷಾಂತರ ಮೆಕಾನಿಕ್ಸ್‌ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈಗಷ್ಟೇ ಕೊರೊನಾ ಸಂದಿಗ್ಧ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಇಂಥವರಿಗೆ ಗುಜರಿ ನೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು. ಸಾರಿಗೆ ಆಯುಕ್ತ ಎಸ್‌.ಎನ್‌. ಸಿದ್ದರಾಮಪ್ಪ, ಅಸೋಸಿಯೇಷನ್‌ನ ಅಧ್ಯಕ್ಷ ಸಿ. ನವೀನ್‌ ರೆಡ್ಡಿ, ಉಪಾಧ್ಯಕ್ಷ ಎನ್‌.ಶ್ರೀನಿವಾಸ ರಾವ್‌ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮತ್ತಿಕೆರೆ ನೇತಾಜಿ ವೃತ್ತದಲ್ಲಿ ಅತ್ಯಾಧುನಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

ಸಮ್ಮೇಳನದ ಹಕ್ಕೋತ್ತಾಯಗಳು

  • ಕೇಂದ್ರ ಸರ್ಕಾರ ತೆರಿಗೆ ಪಾವತಿಯನ್ನು ಮಾತ್ರ ಗಣಕೀಕೃತ ಮಾಡಿದ್ದು, ಉಳಿದ ಎಲ್ಲಾ ಸೇವೆಗಳನ್ನೂ ಗಣಕೀಕೃತ ಗೊಳಿಸಬೇಕು. ಇದರಿಂದ ಲಾರಿ ಮಾಲೀಕರು ಪದೇ ಪದೇ ಸಾರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ.
  • ಹಳೆಯ ವಾಹನಗಳಿಗೆ ಗ್ರೀನ್‌ ಟ್ಯಾಕ್ಸ್‌ ಹೇರುವುದು, ಥರ್ಡ್‌ ಪಾರ್ಟಿ ವಿಮೆ ಕಂತನ್ನು ಪ್ರತಿ ವರ್ಷ ಏರಿಸುತಿರುವ ಬಗ್ಗೆ ವಾಹನ ಮಾಲೀಕರ ಸಂಘಗಳೊಂದಿಗೆ ಜಂಟಿ ನಡೆಸಿ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಪಡೆದು ಆ ಬಳಿಕ ಹೊಸ ನೀತಿ ನಿಯಮಗಳನ್ನು ಜಾರಿಗೊಳಿಸಬೇಕು.
  • ಭಾರತ್‌ 6 (ಬಿಎಸ್‌6) ಇಂಜಿನ್‌ ಇದ್ದರೆ ಮಾತ್ರ ಹೊಸ ವಾಹನಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದರೆ ಭಾರತ್‌6ಗೆ ಬೇಕಾದ ಇಂಧನ ಪೂರೈಕೆಗೆ ಆದ್ಯತೆ ನೀಡಬೇಕು.
  • ಗುಜರಿ ನೀತಿ ಪ್ರಕಾರ ಗುಜರಿಗೆ ಹಾಕುವ ವಾಹನಗಳಿಗೆ ನಿರ್ದಿಷ್ಟಬೆಲೆ ನಿಗದಿಪಡಿಸಬೇಕು.