ಎಚ್‌ಡಿಕೆ ಹಾರ್ಟ್ ಆಪರೇಷನ್ ಬಗ್ಗೆ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರದಲ್ಲಿ ವ್ಯಂಗ್ಯ ಮಾಡೋದು ಎಷ್ಟು ಸರಿ?
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಕೆಲವರು ವ್ಯಂಗ್ಯ ಮಾಡುತ್ತಿರುವುದು ನನಗೆ ಅತ್ಯಂತ ಬೇಸರ ತರಿಸಿದೆ. ಚುನಾವಣಾ ಪ್ರಚಾರಕ್ಕೋಸ್ಕರ ಮನುಷ್ಯತ್ವ ಬಿಟ್ಟು ಮಾತನಾಡುತ್ತಿದ್ದಾರೆ ಎಂದು ಸಾರಾ ಮಹೇಶ್ ಬೇಸರ ವ್ಯಕ್ತಪಡಿಸಿದರು.
ಕೊಡಗು (ಮಾ.30): ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಕೆಲವರು ವ್ಯಂಗ್ಯ ಮಾಡುತ್ತಿರುವುದು ನನಗೆ ಅತ್ಯಂತ ಬೇಸರ ತರಿಸಿದೆ. ಚುನಾವಣಾ ಪ್ರಚಾರಕ್ಕೋಸ್ಕರ ಮನುಷ್ಯತ್ವ ಬಿಟ್ಟು ಮಾತನಾಡುತ್ತಿದ್ದಾರೆ ಎಂದು ಸಾರಾ ಮಹೇಶ್ ಬೇಸರ ವ್ಯಕ್ತಪಡಿಸಿದರು.
ಇಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಂಡ್ಯದ ಉಸ್ತುವಾರಿ ಸಚಿವರು ಹೇಳುತ್ತಾರೆ, ಕುಮಾರಸ್ವಾಮಿ ಏನು ವ್ಹೀಲ್ ಚೇರ್‌ನಲ್ಲಿ ಬಂದು ಪ್ರಚಾರ ಮಾಡ್ತಾರಾ ಎಂದು ಗೇಲಿ ಮಾಡ್ತಾರೆ. ಅದು ಆಕಸ್ಮಿಕವಾಗಿ ಬಂದ ಮಾತು ಎಂದು ಭಾವಿಸಿದ್ದೆ. ಆದರೆ ಅವರ ಸಹದ್ಯೋಗಿ ಕೂಡ "ಚುನಾವಣೆ ಬಂದಾಗಲೆಲ್ಲ ಆರೋಗ್ಯ ಕೈಕೊಡುತ್ತದೆ' ಎನ್ನುತ್ತಾರೆ. ಇವರ ಹೇಳಿಕೆಗಳನ್ನು ಕೇಳಿದಾಗ ನಾವು ರಾಜಕಾರಣಿಗಳು ಯಾವ ಮಟ್ಟಕ್ಕೆ ಇಳಿದ್ದೇವೆ ಎನಿಸುತ್ತದೆ. ಕೇವಲ ಚುನಾವಣಾ ಪ್ರಚಾರಕ್ಕೋಸ್ಕರ ಮನುಷ್ಯತ್ವ ಬಿಟ್ಟು ಮಾತನಾಡುತ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಶಾಸಕ ಬಂಡಿಸಿದ್ದೇಗೌಡ ಹೆಸರು ಹೇಳದೆ ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ತವರಲ್ಲಿ ಬಿಜೆಪಿ ಅತೃಪ್ತಿಗೆ ಮದ್ದರೆದ ಬಿ.ವೈ.ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಶಾಸಕರಿಗೆ ಸ್ವಲ್ಪ ಕಿವಿಮಾತು ಹೇಳಿ ಕುಮಾರಸ್ವಾಮಿ ಅವರಿಗೆ ಈಗಾಗಲೇ ಆಂಜಿಯೋಪ್ಲಾಸ್ಟಿ ಮೂಲಕ ಹೃದಯಕ್ಕೆ ವಾಲ್ ಅಳವಡಿಸಿದ್ದಾರೆ. ಅದರ ಪರಿಜ್ಞಾನ ಇಲ್ಲದೆ ನಿಮ್ಮ ಸಚಿವರು ಈ ರೀತಿ ಮಾತನಾಡುತ್ತಾರೆ. ಇದು ಬಹಳ ನೋವಾಗುತ್ತದೆ. ಶಾಸಕಾಂಗ ಸಭೆಗೆ ನಾವು ಇಂತಹವರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದೇವೆ. ನಾವು ಈಗಾಗಲೇ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ನವರ ರೀತಿ ಬೆನ್ನಿಗೆ ಚೂರಿ ಹಾಕುವುದಿಲ್ಲ. ಹೀಗಾಗಿಯೇ ಕುಮಾರಣ್ಣ ಆರೋಗ್ಯ ಸರಿಯಿಲ್ಲದಿದ್ದರೂ ಪ್ರಚಾರ ಕಾರ್ಯಕ್ಕೆ ಬರುತ್ತಿದ್ದಾರೆ. ಆದರೆ ಈ ರೀತಿ ಕುಚೋದ್ಯದ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಹುಟ್ಟಿದ್ದು ಹಾಸನ, ರಾಜಕೀಯ ಮಾಡಿದ್ದು ರಾಮನಗರ; ಮಂಡ್ಯ ನಮ್ಮ ಭೂಮಿ ಅಂದ್ರೆ ಹೇಗೆ? ಚಲುವರಾಯಸ್ವಾಮಿ