Asianet Suvarna News Asianet Suvarna News

Breaking: ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ, ರಾಜ್ಯದ 17 ಅಭ್ಯರ್ಥಿಗಳ ಲಿಸ್ಟ್‌ ಔಟ್‌


ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟವಾಗಿದ್ದು, 17 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ನಿರೀಕ್ಷೆಯಂತೆಯೇ ಮಲ್ಲಿಕಾರ್ಜುನ್‌ ಖರ್ಗೆ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ.


 

Lok Sabha Election 2024 Karnataka Congress List Of candidates Announced san
Author
First Published Mar 21, 2024, 9:20 PM IST

ನವದೆಹಲಿ (ಮಾ.21): ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 17 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮ ಮಾಡಲಾಗಿದೆ. ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್‌ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸೌಮ್ಯ ರೆಡ್ಡಿ ಸ್ಪರ್ಧೆ ಮಾಡಲಿದ್ದಾರೆ. ಬೆಂಗಳೂರು ಉತ್ತರದಿಂದ ರಾಜೀವ್‌ ಗೌಡ ಸ್ಪರ್ಧೆ ಮಾಡಲಿದ್ದಾರೆ. ಎಐಸಿಸಿ ಪ್ರಕಟಿಸಿದ ಮೂರನೇ ಪಟ್ಟಿ ಇದಾಗಿದ್ದು, ರಾಜ್ಯ ಕಾಂಗ್ರೆಸ್‌ನ 2ನೇ ಪಟ್ಟಿಯಾಗಿದೆ. ಒಟ್ಟು 57 ಹೆಸರುಗಳನ್ನು ಎಐಸಿಸಿ ಪ್ರಕಟಿಸಿದೆ. ಕರ್ನಾಟಕ ಮಾತ್ರವಲ್ಲದೆ, ಅರುಣಾಚಲ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ತನ್ನ ಹುರಿಯಾಳುಗಳನ್ನು ಘೋಷಣೆ ಮಾಡಿದೆ.

Breaking: ಬಿಜೆಪಿ ಮೂರನೇ ಪಟ್ಟಿ ಪ್ರಕಟ, ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ

ಈಶ್ವರ್‌ ಖಂಡ್ರೆ ಅವರ ಪುತ್ರ  26 ವರ್ಷದ ಸಾಗರ್‌ ಖಂಡ್ರೆಗೆ ಬೀದರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಆ ಮೂಲಕ ಲೋಕಸಭಾ ಚುನಾವಣಾ ಕಣದಲ್ಲಿರುವ ಅತ್ಯಂತ ಕಿರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಮೈಸೂರು ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್‌ ಒಡೆಯರ್‌ ವಿರುದ್ಧ ಕಾಂಗ್ರೆಸ್‌ನಿಂದ ಎಂ ಲಕ್ಷ್ಮಣ್‌ ಸ್ಪರ್ಧೆ ಮಾಡಲಿದ್ದಾರೆ. ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಕ್ಷೇತ್ರದಲ್ಲಿ ಇನ್ನು ಟಿಕೆಟ್‌ ಘೋಷಣೆ ಮಾಡುವುದು ಬಾಕಿ ಉಳಿದಿದೆ. ತನ್ನ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿತ್ತು.

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌

Lok Sabha Election 2024 Karnataka Congress List Of candidates Announced san

1. ಚಿಕ್ಕೋಡಿ (ಸಾಮಾನ್ಯ ಕ್ಷೇತ್ರ)
- ಪ್ರಿಯಾಂಕ ಜಾರಕಿಹೊಳಿ, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ
- ಪರಿಶಿಷ್ಟ ಪಂಗಡ

 2. ಬೆಳಗಾವಿ (ಸಾಮಾನ್ಯ ಕ್ಷೇತ್ರ)
- ಮೃಣಾಲ್ ಹೆಬ್ಬಾಳಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ
- ವೀರಶೈವ ಲಿಂಗಾಯತ 

3. ಬಾಗಲಕೋಟೆ (ಸಾಮಾನ್ಯ ಕ್ಷೇತ್ರ)
- ಸಂಯುಕ್ತ ಪಾಟೀಲ್, ಸಚಿವ ಶಿವಾನಂದ ಪಾಟೀಲ್ ಪುತ್ರಿ
- ವೀರಶೈವ ಲಿಂಗಾಯತ

4. ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
- ಡಾ. ರಾಧಾಕೃಷ್ಣ ದೊಡ್ಡಮನಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ
- ಪರಿಶಿಷ್ಟ ಜಾತಿ

5. ರಾಯಚೂರು (ಪರಿಶಿಷ್ಟ ಪಂಗಡ ಮೀಸಲು)
- ಕುಮಾರ್ ನಾಯ್ಕ್, ನಿವೃತ್ತ ಐಎಎಸ್
- ಪರಿಶಿಷ್ಟ ಜಾತಿ 

6. ಬೀದರ್ (ಸಾಮಾನ್ಯ ಕ್ಷೇತ್ರ)
- ಸಾಗರ್ ಖಂಡ್ರೆ, ಸಚಿವ ಈಶ್ವರ್ ಖಂಡ್ರೆ ಪುತ್ರ 
- ವೀರಶೈವ ಲಿಂಗಾಯತ

7.ಕೊಪ್ಪಳ (ಸಾಮಾನ್ಯ ಕ್ಷೇತ್ರ)
- ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ
- ಕುರುಬ 

8. ಧಾರವಾಡ (ಸಾಮಾನ್ಯ ಕ್ಷೇತ್ರ)
- ವಿನೋದ್ ಅಸೂಟಿ
- ಕುರುಬ 

9. ದಾವಣಗೆರೆ (ಸಾಮಾನ್ಯ ಕ್ಷೇತ್ರ)
- ಪ್ರಭಾವತಿ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ
- ವೀರಶೈವ ಲಿಂಗಾಯತ

10. ಉಡುಪಿ-ಚಿಕ್ಕಮಗಳೂರು (ಸಾಮಾನ್ಯ ಕ್ಷೇತ್ರ
- ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
- ಬಂಟ್ಸ್ 

11. ದಕ್ಷಿಣ ಕನ್ನಡ (ಸಾಮಾನ್ಯ ಕ್ಷೇತ್ರ)
- ಪದ್ಮರಾಜ್, ವಕೀಲ
- ಬಿಲ್ಲವ

12. ಮೈಸೂರು-ಕೊಡಗು (ಸಾಮಾನ್ಯ ಕ್ಷೇತ್ರ)
- ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ
- ಒಕ್ಕಲಿಗ

13. ಬೆಂಗಳೂರು ಉತ್ತರ (ಸಾಮಾನ್ಯ ಕ್ಷೇತ್ರ)
- ಪ್ರೊ.‌ರಾಜೀವ್ ಗೌಡ, ಯೋಜನಾ ಆಯೋಗದ ಉಪಾಧ್ಯಕ್ಷ
- ಒಕ್ಕಲಿಗ

14. ಬೆಂಗಳೂರು ಕೇಂದ್ರ (ಸಾಮಾನ್ಯ)
- ಮನ್ಸೂರ್ ಖಾನ್, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ
- ಮುಸ್ಲಿಂ

15. ಬೆಂಗಳೂರು ದಕ್ಷಿಣ (ಸಾಮಾನ್ಯ)*
- ಸೌಮ್ಯ ರೆಡ್ಡಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ 
- ರೆಡ್ಡಿ

16. ಉತ್ತರ ಕನ್ನಡ (ಸಾಮಾನ್ಯ ಕ್ಷೇತ್ರ)
-  ಅಂಜಲಿ‌ ನಿಂಬಾಳ್ಕರ್, ಮಾಜಿ ಶಾಸಕಿ
-  ಮರಾಠ

17. ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
- ಬಿಎನ್ ಚಂದ್ರಪ್ಪ, ಮಾಜಿ ಸಂಸದ
- ಪರಿಶಿಷ್ಟ ಜಾತಿ

Follow Us:
Download App:
  • android
  • ios