ಶಾಸಕ ಮಾಡಾಳ್‌ ವಿರುಪಾಕ್ಷಪ್ಪನನ್ನು ಉಚ್ಛಾಟಿಸಿದ ಬಿಜೆಪಿ

ಲೋಕಾಯುಕ್ತ ದಾಳಿಗೆ ಒಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಜಾಮೀನು ಸಿಕ್ಕದ ತಕ್ಷಣವೇ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಮನೆಗೆ ವಾಪಸ್ ಆಗಿದ್ದು, ಇದರಿಂದ ಉಂಟಾದ ಮುಜುಗರದಿಂದ ಬಿಜೆಪಿಯಿಂದ ಶಾಸಕನನ್ನು ಉಚ್ಛಾಟನೆ ಮಾಡಲಾಗಿದೆ.

Lokayukta Raid accused BJP expelled MLA Madal Virupakshappa sat

ಬೆಂಗಳೂರು (ಮಾ.07): ಲೋಕಾಯುಕ್ತ ದಾಳಿಗೆ ಒಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಜಾಮೀನು ಸಿಕ್ಕದ ತಕ್ಷಣವೇ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಮನೆಗೆ ವಾಪ್ಸ್‌ ಆಗಿದ್ದು, ಇದರಿಂದ ಉಂಟಾದ ಮುಜುಗರದಿಂದ ಬಿಜೆಪಿಯಿಂದ ಶಾಸಕನನ್ನು ಉಚ್ಛಾಟನೆ ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆಯೇ ಕೇಂದ್ರ ಶಿಸ್ತು ಸಮಿತಿಯಿಂದ ಚನ್ನಗಿರಿ ಶಾಸಕ ಮಾಡಳು ವಿರುಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ರಾಜ್ಯ ಬಿಜೆಪಿಗೆ ಸೂಚನೆ ನೀಡಲಾಗಿತ್ತು. ಆದರೆ, ಇಂದು ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡ ಬೆನ್ನಲ್ಲೇ ಮನೆಗೆ ವಾಪಾಸ್‌ ಆಗುವಾಗ ಅದ್ಧೂರಿ ಮೆರವಣಿಗೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಭಾರಿ ಪ್ರಮಾಣದ ಮುಜುಗರ ಉಂಟಾಗಿದ್ದು, ಕೂಡಲೇ ಶಾಸಕರನ್ನು ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯು ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.

6 ಕೋಟಿ ಅಕ್ರಮ ಹಣದ ಆರೋಪಿಗೆ ಅದ್ಧೂರಿ ಮೆರವಣಿಗೆ ಬೇಕೇ.?: ಮಾಡಾಳ್ ವಿರುಪಾಕ್ಷಪ್ಪನಿಂದ ಬಿಜೆಪಿಗೆ ಮುಜುಗರ

ಗಂಭೀರ ಕ್ರಮಕ್ಕೆ ಶಿಸ್ತು ಸಮಿತಿ ಶಿಫಾರಸು: ಶಾಸಕ ಮಾಡಾಳು ವೀರೂಪಾಕ್ಷಪ್ಪ ವಿರುದ್ಧ ಬಿಜೆಪಿಯಿಂದ ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ. ಪಕ್ಷದಿಂದಲೇ ಮಾಡಾಳು ವೀರೂಪಾಕ್ಷಪ್ಪ ಉಚ್ಛಾಟನೆಗೆ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ರಾಜ್ಯ ಶಿಸ್ತು ಸಮಿತಿಯು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಇಂದು ಸಂಜೆಯೊಳಗೆ ಆದೇಶ ಹೊರಬೀಳುವ ಸಾಧ್ಯತೆಯೂ ಇದೆ. ಸರ್ಕಾರ ಆಡಳಿತ ನಡೆಸಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇದರಿಂದ ಸರ್ಕಾರ ಮರ್ಯಾದೆಯನ್ನು ಕಾಪಾಡಿಕೊಳ್ಳಲು ಪ್ರಯತ್ನ ಮುಂದುವರೆಸಿತ್ತು. ಈಗ ಉಚ್ಛಾಟನೆ ಮಾಡಲಾಗಿದೆ ಎಂದು ವಿರುಪಾಕ್ಷಪ್ಪ ಹೇಳಿಕೊಂಡಿದ್ದಾರೆ.

ಉಚ್ಛಾಟನೆ ಸ್ವಾಗತಿಸಿ ವಿರುಪಾಕ್ಷಪ್ಪ: ಈ ಶಿಸ್ತು ಕ್ರಮವನ್ನು ಒಪ್ಪಿಕೊಳ್ಳುತ್ತೇನೆ. ದೋಷಮುಕ್ತನಾದ ಬಳಿಕ ಮತ್ತೆ ಪಕ್ಷ ಸೇರಿಕೊಳ್ಳುತ್ತೇನೆ ಎಂದ ವಿರೂಪಾಕ್ಷಪ್ಪ. ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಪಕ್ಷ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಯೇ ಇದೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ದೇಶದ ಅತೀ ದೊಡ್ಡ ಪಕ್ಷಕ್ಕೆ ನನ್ನಿಂದ ಕಳಂಕವಾಗಬಾರದು ಎಂದು ಶಾಸಕ ವಿರೂಪಾಕ್ಷಪ್ಪ ದಾವಣಗೆರೆಯಲ್ಲಿ ಹೇಳಿಕೊಂಡಿದ್ದಾರೆ.

ಈ ಕ್ಷಣದವರೆಗೂ ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ ಎಂದ ಸಿಟಿ ರವಿ: 
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪಕ್ಷದಿಂದ ಉಚ್ಛಾಟನೆ ಕುರಿತು ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿದ್ದು, ಈ ಕ್ಷಣದವರೆಗೂ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ. ಇಡೀ ದೇಶದಲ್ಲಿ ಎಲ್ಲೂ ಕೂಡಾ ಪಕ್ಷದಲ್ಲಿ ಆ ವ್ಯವಸ್ಥೆ ಇಲ್ಲ. ಪ್ರಾಥಮಿಕ ತನಿಖಾ ವರದಿ ಬಂದ ಬಳಿಕವೇ ಪಕ್ಷ ಕ್ರಮ ಕೈಗೊಳ್ಳುತ್ತದೆ. ಉಚ್ಛಾಟನೆ ಮಾಡಿದ್ದಾರೆ ಎಂಬುದು ಈವರೆಗೂ ನನ್ನ ಗಮನದಲ್ಲಿ ಇಲ್ಲ ಎಂದರು.

ಹೈಕೋರ್ಟ್‌ ಜಾಮೀನು ಬೆನ್ನಲ್ಲೇ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಪ್ರತ್ಯಕ್ಷ: ಅದ್ಧೂರಿ ಸ್ವಾಗತ

ಡಿಕೆ ಶಿವಕುಮಾರ್‌ ಕೂಡ ಮೆರವಣಿಗೆ ಮಾಡಿಸಿಕೊಂಡಿದ್ದರು: ಚನ್ನಗಿರಿ ಕ್ಷೇತ್ರದಲ್ಲಿ ಮೆರವಣಿಗೆ ಮಾಡಲಾಗಿದೆ. ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್ ಕೂಡ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿಗೆ ಹೋಗಿ ದೆಹಲಿಯಿಂದ ಬಂದಾಗ ಮೆರವಣಿಗೆ ಮಾಡಿದ್ದರು. ಇದು ಅವರಿಗೆ ಮಾದರಿ ಎನ್ನಿಸಿರಬಹುದು. ಆದರೆ ಅವರು ಅದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕಿಲ್ಲ. ನಮ್ಮ ಪಕ್ಷದ ನಾಯಕರ ನಿಲುವನ್ನು ಅನುಸರಿಸಿದರೆ ಸಾಕು ಎಂದು ಸಿ.ಟಿ. ರವಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios