ನನ್ನ ಸ್ಪರ್ಧೆ ಸದ್ಯಕ್ಕೆ ಸಸ್ಪೆನ್ಸ್‌: ಸುಮಲತಾ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ವಿಚಾರ ಸದ್ಯಕ್ಕೆ ಸಸ್ಪೆನ್ಸ್‌. ನನ್ನ ನಿರ್ಧಾರವನ್ನು ಈಗಲೇ ಹೇಳೋಲ್ಲ. ಅದನ್ನು ಸಸ್ಪೆನ್ಸ್ ಆಗಿಯೇ ಇಡುತ್ತೇನೆ. ಮಂಡ್ಯ ಚುನಾವಣೆ ಅಂದರೆ ಸಸ್ಪೆನ್ಸ್‌, ಥ್ರಿಲ್ಲರ್ ಆಗಿಯೇ ಇರುತ್ತೆ. ಈಗಲೂ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರಲಿ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್‌ ತಮ್ಮ ಸ್ಪರ್ಧೆಯ ವಿಚಾರದ ಗುಟ್ಟು ಬಿಟ್ಟುಕೊಡಲಿಲ್ಲ.

Loksabha election My contest  is in suspense for now says Sumalatha at kr pete

ಕೆ.ಆರ್‌.ಪೇಟೆ (ಅ.12) :  ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ವಿಚಾರ ಸದ್ಯಕ್ಕೆ ಸಸ್ಪೆನ್ಸ್‌. ನನ್ನ ನಿರ್ಧಾರವನ್ನು ಈಗಲೇ ಹೇಳೋಲ್ಲ. ಅದನ್ನು ಸಸ್ಪೆನ್ಸ್ ಆಗಿಯೇ ಇಡುತ್ತೇನೆ. ಮಂಡ್ಯ ಚುನಾವಣೆ ಅಂದರೆ ಸಸ್ಪೆನ್ಸ್‌, ಥ್ರಿಲ್ಲರ್ ಆಗಿಯೇ ಇರುತ್ತೆ. ಈಗಲೂ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರಲಿ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್‌ ತಮ್ಮ ಸ್ಪರ್ಧೆಯ ವಿಚಾರದ ಗುಟ್ಟು ಬಿಟ್ಟುಕೊಡಲಿಲ್ಲ.

ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲ ಸೂಚಿಸಿದ್ದೇನೆ. ಆ ಬೆಂಬಲ‌ ಈಗಲೂ ಇದೆ. ಮುಂದೆಯೂ ಇರುತ್ತದೆ. ಮೈತ್ರಿ ವಿಚಾರವಾಗಿ ವರಿಷ್ಠರು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಮಾಡಬೇಕು. ಚುನಾವಣೆ ಬಂದಾಗ ಕಾರ್ಯಕರ್ತರು ಮತ್ತು ಮುಖಂಡರು ಮುಖ್ಯ. ಸೀಟು ಹಂಚಿಕೆ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ಇಲ್ಲದಿದ್ದರೆ ಫಲಿತಾಂಶ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

 

ಸಂಕಷ್ಟದಲ್ಲಿ ಕರ್ನಾಟಕ ರೈತರು; ಕೇಂದ್ರ ಜಲಶಕ್ತಿ ಸಚಿವರರೊಂದಿಗೆ ಸಂಸದೆ ಸುಮಲತಾ ಅಂಬರೀಶ್ ಚರ್ಚೆ

2019ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅವರೇ (ಜೆಡಿಎಸ್‌ ಶಾಸಕರು) ಇದ್ದರು. ಆದರೆ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳದ ಕಾರಣ ಫಲಿತಾಂಶ ವ್ಯತಿರಿಕ್ತವಾಗಿ ಬಂದಿತು. ಹೀಗಾಗಿ ಇದನ್ನು ರಾಷ್ಟ್ರೀಯ ನಾಯಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಮೈತ್ರಿ ಎನ್ನುವುದು ಬೆಂಬಲ ಅಷ್ಟೇ. ಎನ್‌ಡಿಎ ಒಕ್ಕೂಟದಲ್ಲಿ ಕೇವಲ ಜೆಡಿಎಸ್ ಮಾತ್ರ ಇಲ್ಲ. ಸಾಕಷ್ಟು ಪಕ್ಷಗಳಿವೆ. ಮೈತ್ರಿಯೇ ಬೇರೆ. ಸೀಟು ಹಂಚಿಕೆಯೇ ಬೇರೆ ಎಂದು ಹೇಳಿದರು.

ಕಾವೇರಿ ವಿಚಾರವನ್ನು ರಾಜಕೀಯವಾಗಿ ಮಾತನಾಡೋಲ್ಲ: ಸುಮಲತಾ

- ಸಚಿವ ಎನ್‌.ಚಲುವರಾಯಸ್ವಾಮಿ ಬಗ್ಗೆ ನನಗೆ ಗೌರವವಿದೆ

ಕಾವೇರಿ ನದಿ ನೀರು ನೀರು ಹಂಚಿಕೆ ವಿಚಾರವಾಗಿ ನಾನು ಕಾನೂನಾತ್ಮಕವಾಗಿ ಮಾತನಾಡುತ್ತೇನೆಯೇ ವಿನಃ ರಾಜಕೀಯವಾಗಿ ಮಾತನಾಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದೇನೆ ನಿಜ. ಕಾವೇರಿ ರಕ್ಷಣೆಗಾಗಿ ಅಂಬರೀಶ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಂದು ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್ ಸಿಂಗ್ ಏಕೆ ಮಧ್ಯಪ್ರವೇಶ ಮಾಡಲಿಲ್ಲ. ಇದಕ್ಕೆ ಚಲುವರಾಯಸ್ವಾಮಿ ಅವರು ಉತ್ತರ ಕೊಡಬೇಕಲ್ಲವೇ. ನನಗೆ ಚಲುವರಾಯಸ್ವಾಮಿ ಬಗ್ಗೆ ಗೌರವವಿದೆ ಎಂದೂ ಹೇಳಿದರು.

 

Mandya news: ತಮಿಳನಾಡಿಗೆ ಕಾವೇರಿ ನೀರು : ಮಂಡ್ಯದಲ್ಲಿಂದು ಸುಮಲತಾ, ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್‌ನವರಿಗೂ ಪ್ರಧಾನಮಂತ್ರಿ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲವೆಂಬ ವಿಚಾರ ಗೊತ್ತಿದೆ. ಗೊತ್ತಿದ್ದರೂ ಅವರು ಆರೋಪ ಮಾಡುತ್ತಿದ್ದಾರೆ. ನಾನು ಕಾನೂನು ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ಮೋದಿ ಅವರಿಗೆ ಪಿಆರ್‌ಓ ಸಾವಿರಾರು ಜನ ಇದ್ದಾರೆ. ಅವರ ಪರವಾಗಿ ಮಾತನಾಡುವ ಅವಶ್ಯಕತೆ ನನಗಿಲ್ಲಲ. ತಮ್ಮ ಕೈಯಲ್ಲಿ ಆಗದಿದ್ದಕ್ಕೆ ಬೇರೆಯವರ ಮೇಲೆ ಆರೋಪ ಮಾಡುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿಗೆ ಟಾಂಗ್ ಕೊಟ್ಟರು.

Latest Videos
Follow Us:
Download App:
  • android
  • ios