ಬೆಂಗಳೂರು, (ಏ.19): ಕೊರೋನಾ ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಸಂಕಷ್ಟ ತಂದಿಟ್ಟಿದೆ. ಮಾಹಾಮಾರಿ ಅಟ್ಟಹಾಸಕ್ಕೆ ಎಲೆಂದರಲ್ಲೇ ಲಾಕ್‌ ಮಾಡಲಾಗಿದೆ. ಜನರ ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ.

ಅದರಲ್ಲೂ ಬಹಳ ಅನಾರೋಗ್ಯವಿಲ್ಲದಿರುವವರಿಗೆ ಔ‍ಷಧಿ ಅಥವಾ ಆಸ್ಪತ್ರೆಗೆ ಹೋಗಲು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಹೌದು...ಆಸ್ಪತ್ರೆಗೆ ಹೋಗಲು ಗರ್ಭಿಣಿ ಮಹಿಳೆಯೊಬ್ಬರ ಪರದಾಟ ಇಲ್ಲಿದೆ ನೋಡಿ.

ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ

 ಹೆರಿಗೆ ಬೇನೆ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗರ್ಭಿಣಿ ಮತ್ತು ಆಕೆಯ ಪತಿ ಯಾವುದಾದರೂ ಆಸ್ಪತ್ರೆಯೊ, ಕ್ಲಿನಿಕ್ ಸಿಗಬಹುದು ಎಂದು 7 ಕಿಲೋ ಮೀಟರ್ ನಡೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. 

ಕೊನೆಗೆ ಒಂದು ಡೆಂಟಲ್ ಕ್ಲಿನಿಕ್ ತೆರೆದಿರುವುದು ಅವರ ಕಣ್ಣಿಗೆ ಕಾಣಿಸಿತು. ಅಲ್ಲಿಗೆ ಬಂದು ದಂತ ವೈದ್ಯೆ ಸಹಾಯ ಕೋರಿದ್ದಾರೆ. ಕೂಡಲೇ ಅವರನ್ನು ಕರೆಸಿಕೊಂಡ ವೈದ್ಯೆ ಮಹಿಳೆಯ ಹೆರಿಗೆಗೆ ನೆರವಾದರು.

ಶಿಶು ಜನನವಾದ ಕೂಡಲೇ ಅಮ್ಮ ಮತ್ತು ಮಗುವನ್ನು ವೈದ್ಯೆ ಡಾ. ರಮ್ಯಾ ಅವರು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಬೇರೊಂದು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಓರ್ವ ದಂತ ವೈದ್ಯೆಯಾಗಿದ್ದರೂ ಸಹ ಗರ್ಭಿಣಿಯ ಸಂಕಟ ನೋಡಲಾಗದೇ ಡಾ. ರಮ್ಯಾ ಅವರೇ ಹೆರಿಗೆ ಮಾಡಿಸಿರುವುದು ವಿಶೇಷ. ಇವರಿಗೊಂದು ಸೆಲ್ಯೂಟ್ ಹೇಳಿ..