ಸಿಎಂ ಸಭೆ ಅಂತ್ಯ: ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧಾರ, ಎಷ್ಟು ದಿನ..?

* ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆಗೆ ತೀರ್ಮಾನ
* ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ನಡೆಸ ಸಭೆಯಲ್ಲಿ ನಿರ್ಧಾರ
* ಜೂನ್ 07ರ ಬಳಿಕೆ ಲಾಕ್‌ಡೌನ್ ವಿಸ್ತರಣೆ

BSY Meeting One Week Lockdown extension In Karnataka after June 7th rbj

ಬೆಂಗಳೂರು, (ಜೂನ್.02): ಇದೇ ಜೂನ್ 07ರ ಬಳಿಕೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ? ಬೇಡವೋ ಎನ್ನುವ ಬಗ್ಗೆ ಚರ್ಚಿಸಲು ಸಿಎಂ ಬಿಎಸ್‌ವೈ ಕರೆದಿದ್ದ ಸಭೆ ಅಂತ್ಯವಾಗಿದೆ.

ಇಂದು (ಬುಧವಾರ) ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಾಕ್ ಡೌನ್ ಒಂದು ವಾರ ಮುಂದುವರೆಸುವ ಕುರಿತು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಲಾಕ್‌ಡೌನ್‌ ಬಗ್ಗೆ ಸಿಎಂ ಹೇಳಿಕೆ...ಜನಾಭಿಪ್ರಾಯ... ಮತ್ತೆ ಸಂಪುಟ ವಿಸ್ತರಣೆ:3 ಮಹತ್ವದ ಸುದ್ದಿಗಳು

ಜೂನ್ 07 ಬಳಿಕೆ ಒಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಲು ಸಭೆಯಲ್ಲಿ ನಿರ್ಧಾರವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಳೆ (ಗುರುವಾರ) ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಸಭೆಯಲ್ಲಿ ಕೊರೋನಾ 3ನೇ ಅಲೆಗೆ ಸಂಬಂಧಿಸಿದ ಪೂರ್ವ ಸಿದ್ಧತೆ ಕುರಿತಂತೆ ರಚಿಸಲಾಗಿರುವ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಕಾರ್ಯಪಡೆಯೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಸಭೆಯಲ್ಲಿ ಕೋವಿಡ್ ಉಸ್ತುವಾರಿಗಳು, ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು.

ಲಾಕ್​ಡೌನ್ ಕೊಂಚ ಸಡಿಲಿಕೆ
ಮತ್ತೊಂದೆಡೆ ರಾಜ್ಯ ಸರ್ಕಾರ ಆರ್ಥಿಕ ಚಟುವಟಿಕೆ ಚುರುಕಿಗೆ ಹೊಸ ಪ್ಲ್ಯಾನ್ ಮಾಡಿದ್ದು, ಅದರ ಅನ್ವಯ ಲಾಕ್​ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಸಡಿಲಿಕೆ ಮಾಡಿದೆ.

ರಫ್ತು ಆಧಾರಿತ ಕೈಗಾರಿಕೆಗಳಿಗೆ ಸರ್ಕಾರದಿಂದ ಅವಕಾಶ ಲಭ್ಯವಾಗಿದೆ. ಶೇಕಡಾ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆ ಮಾಡಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ನಾಳೆಯಿಂದಲೇ ಈ ನಿಯಮ ಅನ್ವಯ ಆಗುವಂತೆ ಸರ್ಕಾರ ಆದೇಶ ನೀಡಿದೆ.

Latest Videos
Follow Us:
Download App:
  • android
  • ios