Asianet Suvarna News Asianet Suvarna News

ಕುಮಾರಸ್ವಾಮಿ, ಐಪಿಎಸ್‌ ಅಧಿಕಾರಿ ಜಟಾಪಟಿ: ಹಂದಿಗಳ ಜೊತೆಗೆ ಕುಸ್ತಿ ಆಡಲ್ಲ, ಎಚ್‌ಡಿಕೆಗೆ ಚಂದ್ರಶೇಖ‌ರ್ ತಿವಿತ

ನಮ್ಮ ಪ್ರಕರಣಗಳಲ್ಲಿ ಅಪರಾಧಿಗಳ ಮತ್ತು ಆರೋಪಿಗಳಿಂದ ನಿಮ್ಮನ್ನು ರಕ್ಷಿಸುತ್ತೇ? ಎಂಬ ಭರವಸೆಯನ್ನೂ ನೀಡುತ್ತೇನೆ. ಯಾವುದೇ ಬಾಹ್ಯ ಪ್ರಭಾವಗಳು ಎದುರಾದರ ಎದೆಗುಂದುವುದಿಲ್ಲ ಎಂದು ತಿಳಿಸಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ 

Lokayukta ADGP Chandrashekhar Slams Union Minister HD Kumaraswamy grg
Author
First Published Sep 29, 2024, 6:59 AM IST | Last Updated Sep 29, 2024, 6:59 AM IST

ಬೆಂಗಳೂರು(ಸೆ.29): 'ಹಂದಿಗಳ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ.' ಹೀಗೆ ಇಂಗ್ಲೀಷ್ ದಾರ್ಶನಿಕ ಜಾರ್ಜ್ ಬರ್ನಾರ್ಡ್ ಷಾ ಅವರ ಪದಗಳನ್ನು ಉಲ್ಲೇಖಿಸಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ತೀಕ್ಷ್ಯವಾಗಿ ತಿರುಗೇಟು ನೀಡಿದ್ದಾರೆ. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ವಿರುದ್ಧ ತಮ್ಮ ಸಹೋದ್ಯೋ ಗಿಗಳಿಗೆ ಪತ್ರ ಬರೆದಿರುವ ಚಂದ್ರಶೇಖರ್ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಆರೋಪಿ ಎಂದೇ ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿದ್ದಾರೆ. 

ಡಿನೋಟಿಫೈ ಕೇಸ್: ಕುಮಾರಸ್ವಾಮಿಗೆ ಲೋಕಾ 1 ತಾಸು ವಿಚಾರಣೆ

ಎಸ್‌ಐಟಿಯ ಕ್ರೈಂ ನಂರ್ಬ16/14ರಲ್ಲಿ ಆರೋಪಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮತ್ತು ಬೆದರಿಕೆಗಳನ್ನು ಮಾಡಿದ್ದಾರೆ. ತಮಗೆ ತಿಳಿದಿರುವಂತೆ ಎಸ್‌ಐಟಿ, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿತ್ತು. ಜಾಮೀನಿನ ಮೇಲಿರುವ ಆರೋಪಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ನಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ಮತ್ತು ನಮ್ಮನ್ನು ತಡೆಯಲು ನಡೆಸಿರುವ ಕುತಂತ್ರ ಎಂಬುದು ತೋರುತ್ತದೆ ಎಂದು ಕಿಡಿಕಾರಿದ್ದಾರೆ.

ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು ಉದ್ದೇಶವಾಗಿದೆ. ಆದರೆ, ಒಬ್ಬ ಆರೋಪಿ, ಅವನು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಮತ್ತು ಶಕ್ತಿಶಾಲಿಯಾಗಿದ್ದರೂ, ಅವನು ಆರೋಪಿಯೇ ಆಗಿರುತ್ತಾನೆ. ಇಂತಹ ಆರೋಪಗಳು ಮತ್ತು ಬೆದರಿಕೆ ಗಳಿಂದ ನಾವು ಹಿಂಜರಿಯಬೇಕಾಗಿಲ್ಲ. ನಾನು ಎಸ್‌ಐಟಿ ಮುಖ್ಯಸ್ಥನಾಗಿ ಭಯವಿಲ್ಲದೆ ಕೆಲ: ಮಾಡುತ್ತೇನೆ ಮತ್ತು ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂಬುದಾಗಿ ಭರವಸೆ ನೀಡುತ್ತೇನೆ ಎಂದಿದ್ದಾರೆ. 

ನಮ್ಮ ಪ್ರಕರಣಗಳಲ್ಲಿ ಅಪರಾಧಿಗಳ ಮತ್ತು ಆರೋಪಿಗಳಿಂದ ನಿಮ್ಮನ್ನು ರಕ್ಷಿಸುತ್ತೇ? ಎಂಬ ಭರವಸೆಯನ್ನೂ ನೀಡುತ್ತೇನೆ. ಯಾವುದೇ ಬಾಹ್ಯ ಪ್ರಭಾವಗಳು ಎದುರಾದರ ಎದೆಗುಂದುವುದಿಲ್ಲ ಎಂದು ತಿಳಿಸಿದ್ದಾರೆ. 
ಕೊನೆಯಲ್ಲಿ ಇಂಗ್ಲೀಷ್ ದಾರ್ಶನಿಕ ಜಾರ್ಜ್‌ ಬರ್ನಾರ್ಡ್ ಷಾ ಅವರ ಮಾತುಗಳನ ಉಲ್ಲೇಖಿಸಿ, 'ಹಂದಿಗಳೊಂದಿಗೆ ಎಂದಿಗು ಕುಸ್ತಿಯಾಡಬೇಡಿ. ನೀವಿಬ್ಬರು ಕೊಳಕಾಗುತ್ತೀರಿ ಮತ್ತು ಹಂದಿಯು ಅದನ ಇಷ್ಟ ಪಡುತ್ತದೆ.' ಅದನ್ನು ನಾವು ತಪ್ಪಿಸಲ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗೌರ್ನರ್ ಕಚೇರಿ ತನಿಖೆಗೆ ಹೊರಟ ಐಪಿಎಸ್ ಅಧಿಕಾರಿ ಭ್ರಷ್ಟ: ಎಚ್‌ಡಿಕೆ 

ಬೆಂಗಳೂರು: ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್‌ಭ್ರಷ್ಟ ಅಧಿಕಾರಿ ಯಾಗಿದ್ದು, ಆತನ ಮೂಲಕ ರಾಜ್ಯಪಾಲರ ಕಚೇರಿ ಸಿಬ್ಬಂದಿಯ ತನಿಖೆಗೆ ಕಾಂಗ್ರೆಸ್ ಸರ್ಕಾರ ಅನುಮತಿಯನ್ನು ಕೇಳಿಸಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿದ ಎಚ್ .ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ. 

ಶನಿವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋ ಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ನಂತಪ ದರೋಡೆಕೋರ ಅಧಿಕಾರಿಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕ ಟಾಕ್ಷವಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆ ಯುತ್ತಿಲ್ಲ, ರಾಜಕೀಯ ಸೇಡಿಗಾಗಿ ತನಿಖೆ ನಡೆ ಸಲಾಗುತ್ತಿದೆ. ಅದಕ್ಕಾಗಿ ಚಂದ್ರಶೇಖರ್‌ನಂತಹ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ವಾಗ್ದಾಳಿ ನಡೆಸಿದರು. 

ನನ್ನ ವಿರುದ್ಧದ ಪ್ರಕರಣ ಸಂಬಂಧ ಗೌರರ್ ಲೋಕಾ ಯುಕ್ತಕ್ಕೆ ಬರೆದಿದ್ದ ಗೌಪ್ಯ ಪತ್ರ ಸೋರಿಕೆಯಾಗಿದೆ. ಅದು ಚಂದ್ರಶೇಖ‌ರ್ ಅವರಿಂದಲೇ ಸೋರಿಕೆಯಾಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪತ್ರ ಸೋರಿಕೆ ಬಗ್ಗೆ ರಾಜ್ಯಪಾಲರ ಸಿಬ್ಬಂದಿ ವಿಚಾರಣೆಗೆ ಚಂದ್ರಶೇಖರ್‌ಪತ್ರ ಬರೆದು ಉದ್ದಟತನ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ: 

ಚಂದ್ರಶೇಖ‌ರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್‌ಐಪಿಎಸ್ ಅಧಿಕಾರಿ. ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದರು.ಹಿಮಾಚಲಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ರಾಜ್ಯದಲ್ಲಿಯೇ ಮುಂದುವರೆದಿದ್ದಾರೆ. ನಿಯೋಜನೆ ಮೇಲೆ ಬಂದು ರಾಜ್ಯದ ಕೇಡರ್‌ಅಧಿಕಾರಿಯಾಗುತ್ತಾರೆ. ಅದಕ್ಕಾಗಿ ಮಾಡಿರುವ ಅಕ್ರಮಗಳನ್ನು ಹೇಳುವಂತಿಲ್ಲ. ಅವೆಲ್ಲಾ ಬಹಳ ಸೂಕ್ಷ್ಮ ವಿಚಾರಗಳು ಎಂದರು. ಇದೇ ಚಂದ್ರಶೇಖರ್‌ತನ್ನ ಪತ್ನಿ ಹೆಸರಿನಲ್ಲಿ ಮಾನ್ಯತಾ ಟೆಕ್ ಪಾರ್ಕ್ ಬಳಿ 38 ಮಹಡಿಯ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ. ಅದು ರಾಜಾಕಾಲುವೆ ಮೇಲೆ ಇದೆ. ಅಲ್ಲದೆ, ಕೆರೆಯನ್ನು ಕೂಡ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. 

ವಿಜಯೇಂದ್ರ ಅವರೇ ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಿಸಿ: ಸಚಿವ ಎಂ.ಬಿ.ಪಾಟೀಲ್

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್. ಎಂ.ರಮೇಶ್ ಗೌಡ ಇತರರು ಉಪಸ್ಥಿತರಿದ್ದರು.

ರೌಡಿ ದೂರಿನಿಂದ ಸಿಕ್ಕಿಬಿದ್ದ ಚಂದ್ರಶೇಖರ್

ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್‌ಅಕ್ರಮ ಗಳನ್ನು ಎಸಗಿದ್ದಾರೆ ಎಂದು ಹಲವು ಆರೋಪಗಳನ್ನು ಮಾಡಿದ ಎಚ್.ಡಿ.ಕುಮಾರಸ್ವಾಮಿ, ರೌಡಿ ದೂರಿನಿಂ ದಾಗಿ ಚಂದ್ರಶೇಖರ್ ಸಿಕ್ಕಿ ಹಾಕಿಕೊಂಡ ಎಂದು ಹೇಳಿ ದರು. ವಿಜಯ್ ತಾತಾ ಎಂಬಾತನ ಕುಮ್ಮಕ್ಕಿನಿಂದಾಗಿ ಸಾಕಷ್ಟು ಅಕ್ರಮಗಳನ್ನು ಎಸಗಿದ್ದಾರೆ. ಶ್ರೀಧರ್ ಎಂಬ ರೌಡಿ ನೀಡಿರುವ ದೂರಿನಲ್ಲಿ ವಿಜಯ್ ತಾತಾ ಮತ್ತು ಚಂದ್ರಶೇಖರ್ ಅಕ್ರಮಗಳು ಬಯಲಾಗು ತ್ತವೆ. ಅಲ್ಲದೇ, ಕಿಶೋರ್‌ಎಂಬ ಇನ್ಸ್‌ಪೆಕ್ಟರೊಬ್ಬರನ್ನು ಬ್ಲಾಕ್ ಮೇಲ್ ಮಾಡಿ 20 ಕೋಟಿ ರು.ಗೆ ಬೇಡಿಕೆ ಇಡಲಾಗುತ್ತದೆ. ಇಂತಹ ಭ್ರಷ್ಟ ಅಧಿಕಾರಿಯ ಬೆನ್ನಿಗೆ ಸರ್ಕಾರ ಇದೆ ಎಂದು ಕಿಡಿಕಾರಿದರು. ಪಿಎಸಿಲ್ ಕಂಪನಿಯನ್ನು ಬೆದರಿಸಿ 10 ಕೋಟಿ ರು. ವಸೂಲಿ, ಆಂಬಿಡೆಂಟ್ ಕಂಪನಿಯಿಂದ 30 ಕೋಟಿ ರು. ಸೇರಿ ದಂತೆ ಇದೇ ರೀತಿ ಕೋಟ್ಯಂತರ ರು. ವಸೂಲಿ ಮಾಡಿ ರುವ ಇತಿಹಾಸ ಚಂದ್ರಶೇಖರ್‌ಗೆ ಇದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios