ಸಿದ್ದರಾಮಯ್ಯ ಕ್ಷೇತ್ರದಲ್ಲಿ ಈಶ್ವರಪ್ಪ ರಣಕಹಳೆ : ಯಾರ ತೆಕ್ಕೆಗೆ ಬಾಗಲಕೋಟೆ..?

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದು, ಇದೀಗ ಬಿಜೆಪಿ ಮುಖಂಡ ಈಶ್ವರಪ್ಪ ಸಿದ್ದರಾಮಯ್ಯ ಕ್ಷೇತ್ರದಿಂದಲೇ ರಣಕಹಳೆ ಆರಂಭಿಸುತ್ತಿದ್ದಾರೆ. 

Loksabha Election 2019 KS Eshwarappa to enter politics of Bagalkote which is dominated by Siddaramaiah

ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ತಮ್ಮ ಕಸರತ್ತು ಆರಂಭಿಸಿವೆ. ಅಭ್ಯರ್ಥಿಗಳ ಆಯ್ಕೆ ಚುನಾವಣಾ ಪ್ರಚಾರಕ್ಕೆ ಈಗಾಗಲೇ ಭರ್ಜರಿ ತಯಾರಿಯೂ ಆರಂಭವಾಗಿದೆ. 

ಇನ್ನು ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮತ ಕ್ಷೇತ್ರದಿಂದಲೇ ಲೋಕಸಭಾ ಚುನಾವಣೆ  ರಣಕಹಳೆಗೆ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮುಂದಾಗಿದ್ದಾರೆ. 

ಹಾಸನ ದೋಸ್ತಿ-ಕುಸ್ತಿ: 'ದೇವೇಗೌಡ್ರು ಓಕೆ, ಪ್ರಜ್ವಲ್ ಸ್ಪರ್ಧಿಸಿದ್ರೆ ಬೆಂಬಲ ಇಲ್ಲ

ಈ ಬಾರಿ ಬಾಗಲಕೋಟೆ ಕ್ಷೇತ್ರವು ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ನಡುವಿನ ಜುಗಲ್ ಬಂದಿಗೆ ಸಾಕ್ಷಿಯಾಗಲಿದ್ದು,  ಫೆ. 18ರ ಸೋಮವಾರದಿಂದ ಬಿಜೆಪಿ ಮುಖಂಡ ಈಶ್ವರಪ್ಪ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಲಿದ್ದಾರೆ. ‌

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಕೆ. ಎಸ್. ಈಶ್ವರಪ್ಪ ಮೂರು ದಿನ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ವಿಧಾನಸಭಾವಾರು ಪ್ರವಾಸ, ಪಕ್ಷ ಸಂಘಟನೆ, ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. 

ಸಿದ್ದರಾಮಯ್ಯ ಕ್ಷೇತ್ರವಾದ ಬದಾಮಿ ವಿಧಾನಸಭಾ ಕ್ಷೇತ್ರದಿಂದಲೇ  ಈಶ್ವರಪ್ಪ ಪ್ರವಾಸ ಆರಂಭ ಮಾಡುತ್ತಿದ್ದು, ಇಲ್ಲಿನ ಪ್ರಮುಖ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. 

ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್‌ ಯೋಗಿ?

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿದ್ದು, ಸತತ ಮೂರು ಬಾರಿ ಬಾಗಲಕೋಟೆ  ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ ಗದ್ದಿಗೌಡರ ಗೆಲುವು ಸಾಧಿಸಿದ್ದು, ಈ ಬಾರಿಯೂ ಮತ್ತೊಮ್ಮೆ ವಿಜಯ ಪತಾಕೆ ಹಾರಿಸಲು ತಯಾರಿ ನಡೆಸುತ್ತಿದೆ. 

ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರವು ಸಿದ್ದರಾಮಯ್ಯಗೆ ಪ್ರತಿಷ್ಠೆಯ ಕಣವಾಗಿದ್ದು, ಆದರೆ ಬಿಜೆಪಿ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ.

Latest Videos
Follow Us:
Download App:
  • android
  • ios