ಕರುನಾಡಲ್ಲಿ ಲಾಕ್ ಡೌನ್ ಮತ್ತೆ ಫಿಕ್ಸ್..!? ಸದ್ಯ ಜೂನ್ 7 ರವರೆಗೆ ಲಾಕ್‌ಡೌನ್ ಇದ್ದು ಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸೋದು ಖಚಿತ ಜೂನ್ 13 ರವರೆಗೂ ಕರುನಾಡಿಗೆ ಮತ್ತೆ ಬೀಗ ಬೀಳುವ ಸಾಧ್ಯತೆ ಇದೆ. 

 ಬೆಂಗಳೂರು (ಮೇ.31): ಕರುನಾಡಲ್ಲಿ ಲಾಕ್ ಡೌನ್ ಮತ್ತೆ ಫಿಕ್ಸ್..!? ಸಾಧ್ಯತೆ ಇದೆ. ಸದ್ಯ ಜೂನ್ 7 ರವರೆಗೆ ಲಾಕ್‌ಡೌನ್ ಇದ್ದು ಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸೋದು ಖಚಿತ ಎನ್ನಲಾಗಿದೆ.

ಜೂನ್ ಏಳರ ಬಳಿಕವೂ ಬಹುತೇಕ ಲಾಕ್ ಡೌನ್ ಫಿಕ್ಸ್ ಆದಂತಿದೆ. ಮತ್ತೆ ಒಂದು ವಾರದ ಕಾಲ ಲಾಕ್ ಡೌನ್ ಮುಂದುವರಿಕೆ ಮಾಡಲಾಗುತ್ತದೆ ಎನ್ನಲಾಗಿದೆ. ಸದ್ಯದ ಪಾಸಿಟಿವಿಟಿ ರೇಟ್ ಆಧರಿಸಿ ಲಾಕ್ ಡೌನ್ ಮುಂದುವರಿಕೆ ಮಾಡಲಾಗುತ್ತದೆ. ಇದರಿಂದ ಜೂನ್ 13 ರವರೆಗೂ ಕರುನಾಡಿಗೆ ಮತ್ತೆ ಬೀಗ ಬೀಳುವ ಸಾಧ್ಯತೆ ಇದೆ. 

ತಾಂತ್ರಿಕಾ ಸಲಹಾ ಸಮಿತಿ ತಜ್ಞರು ಕೂಡ ಒಂದು ವಾರ ಸೆಮಿ‌ ಲಾಕ್ ಡೌನ್ ವಿಸ್ತರಣೆಗೆ ಒಲವು ತೋರಿದ್ದು, ಜೂನ್ 13 ರ ಬಳಿಕ ಪ್ರತಿ ವಾರಕ್ಕೊಮ್ಮೆ ತಜ್ಞರ ವರದಿ ಪಡೆಯಬೇಕು. ತಜ್ಞರ ವರದಿ ಆಧಾರದ ಮೇಲೆ ಆರ್ಥಿಕ ಚಟುವಟಿಕೆಗಳ ಸಡಿಲಿಕೆ ಮಾಡಬೇಕು. ನಗರ ಪ್ರದೇಶದಲ್ಲಿ ಕಂಟ್ರೋಲ್ ಗೆ ಬಂದರೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರು ಡೆತ್ ರೇಟ್ ಕಡಿಮೆಯಾಗುತ್ತಿಲ್ಲ. 
ಹೀಗಾಗಿ ಇನ್ನು ಒಂದು ವಾರಗಳ ಲಾಕ್ ಡೌನ್ ಮುಂದುವರಿಸಲು ತಜ್ಞರ ಸಲಹೆ ಇದೆ. 

ಲಾಕ್‌ಡೌನ್‌ ಎಫೆಕ್ಟ್: ನೌಕರಿಗೆ ಗುಡ್‌ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!

ಹೀಗಾಗಿ ಜೂನ್ ಏಳರ ನಂತರವೂ ಒಂದು ವಾರ ರಾಜ್ಯಕ್ಕೆ ಬೀಗ ಬೀಳುವುದು ಬಹುತೇಕ ಫಿಕ್ಸ್ ಆದಂತಿದೆ.

ತಜ್ಞರ ಮಾಹಿತಿ : ಲಾಕ್ ಡೌನ್ ಮುಂದುವರಿಕೆ ಹಾಗೂ ಅನ್ ಲಾಕ್ ಕುರಿತು ಯಾವುದೇ ವರದಿ ನೀಡಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮಾಹಿತಿ ನೀಡಿದ್ದಾರೆ. ಸುವರ್ಣ ನ್ಯೂಸ್.ಕಾಂ ಜೊತೆ ಇಂದು ಮಾತನಾಡಿದ ತಾಂತ್ರಿಕ ಸಲಹಾ ಸಮಿತಿಯ ಡಾ. ಸಿ.ಎನ್ ಮಂಜುನಾಥ್ ಹಾಗೂ ಡಾ. ವಿ ರವಿ ಲಾಕ್‌ಡೌನ್ ತೆರವು ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು. 

ಇನ್ನು ಈ ಬಗ್ಗೆ ಮಾತನಾಡಿದ ಡಾ. ಸಿಎನ್ ಮಂಜುನಾಥ್ ಸದ್ಯಕ್ಕೆ ಇನ್ನೂ ಲಾಕ್ ಡೌನ್ ‌ಮುಂದುವರಿಸಬೇಕಾ ಬೇಡವಾ ಎನ್ನುವುದರ ವಿಶ್ಲೇಷಣೆ ನಡೆಯುತ್ತಿದೆ. ಇನ್ನೂ ಸಮಯ ಇದೆ ಇನ್ನೂ ಮೂರ್ನಾಲ್ಕು ದಿನ ಕಾದು ನೋಡಬೇಕು. 10,000 ಕ್ಕಿಂತ ಕಡಿಮೆ ಕೇಸ್ ಗಳು ಬರುವಂತಾದರೆ ಅನ್ ಲಾಕ್ ಹಂತ ಹಂತವಾಗಿ ಮಾಡಬೇಕು. ಸದ್ಯ 20 ಸಾವಿರದ ತನಕ ಕೇಸ್ ಗಳು ಬರ್ತಿದೆ. ಪಾಸಿಟಿವಿಟಿ ರೇಟ್ ಕನಿಷ್ಠ ಅಂದರೂ 10% ಒಳಗೆ ಇರಬೇಕು ಎಂದರು. 

ಲಾಕ್‌ಡೌನ್‌ ಕುರಿತು ಕಾದು ನೋಡಿ ನಿರ್ಧಾರ: ಜಗದೀಶ್‌ ಶೆಟ್ಟರ್‌

 ಇನ್ನು ಲಾಕ್‌ಡೌನ್ ಬಗ್ಗೆ ಮಾತನಾಡಿದ ಡಾ. ವಿ ರವಿ ಸಿಎಂ 5 ನೇ ತಾರೀಕು ಸಭೆ ಕರೆದಿದ್ದಾರೆ. ಸಭೆಯಲ್ಲಿ ನಮ್ಮ ಅಭಿಪ್ರಾಯವನ್ನು. ತಿಳಿಸುತ್ತೇವೆ. ಸದ್ಯದ ಮಟ್ಟಿಗೆ ಯಾವ ತೀರ್ಮಾನವನ್ನೂ ತಾಂತ್ರಿಕ ಸಲಹಾ ಸಮಿತಿ ಕೈಗೊಂಡಿಲ್ಲ. ಪಾಸಿಟಿವಿಟಿ ರೇಟ್ 5% ಕ್ಕಿಂತ ಕಡಿಮೆ ಆದಾಗ ಮಾತ್ರ ಅನ್ ಲಾಕ್ ಗೆ ಹೋಗಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯ. ತಾಂತ್ರಿಕ ಸಲಹಾ ‌ಸಮಿತಿ ಸದ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದೆ. ನಂತರದಲ್ಲಿ ವರದಿಯನ್ನ ಸರ್ಕಾರಕ್ಕೆ ನೀಡುತ್ತೇವೆ ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona