Asianet Suvarna News Asianet Suvarna News

Lok sabha election 2024: ಬಿಸಲುನಾಡು ಕಲಬುರಗಿ ಆಯ್ತು, ನಾಳೆ ಮಲೆನಾಡಿಗೆ ಪ್ರಧಾನಿ ಮೋದಿ!

ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ಕಲ್ಯಾಣ ಕರ್ನಾಟಕದಿಂದ ಪ್ರಚಾರ ಆರಂಭಿಸಿದ್ದ ಕಲಬುರಗಿ ಬಳಿಕ ಇದೀಗ ನಾಳೆ ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಲಿದ್ದಾರೆ

Lok sabha election 2024 Prime Minister Narendra Modi arrived in Shimoga on March 18 rav
Author
First Published Mar 17, 2024, 2:37 PM IST

ಶಿವಮೊಗ್ಗ (ಮಾ.17): ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬೇಸಗೆ ಬಿಸಲಿನ ಜೊತೆ ದಿನದಿನಕ್ಕೆ ಚುನಾವಣೆ ಕಾವು ಏರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕಲ್ಯಾಣ ಕರ್ನಾಟಕ ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭದ್ರಕೋಟೆ ಕಲಬುರಗಿಯಿಂದಲೇ ರಣಕಹಳೆ ಮೊಳಗಿಸಿದ್ದಾರೆ ಆ ಮೂಲಕ ಕರ್ನಾಟಕ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದ್ದಾರೆ. ಬಿಸಲುನಾಡು ಕಲಬುರಗಿ ರೋಡ್‌ಶೋ ಬಳಿಕ ಇದೀಗ ಪ್ರಧಾನಿ ಮೋದಿ ಮಲೆನಾಡಿನಲ್ಲೂ ಮೋದಿ ಅಲೆ ಎಬ್ಬಿಸಲು ಆಗಮಿಸುತ್ತಿದ್ದಾರೆ.

ಹೌದು, ಈ ಬಾರಿ ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ಕಲಬುರಗಿ, ಶಿವಮೊಗ್ಗದಿಂದಲೇ ಪ್ರಚಾರ ಶುರುಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲ್ಬುರ್ಗಿ ಖರ್ಗೆಯವರ ಭದ್ರಕೋಟೆಯಾಗಿದ್ದು, ಇಲ್ಲಿ ಪರಿಶಿಷ್ಟವರ್ಗದ ಮತದಾರರೇ ಹೆಚ್ಚಾಗಿದ್ದಾರೆ. ಈ ಬಾರಿ ಪರಿಶಿಷ್ಟ ವರ್ಗಗಳ ಮನಗೆದ್ದು, ಕಲಬುರಗಿಯಲ್ಲಿ ಕಮಲ ಅರಳಿಸುವ ಮೂಲಕ ಖರ್ಗೆ ಕುಟುಂಬಕ್ಕೆ ನೆಲೆ ಇಲ್ಲದಂತೆ ಮಾಡುವುದು ಕಲಬುರಗಿಯಲ್ಲಿ ಮೊದಲ ಸಮಾವೇಶ ನಡೆಸಿರುವುದರ ಉದ್ದೇಶವಾಗಿದೆ. ಇದೀಗ ಮಲೆನಾಡಿನಲ್ಲೂ ಪ್ರಧಾನಿ ಮೋದಿ ಗರ್ಜಿಸಲಿದ್ದಾರೆ. ಶಿವಮೊಗ್ಗ ಹೇಳಿಕೇಳಿ ಲಿಂಗಾಯತ ಸಮುದಾಯ ಹೆಚ್ಚಾಗಿರುವ ಕ್ಷೇತ್ರವಾಗಿದೆ ಅದರಲ್ಲೂ ಕರ್ನಾಟಕದಲ್ಲಿ ಕಮಲ ಅರಳಿಸಿದ ಬಿಎಸ್‌ ಯಡಿಯೂರಪ್ಪನವರ ಕ್ಷೇತ್ರವಾಗಿದ್ದು, ಈ ಹಿನ್ನೆಲೆ ಶಿವಮೊಗ್ಗದಿಂದ ಚುನಾವಣಾ ಪ್ರಚಾರದ ಜೊತೆಗೆ ಈ ಸಮಾರಂಭದಲ್ಲಿ ಬಿಎಸ್‌ವೈರಿಗೆ ಗೌರವ ಸನ್ಮಾನ ಮಾಡಲಿದ್ದಾರೆ.

ಕಾಂಗ್ರೆಸ್‌ನಿಂದ ಮನೆಮನೆಗೆ ಕುಕ್ಕರ್ ಹಂಚಿಕೆ ಆರೋಪ; ತಹಸೀಲ್ದಾರ್‌ಗೆ ದೂರು ನೀಡಿದರೂ ಸ್ಥಳಕ್ಕೆ ಬಾರದ್ದಕ್ಕೆ ಜೆಡಿಎಸ್ ಕಿಡಿ

ಮಲೆನಾಡಿಗೆ ಪ್ರಧಾನಿ ಆಗಮಿಸುವ ಕುರಿತಂತೆ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಮಾತನಾಡಿದ್ದು, ನಾಳೆ(ಮಾ.18) ಶಿವಮೊಗ್ಗಕ್ಕೆ  ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎರಡೂವರೆ ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದಿದ್ದಾರೆ.

ನಮ್ಮ ಸಂಕಲ್ಪ ವಿಕಸಿತ ಭಾರತ ಎಂದ ಅವರು, ನಮ್ಮ ಗುರಿ ಈ ಚುನಾವಣೆಯಲ್ಲಿ 400 ಸೀಟು ಪಡೆಯುವುದಾಗಿದೆ. ಯಡಿಯೂರಪ್ಪ, ವಿಜಯೇಂದ್ರ,ಈಶ್ವರಪ್ಪ ,ಆರಗ ಜ್ಞಾನೇಂದ್ರ  ಸೇರಿದಂತೆ ನಾಲ್ಕು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ನಾಳೆ ಕಾರ್ಯಕ್ರಮದಲ್ಲಿರ್ತಾರೆ. ಮಂಗಳೂರು ಅಭ್ಯರ್ಥಿ ಕೂಡ ವೇದಿಕೆ ಮೇಲೆ ಇರುತ್ತಾರೆ ಎಂದರು.

ಪ್ರಧಾನಿ ಮೋದಿ ಜನಪರ ಯೋಜನೆ ಸಾಕಾರ: ಶಾಸಕ ಆರಗ ಜ್ಞಾನೇಂದ್ರ

ನಾಳೆ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ ನಡೆಸಲಿದ್ದು, ವಾಹನದಲ್ಲಿ ಜನರನ್ನು ವೀಕ್ಷಿಸುತ್ತಾ ಆಗಮಿಸಲಿದ್ದಾರೆ. ನರೇಂದ್ರ ಮೋದಿ ಅವರ ಆಗಮನದಿಂದ ಅದ್ಭುತವಾದ ಯಶಸ್ಸು ಸಿಗಲಿದೆ. ಈ ಬಾರಿ ಕರ್ನಾಟಕದಿಂದ ಪ್ರಚಾರ ಶುರು ಮಾಡಿರುವುದರಿಂದ 28 ಕ್ಕೆ 28 ಸೀಟು ಗೆಲ್ಲಲಿದ್ದೇವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹಂತ 1: ಏಪ್ರಿಲ್​ 19, ಹಂತ 2: ಏಪ್ರಿಲ್ 26, ಹಂತ 3: ಮೇ 7, ಹಂತ 4: ಮೇ 13, ಹಂತ 5: ಮೇ 20ರಂದು, ಹಂತ 6: ಮೇ 25 ಹಾಗೂ ಹಂತ 7: ಜೂನ್​ 1ರಂದು ನಡೆಯಲಿದ್ದು, ಜೂನ್​ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Follow Us:
Download App:
  • android
  • ios