ಬೆಳ್ಳಂ ಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು: ರಾಜ್ಯಾದ್ಯಂತ ಲೋಕಾ ರೇಡ್‌..!

ರಾಜ್ಯದ 9 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 11 ಪ್ರಕರಣಗಳಲ್ಲಿ 9 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. 100 ಅಧಿಕಾರಿಗಳ ತಂಡ ರಾಜ್ಯದ 56 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. 

lokayukta raid on corrupt officers residences in karnataka on july 11th 2024 grg

ಬೆಂಗಳೂರು(ಜು.11):  ಇಂದು(ಗುರುವಾರ) ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಶಾಕ್ ಕೊಟ್ಟಿದ್ದಾರೆ. ಹೌದು, ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 

9 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 11 ಪ್ರಕರಣಗಳಲ್ಲಿ 9 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. 100 ಅಧಿಕಾರಿಗಳ ತಂಡ ರಾಜ್ಯದ 56 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. 

ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ನಿವಾಸದಲ್ಲಿ 24 ಗಂಟೆಯಿಂದ ಮುಂದುವರೆದ ಇಡಿ ದಾಳಿ

ಕಲಬುರಗಿ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಮಂಡ್ಯ, ದಾವಣಗೆರೆ, ಕೋಲಾರ, ಮೈಸೂರು, ಹಾಸನ ಹಾಗೂ ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಮಂಡ್ಯ

ಆದಾಯಕ್ಕೂ ಮೀರಿ ಆಸ್ತಿ ಸಂಪದಾನೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಇಇ ಶಿವರಾಜು. ಎಸ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಮಂಡ್ಯ ಹಾಗೂ ಮೈಸೂರಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ನಾಗಮಂಗಲದ ಇಜ್ಜಲಘಟ್ಟದಲ್ಲಿ ಮೂರು ಹಾಗೂ ಮೈಸೂರಿನಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ. ಇಜ್ಜಲಘಟ್ಟದಲ್ಲಿ ಫಾರ್ಮ್ ಹೌಸ್, ತಂದೆ ಮನೆ, ಕ್ರಷರ್ ಮೇಲೆ ದಾಳಿ ಮಾಡಲಾಗಿದೆ.  ಮೈಸೂರಿನಲ್ಲಿ ಶಿವರಾಜು ಹಾಗೂ ಅಳಿಯನ ಮನೆ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. 

ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ

ನೀರಾವರಿ ಇಲಾಖೆಯ ಸೂಪರಿಡೆಂಟ್ ಇಂಜಿನಿಯರ್ ಮಹೇಶ್ ಕೆ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹೇಶ್ ಅವರ ಜೆ ಸಿ ನಗರದ ನಿವಾಸ, ಗೋಕುಲಂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಟಿ ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದ ತೋಟದ ಮನೆಯಲ್ಲೂ ದಾಳಿ ಮಾಡಲಾಗಿದೆ

ಹಾಸನ 

ಬೆಳ್ಳಂಬೆಳಗ್ಗೆ ಹಾಸನದಲ್ಲೂ ಲೋಕಾಯುಕ್ತ ರೇಡ್ ನಡೆದಿದೆ. ಬೇಲೂರು ತಾಲ್ಲೂಕಿನ ಗ್ರೇಡ್ 1 ಕಾರ್ಯದರ್ಶಿ ಎನ್ .ಎಂ ಜಗದೀಶ್ ರ ನಂದಗೋಡನಹಳ್ಳಿ ನಿವಾಸ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ದಾಳಿ ನಡೆಸಲಾಗಿದೆ. 

ದಾವಣಗೆರೆ: 

ಇಬ್ಬರು ಬೆಸ್ಕಾಂ ಇಂಜಿನಿಯರಿಂಗ್ ಗಳ ಮನೆ ಮತ್ತು ಕಚೇರಿ ಮೇಲೆ ಲೋಕಾ ದಾಳಿ ನಡೆಸಲಾಗಿದೆ. ದಾವಣಗೆರೆ ನಗರ ಸೇರಿದಂತೆ ವಿವಿಧ ಕಡೆ ಒಟ್ಟು ಎಂಟು ಕಡೆ ದಾಳಿ ನಡೆದಿದೆ. 

ಚಿಕ್ಕಮಗಳೂರು: 

ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಡಿ. ಹೆಚ್. ಉಮೇಶ್ ದಾವಣಗೆರೆ ವಾಸದ ಮನೆ, ಆವರೆಗೆರೆ ಗ್ರಾಮದ ವಾಸದ ಮನೆ, ಹೊಸದುರ್ಗ ತಾಲ್ಲೂಕಿನಲ್ಲಿ ಗವಿರಂಗಾಪುರದಲ್ಲಿರುವ ಮನೆ, ದಾವಣಗೆರೆ ನಗರದ ಕೆಐಡಿಬಿ ಕರೂರು ವಲಯದಲ್ಲಿರುವ ಗೋಡೋನ್ ಮೇಲೆ ದಾಳಿ ಮಾಡಲಾಗಿದೆ. ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ವಿಭಾಗದ ಎಇಇ  ಎಂ.ಎಸ್. ಪ್ರಭಾಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಸ್ಕಾಂ ವಿಜಿಲೆನ್ಸ್ ಕಚೇರಿ  ಎಂ ಸಿಸಿ  ಎ ಬ್ಲಾಕ್ ವಾಸದ ಮನೆ, ತರಳಬಾಳು ಬಡಾವಣೆಲ್ಲಿನ ಮಾವನ ಮನೆ ಮೇಲೆ ದಾಳಿ ಮಾಡಲಾಗಿದೆ. 

ಕಲಬುರಗಿ: 

ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಅವರ ಕಲಬುರಗಿ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಲಾಗಿದೆ. ಮೂಲತಃ ಕಲಬುರಗಿಯ ಬಸವರಾಜ್ ಮಾಗಿ, ಬಿಬಿಎಂಪಿಯಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ನಿವಾಸದ ಜೊತೆಗೆ ಕಲಬುರಗಿ ನಿವಾಸದ ಮೇಲೂ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. 

ಚಿತ್ರದುರ್ಗ:

ನಿವೃತ್ತ ಇಂಜಿನಿಯರ್, ಜೆಡಿಎಸ್ ಮುಖಂಡ ಎಂ.ರವೀಂದ್ರ ಮನೆ ಮೇಲೆ, ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ. ಚಿತ್ರದುರ್ಗ ನಗರದ ವಿನಾಯಕ‌ ಬಡಾವಣೆಯ ಮನೆ, ಹಿರಿಯೂರು ತಾಲೂಕಿನ ಸೂಗೂರು ಫಾರ್ಮಹೌಸ್, ಐಮಂಗಲ ಬಳಿ ಬಾಟಲಿ ಫ್ಯಾಕ್ಟರಿ ಮೇಲೆ ದಾಳಿ ನಡೆಸಲಾಗಿದೆ. 

ನಿವೃತ್ತ ಇಂಜಿನಿಯರ್, ಜೆಡಿಎಸ್ ಮುಖಂಡ  ರವೀಂದ್ರ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಬ್ಯರ್ಥಿ ಆಗಿ ಸ್ಪರ್ಧಿಸಿ ಸೋತಿದ್ದರು. ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ವೇಳೆ ಎಂ.ರವೀಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಎಂ.ರವೀಂದ್ರ ಬೆಂಗಳೂರು ಸೇರಿ ವಿವಿದೆಡೆ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. 

ಬೀದರ: ರೈತನ ಹತ್ತಿರ ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಳಗಾವಿ:

ಬೆಳಗಾವಿ ಜಿಲ್ಲಾ ಪಂಚಾಯತ್ ಎಇಇ ಮಹಾದೇವ ಬನ್ನೂರ ಮನೆ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರ ಹೊರವಲಯದಲ್ಲಿರುವ ಬನ್ನೂರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ. 

ಈ ಹಿಂದೆ ಮಹಾದೇವ ಬನ್ನೂರ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದರು. ಆಗ ದಾಳಿಯಲ್ಲಿ ಮನೆಯಲ್ಲಿ ಅಕ್ರಮವಾಗಿ 27ಲಕ್ಷ  ಪತ್ತೆಯಾಗಿತ್ತು. ಅದರ ಮುಂದುವರೆದ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳು ಮತ್ತೊಮ್ಮೆ ದಾಳಿ ಮಾಡಿದ್ದಾರೆ. 27 ಲಕ್ಷ ಹಣ ಸಿಕ್ಕಿರುವ ಬಗ್ಗೆ ಮಾಹಿತಿ, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮಹಾದೇವ ಬನ್ನೂರಗೆ ಸಂಬಂಧಿಸಿದಂತೆ ಯಳ್ಳೂರ, ಬೆಳಗಾವಿ ನಗರ ಹಾಗೂ ಗೋಕಾಕನಲ್ಲಿ ದಾಳಿ ನಡೆಸಲಾಗಿದೆ. 

Latest Videos
Follow Us:
Download App:
  • android
  • ios