Asianet Suvarna News Asianet Suvarna News

ಸಿದ್ದರಾಮಯ್ಯಗೆ ಒಂದು ನ್ಯಾಯ, ಯಡಿಯೂರಪ್ಪಗೆ ಒಂದು ನ್ಯಾಯಾನಾ? ಸಿಎಂ ರಾಜೀನಾಮೆ ನೀಡಲಿ ಎಂದ ಆರ್.‌ಅಶೋಕ್‌!

prosecution on Siddaramaiah ಮುಡಾ ಕೇಸ್‌ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲಿಯೇ, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

LOP R Ashok On governor Grants permission to prosecution on Siddaramaiah san
Author
First Published Aug 17, 2024, 11:56 AM IST | Last Updated Aug 17, 2024, 11:56 AM IST

ಬೆಂಗಳೂರು (ಆ.17): ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲಿಯೇ ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿದ್ದು, ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. 'ಮುಡಾ ಪ್ರಚಲಿತದಲ್ಲಿರುವ ವಿಚಾರ. ಜನರಲ್ಲಿ ಗೊಂದಲವಿತ್ತು. ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಲು ಅವಕಾಶ ಕೂಡ ನೀಡಲಾಗಿತ್ತು. ನಿಲುವಳಿ ಸೂಚನೆ ಮೇಲೆ ಚರ್ಚೆ ಮಾಡಿ ಜನರ ಗೊಂದಲ ಬಗೆಹರಿಸಬೇಕಿತ್ತು. ಆದರೆ, ಸಿಎಂ ಸಿದ್ಧರಾಮಯ್ಯ ಓಡಿ ಹೋಗಿದ್ದರೆ. ಹೀಗಾಗಿ ಜನರಲ್ಲಿ ಮತ್ತಷ್ಟು ಗೊಂದಲ ಆಯ್ತು. ನಾವು ಎಲ್ಲಾ ದಾಖಲೆ ಸಂಗ್ರಹ ಮಾಡಿದ್ದೆವು. ಒಂದು ರೂಪಾಯಿ ಪಡೆದ ಭೂಮಿ ಐದು ಲಕ್ಷಕ್ಕೆ ಪಡೆದು, 62 ಕೋಟಿ ಹೇಗೆ ಆಯ್ತು. ಸಿದ್ದರಾಮಯ್ಯ ಹಸ್ತಕ್ಷೇಪ ಕಾಣ್ತಿದೆ. ಬಡ ರೈತನಿಗೆ ವಿಧಾನಸೌಧಕ್ಕೆ ಬಂದು ಡಿನೋಟಿಫಿಕೇಶನ್ ಮಾಡೋಕೆ ಆಗುತ್ತದೆಯೇ ಇದು ಹೇಗೆ ಡಿನೋಟಿಫೈ ಆಯ್ತು ಎಂದು ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

ಸಿಎಂ ವಿರುದ್ಧ ಕೇಸ್ ಹಾಕುವಾಗ ಅನುಮತಿ ಬೇಕು. ಈಗ ಅದನ್ನು ರಾಜ್ಯಪಾಲರು ನೀಡಿದ್ದಾರೆ. ನಮ್ಮ ಪಾದಯಾತ್ರೆ ಯಶಸ್ವಿ ಆಗಿದೆ. ನಮ್ಮ ಹೋರಾಟ ವ್ಯಕ್ತಿ ವಿರುದ್ಧ ಅಲ್ಲ. ಅಕ್ರಮ ಹೊರಬರಬೇಕು. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಸತ್ಯಾಸತ್ಯತೆ ಹೊರಬರಲಿ. ಇದು ಸೈಟ್ ಗಾಗಿ ಕಾಯುತ್ತಿದ್ದ 86 ಸಾವಿರ ಜನರಿಗೆ ಸಿಕ್ಕ ಜಯ. ಮುಡಾ ಹಗರಣದಲ್ಲಿ ಚರ್ಚೆ ಆಗುತ್ತಿದೆ. ಕಾಂಗ್ರೆಸ್‌ನದ್ದು ಇಂಥ ನೂರಾರು ಪ್ರಕರಣ ಇದೆ. ದ್ವೇಷದ ರಾಜಕೀಯ ಮಾಡಿದ್ದರೆ, ಎಲ್ಲಾರೂ ದ್ವೇಷದ ರಾಜಕೀಯ ಮಾಡಬೇಕಾಗುತ್ತದೆ. ನಾವು ಅಧಿಕಾರ ನಡೆಸಿದ್ದು ಕಡಿಮೆ. ಕಾಂಗ್ರೆಸ್ ಹೆಚ್ಚು ಅಧಿಕಾರ ನಡೆಸಿದೆ ಎಂದು ಅಶೋಕ್‌ ಹೇಳಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ನಾವು ಈಗಾಗಲೇ ಹೇಳಿದ್ದೇವೆ. ಈಗ ಮತ್ತೊಮ್ಮೆ ನಾವು ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಅನ್ನೋದೇ ನಮ್ಮ ಅಜೆಂಡಾ. ಆಗ ಯಡಿಯೂರಪ್ಪ ಮೇಲೆ ವಿಚಾರಣೆಗೆ ಅನುಮತಿ ನೀಡಿತ್ತು. ಆಗ ಅದು ಕಾಂಗ್ರೆಸ್ ಕೈವಾಡ ಎಂದಿದ್ವಾ? ಈಗ ಸಿದ್ದರಾಮಯ್ಯಗೆ ಮಾತ್ರ ಒಂದು ನ್ಯಾಯನಾ? ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ನೈತಿಕತೆ ಜವಬ್ದಾರಿ ಇದೆ. ಅವರು ರಾಜೀನಾಮೆ ನೀಡುತ್ತಾರೆ ಎಂದು ಭಾವಿಸುತ್ತೇವೆ. ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, 'ಗೌರವಾನ್ವಿತ ರಾಜ್ಯಪಾಲರು ತಮ್ಮ ಸಂವಿಧಾನ ದತ್ತ ಅಧಿಕಾರ ಚಲಾಯಿಸಿ ಮುಖ್ಯಮಂತ್ರಿಗಳ  ಮುಡಾ ಹಗರಣದ ದೂರಿಗೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಸಾಕಷ್ಟು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಭಂಡತನ ಪ್ರದರ್ಶಿಸುತ್ತಿದ್ದ ಸಿದ್ಧರಾಮಯ್ಯನವರು ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ  ಉಳಿಸಲಿ ಎಂದು ಬರೆದಿದ್ದಾರೆ.

ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಹಿತ ಶತ್ರುಗಳ ಮಾತು ಕೇಳಿದ ಪರಿಣಾಮ ಈ ರೀತಿಯಾಗಿದೆ. ಕಾನೂನು ಸಲಹೆಗಾರ ಸರಿಯಾದ ಮಾಹಿತಿಯನ್ನ ಸಿಎಂಗೆ ನೀಡಿಲ್ಲ. ಅವರು ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ 14 ನಿವೇಶನಗಳನ್ನ ಹಿಂದಿರಿಗಿಸಿ ಮುಡಾ ಕಮಿಷನರ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕಿತ್ತು. ಸಿಎಂ ವಿರುದ್ಧ ಆರೋಪ ಮಾಡಬೇಕಾದರೇ ಸಾಕಷ್ಟು ಬಾರಿ ಪರಿಶೀಲನೆ ನಡೆಸಿಯೇ ಆರೋಪ ಮಾಡಿದ್ದೆವು. ಎಲ್ಲಾ ದಾಖಲೆಗಳು ಸಿಎಂ ವಿರುದ್ಧವಾಗಿದೆ. ಸಿಎಂ ವಿರುದ್ದ ಹೋರಾಟಕ್ಕೆ ನನಗೆ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ. ಹೈ ಕೋರ್ಟ್ ನಲ್ಲಿ ಸಿಎಂಗೆ ಯಾವುದೇ ಕಾರಣಕ್ಕೂ ಸ್ಟೇ ಸಿಗುವುದಿಲ್ಲ ಎಂದು ಹೇಳಿದ್ದಾರೆ.

MUDA SCAM: ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ, ರಾಜ್ಯಪಾಲರು ಕೇಂದ್ರದ ಕೈಗೊಂಬೆ: ಸಿಎಂ ಪರ ಎಂಬಿ ಪಾಟೀಲ್‌ ಬ್ಯಾಟಿಂಗ್‌!

ಮುಡಾ ವಿಚಾರದಲ್ಲಿ ಸಿಎಂ ಎಡವಿದ್ದಾರೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ,  ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ.  ಕಾಂಗ್ರೆಸ್ ರಾಷ್ಟ್ರೀಯ ಪಕ್ಷ, ಅವರು ರಾಜೀ‌ನಾಮೆ ಪಡೆಯುತ್ತಾರೆ ಎಂದು ಕೊಂಡಿದ್ದೇನೆ ಎಂದು ಹೇಳಿದ್ದಾರೆ.

MUDA Scam: ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ನಂತರ ಮುಂದೇನು?

Latest Videos
Follow Us:
Download App:
  • android
  • ios