New Year 2023: ಕರ್ನಾಟಕದ ಪ್ರವಾಸಿತಾಣದ ಲಾಡ್ಜ್‌ಗಳು ಈಗಲೇ ಭರ್ತಿ..!

ಹೋಟೆಲ್‌, ರೆಸಾರ್ಟ್‌, ಹೋಂಸ್ಟೇಗಳು ಹೌಸ್‌ಫುಲ್‌, ಬಾಡಿಗೆ ದರ 2-3 ಪಟ್ಟು ಏರಿಕೆ, ಗೋಕರ್ಣ, ಧರ್ಮಸ್ಥಳ, ಕುಕ್ಕೆ, ದಾಂಡೇಲಿ, ಕೊಡಗು, ಮೈಸೂರು ಹೋಟೆಲ್‌ ರೂಂ ಬುಕ್ಕಿಂಗ್‌ 

Lodges and Resorts Full in Karnataka For New Year Celebration grg

ಬೆಂಗಳೂರು(ಡಿ25): ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜನರು ಪ್ರವಾಸಿತಾಣಗಳಿಗೆ ಲಗ್ಗೆ ಇಡುತ್ತಿದ್ದು, ರಾಜ್ಯದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿನ ಲಾಡ್ಜ್‌, ರೆಸಾರ್ಟ್‌, ಹೋಂಸ್ಟೇಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಮಾಲೀಕರು ಬಾಡಿಗೆಯನ್ನು ಏಕಾಏಕಿ ಏರಿಸಿದ್ದು, ಕೆಲವೆಡೆ 2-3 ಪಟ್ಟು ಏರಿಕೆಯಾಗಿದೆ.

ದ.ಕ.ಜಿಲ್ಲೆಯಲ್ಲಿ 80 ನೋಂದಾಯಿತ ಹೋಂಸ್ಟೇಗಳು, ಮಂಗಳೂರಿನಲ್ಲಿ ಅಸೋಸಿಯೇಷನ್‌ನಿಂದ ಸದಸ್ಯತ್ವ ಪಡೆದ 100ಕ್ಕೂ ಅಧಿಕ ಹೋಟೆಲ್‌ಗಳಿದ್ದು, ಜನವರಿ 2ರವರೆಗೆ ಎಲ್ಲವೂ ಮುಂಗಡ ಬುಕ್ಕಿಂಗ್‌ ಆಗಿವೆ. ಹೋಟೆಲ್‌ಗಳಲ್ಲಿನ ಬಾಡಿಗೆ 2.5 ಸಾವಿರ ರು.ನಿಂದ 5-8 ಸಾವಿರ ರು.ವರೆಗೆ ಏರಿಕೆಯಾಗಿದೆ. ಇನ್ನು, ಗೋಕರ್ಣ, ಹಂಪಿ, ಮುರುಡೇಶ್ವರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿನ ವಸತಿಗೃಹಗಳು ಬಹುತೇಕ ಭರ್ತಿಯಾಗಿವೆ.

Bengaluru: ಹೊಸ ವರ್ಷಕ್ಕೆ ಉಗ್ರರ ಕರಿನೆರಳು: ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ

ಕೊಡಗು, ದಾಂಡೇಲಿ ಸೇರಿದಂತೆ ಕೆಲ ಪ್ರವಾಸಿತಾಣಗಳಲ್ಲಿನ ರೆಸಾರ್ಚ್‌ಗಳಲ್ಲಿ ದಿನವೊಂದರ ಬಾಡಿಗೆ ದರ 20 ಸಾವಿರ ರು.ಗೂ ಹೆಚ್ಚಾಗಿದೆ. ಇಲ್ಲಿನ ಊಟ, ತಿಂಡಿ ಬೆಲೆಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ರೆಸಾರ್ಚ್‌ಗಳಲ್ಲಿನ ಟೆಂಟ್‌ ಬಾಡಿಗೆ 250 ರು.ಗಳಿಂದ 600-700 ರು.ಗೆ ಏರಿಕೆಯಾಗಿದೆ. 5-7 ಸಾವಿರ ರು. ಇದ್ದ ಡಿಜೆ ಬಾಡಿಗೆ 6-7 ಸಾವಿರ ರು.ಗೆ ಏರಿಕೆಯಾಗಿದೆ. ಮೈಸೂರಿನ ಹೋಟೆಲ್‌ಗಳಲ್ಲಿ ದರವನ್ನು ಶೇ.20 ರಿಂದ 25 ರಷ್ಟುಹೆಚ್ಚಳ ಮಾಡಲಾಗಿದೆ. ಇದೇ ವೇಳೆ, ಖಾಸಗಿ ಟೂರಿಸ್ಟ್‌ ಬಸ್‌ಗಳು ಕೂಡ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿವೆ.

Latest Videos
Follow Us:
Download App:
  • android
  • ios