ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ: ಅಮಿತ್‌ ಶಾ, ಕುಮಾರಸ್ವಾಮಿ ಚರ್ಚೆ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸುವುದುಖಚಿತವಾಗಿದೆ. ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್. ಅಭ್ಯರ್ಥಿಗಳುಕಣಕ್ಕಿಳಿಯಲಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ. 

Amit Shah Instructs HD Kumaraswamy to Contest from Mandya in Lok Sabha Election 2024 grg

ಬೆಂಗಳೂರು(ಮಾ.16):  ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸುವುದರಿಂದ ಸೀಟು ಹಂಚಿಕೆ ವಿಚಾರವಾಗಿಕೇಂದ್ರ ಗೃಹಸಚಿವಅಮಿತ್ ಶಾ ಅವರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದರು.

ಶನಿವಾರ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಮತ್ತು ಹೃದ್ರೋಗ ತಜ್ಞಡಾ.ಸಿ.ಎನ್.ಮಂಜುನಾಥ್ ಮತ್ತು ಅವರ ಪತ್ನಿ ಅನಸೂಯ ಮಂಜುನಾಥ್ ಅವರೊಂದಿಗೆ ಎಚ್ .ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಿದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಸೀಟು ಹಂಚಿಕೆ ವಿಚಾರವಾಗಿ ಚರ್ಚಿಸಿ ಅಂತಿಮಗೊಳಿಸಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸುವುದುಖಚಿತವಾಗಿದೆ. ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್. ಅಭ್ಯರ್ಥಿಗಳುಕಣಕ್ಕಿಳಿಯಲಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ. ಈ ಕುರಿತು ಕುಮಾರಸ್ವಾಮಿ, ಅಮಿತ್ ಶಾ ಸಮಾಲೋಚಿಸಿದರೆಂದು ಮೂಲಗಳು ತಿಳಿಸಿವೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಡಾ.ಸಿ.ಎನ್. ಮಂಜುನಾಥ್ ಅವರು ಸಹ ಅಮಿತ್ ಶಾ ಜತೆ ಮಾತುಕತೆ ನಡೆಸಿದರು.ಈವೇಳೆಚುನಾವಣೆಗೆ ಅಗತ್ಯ ಸಹಕಾರವನ್ನು ವರಿಷ್ಠರು ನೀಡಲಿ ದ್ದಾರೆಂಬ ಅಭಯವನ್ನು ಶಾ ನೀಡಿದ್ದಾರೆಂದು ಹೇಳಲಾಗಿದೆ. 

Nikhil on Sumalatha: ನನ್ನ ವಿರುದ್ಧ ನಿಂತಿದ್ದ ಆ ತಾಯಿ ಗೆಲುವಿಗೆ ಕಾಂಗ್ರೆಸ್‌ ಕಾರಣ: ನಿಖಿಲ್ ಕುಮಾರಸ್ವಾಮಿ

ಈ ನಡುವೆ, ಕುಮಾರಸ್ವಾಮಿ ಹೃದಯಕ್ಕೆ ಸಂಬಂಧಿಸಿ ಶಸ್ತ್ರಚಿಕಿತ್ಸೆ ಗೊಳಪಡಬೇಕಾದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಶಾ ಜತೆ ಮಾತುಕತೆ ನಡೆಸಿದರು. ಇದೇ 19ರಂದು ಚೆನ್ನೈಗೆ ತೆರಳುವ ಕುಮಾರಸ್ವಾಮಿ 21ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆದು 25 ರೊಳಗೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios