ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕೆ! ಹೇಳಿದ್ದೇನು?
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದ್ದಾರೆ. ನಮಗೇಕೆ ಬೇಡಾ ಹಾಗಾದ್ರೆ. ಅಧಿಕಾರದ ಆಸೆ ಇಲ್ಲ, ಅಧಿಕಾರದ ದುರ್ಬಳಕೆ ಮಾಡಿಕ್ಕೊಳ್ಳುವ ವ್ಯಕ್ತಿಗಳ ವಿರುದ್ದ ನನ್ನ ಹೋರಾಟ ನಡೆಯುತ್ತದೆ ಎಂದು ಕೇಂದ್ರ ಸಚಿವ ಜೋಶಿ ವಿರುದ್ಧ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.
ಧಾರವಾಡ (ಏ.2): ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನ ಬದಲಾಯಿಸುವಂತೆ ಮಾ.31ರವರೆಗೆ ಟೈಂ ಕೊಟ್ಟಿದ್ದೆವು. ಆದರೆ ಅವರು(ಬಿಜೆಪಿ) ಬದಲಾವಣೆ ಮಾಡಲಿಲ್ಲ. ಹೀಗಾಗಿ ಜೋಶಿ ವಿರುದ್ಧ ಪಕ್ಷೇತರನಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದೇನೆ ಎಂದು ಫಕೀರ್ ದಿಂಗಾಲೇಶ್ವರ ಸ್ವಾಮಿಜಿ ಹೇಳಿದರು.
ಇಂದು ಧಾರವಾಡದಲ್ಲಿ ಭಕ್ತರ ಜೊತೆ ಮೂರು ಗಂಟೆಗಳವರೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ನಾನು ಹೋರಾಟವನ್ನ ಕೈ ಬಿಡೋದಿಲ್ಲ, ಯಾವುದೇ ಆಮಿಷಕ್ಕೆ ಒಳಗಾಗೋದಿಲ್ಲ ಎಂದು ಹೇಳಿದ್ದೆ. ಇಂದು ಧಾರವಾಡದಲ್ಲಿ ನಡೆದ ಸಭೆಯಲ್ಲಿ ನಿರ್ಧಾರವಾಗಿದೆ. ಎಲ್ಲ ಸಮಾಜದ ಭಕ್ತರು ನಾನು ಪಕ್ಷೇತ್ರರನಾಗಿ ಸ್ಪರ್ಧಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಪಕ್ಷೇತ್ರರನಾಗಿ ಸ್ಪರ್ಧಿಸಲು ನಿರ್ಧಾರ ಮಾಡಲಾಗಿದೆ. ಜೋಶಿ ಅವರನ್ನ ಸೋಲಿಸುವುದೇ ನನ್ನ ಮುಖ್ಯ ಉದ್ದೇಶ ಎಂದರು.
ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸೋದೆ ನಮ್ಮ ಗುರಿ: ದಿಂಗಾಲೇಶ್ವರ ಶ್ರೀ ಘೋಷಣೆ
ನನ್ನ ಸ್ಪರ್ಧೆಗೆ ಬೇಡಿಕೆ ಇಟ್ಟಿರುವ ಭಕ್ತರ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ತಿಳಿಸುತ್ತೇನೆ. ಯಾವುದೇ ಪ್ರಸಂಗ ಬಂದರೂ ಹೋರಾಟದಿಂದ ಹಿಂದೆ ಸರಿಯಲ್ಲ. ನನಗೆ ಬೆದರಿಕೆ ಕರೆ ಬಂದಿವೆ. ಸದ್ಯ ನನಗೆ ಅಂಗ ರಕ್ಷಕನನ್ನ ಕೊಟ್ಟಿದ್ದಾರೆ. ಭಕ್ತರು ಸಮಿತಿ ರಚನೆ ಮಾಡಿದ್ದಾರೆ. ಎಲ್ಲ ಮಠಾಧಿಪತಿಗಳನ್ನ ಒಡೆದಾಳುವ ಕೆಲಸವನ್ನು ಪ್ರಲ್ಹಾದ್ ಜೋಶಿ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ಜೋಶಿಯವರಿಗೆ ಬುದ್ಧಿ ಹೇಳಿದ್ದೇನೆ. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಠಾಧೀಶರನ್ನು ಬಳಸಿಕೊಳ್ಳುತ್ತಿದ್ದಾರೆ. ಜೋಶಿ ಅವರು ನಾನು ಹೇಳಿದ ಯಾವುದೇ ಕೆಲಸ ಮಾಡಿಲ್ಲ.ತಪ್ಪನ್ನ ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ನಾನು ಜೋಶಿ ಅವರನ್ನ ಬಲವಾಗಿ ತಿರಸ್ಕರಿಸುತ್ತೇನೆ ಎಂದರು.
ದಿಂಗಾಲೇಶ್ವರ ಶ್ರೀ ವಿಚಾರವಾಗಿ ಯಾರೊಂದಿಗೂ ಮಾತಾಡಿಲ್ಲ: ಪ್ರಲ್ಹಾದ್ ಜೋಶಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದ್ದಾರೆ. ನಮಗೇಕೆ ಬೇಡಾ ಹಾಗಾದ್ರೆ. ಅಧಿಕಾರದ ಆಸೆ ಇಲ್ಲ, ಅಧಿಕಾರದ ದುರ್ಬಳಕೆ ಮಾಡಿಕ್ಕೊಳ್ಳುವ ವ್ಯಕ್ತಿಗಳ ವಿರುದ್ದ ನನ್ನ ಹೋರಾಟ. ಸದ್ಯದ ಪರಿಸ್ಥಿತಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ಬೇಕಾಗಿದೆ. ಈ ಭಾರಿ ನೂರಕ್ಕೆ ನೂರು ಧಾರವಾಡ ಲೋಕಸಭಾ ಚುಣಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ ಆಗುತ್ತೆ. ನಮ್ಮದು ಪಕ್ಷಗಳ ವಿರುದ್ದ ಹೋರಾಟ ಅಲ್ಲ, ಜೋಶಿಯವರ ವ್ಯಕ್ತಿತ್ವದ ವಿರುದ್ಧ ಹೋರಾಟವಾಗಿದೆ ಎಂದು ತಿಳಿಸಿದರು.