ಮೆಟ್ರೋದ 1 ಹಾಗೂ 2ನೇ ಹಂತದ ಯೋಜನೆಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಿದ್ದ ಎಎಫ್‌ಡಿ (ಏಜೆನ್ಸೆ ಫ್ರಾನ್ಸೈಸ್ ಡಿ ಡೆವಲಪ್‌ಮೆಂಟ್) ಮೂರನೇ ಹಂತದ ಯೋಜನೆಗೂ ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ನೆರವಾಗುವ ಸಾಧ್ಯತೆಯಿದೆ.
ಬೆಂಗಳೂರು (ಮಾ.20) : ಮೆಟ್ರೋದ 1 ಹಾಗೂ 2ನೇ ಹಂತದ ಯೋಜನೆಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಿದ್ದ ಎಎಫ್‌ಡಿ (ಏಜೆನ್ಸೆ ಫ್ರಾನ್ಸೈಸ್ ಡಿ ಡೆವಲಪ್‌ಮೆಂಟ್) ಮೂರನೇ ಹಂತದ ಯೋಜನೆಗೂ ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ನೆರವಾಗುವ ಸಾಧ್ಯತೆಯಿದೆ.
ಕಳೆದ ವಾರ ಆಗಮಿಸಿದ್ದ 10 ಮಂದಿಯಿದ್ದ ಫ್ರಾನ್ಸ್‌ನ ನಿಯೋಗ ಮೆಟ್ರೋದ ಎರಡನೇ ಹಂತ ಕಾಮಗಾರಿ ವೀಕ್ಷಿಸಿ, ಮೂರನೇ ಹಂತದ ಕಾಮಗಾರಿಗಳ ವಿವರವನ್ನು ಬಿಎಂಆರ್‌ಸಿಎಲ್(BMRCL) ಅಧಿಕಾರಿಗಳಿಂದ ಪಡೆದಿದೆ. ಈ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರ ಜತೆ ನಡೆದ ಸಭೆಯಲ್ಲಿ ನಿಯೋಗದ ಮುಂದೆ ಮೂರನೇ ಹಂತದ ಯೋಜನೆಗೆ ಹಣಕಾಸಿನ ನೆರವಿನ ಬಗೆಗೂ ಚರ್ಚೆಯಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ 1-2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸೌಲಭ್ಯ!
ಮೆಟ್ರೊ 1ನೇ ಹಂತದ ಯೋಜನೆಗೂ ಸಾಲ ನೀಡಿದ್ದ ಎಎಫ್‌ಡಿ, 2ನೇ ಹಂತದ ಯೋಜನೆಗೆ .1600 ಕೋಟಿ ಸಾಲ ಒದಗಿಸಿತ್ತು. ಇದರಿಂದ ರೈಲು, ಸಿಗ್ನಲಿಂಗ್ ಹಾಗೂ ಇನ್ನಿತರೆ ಕಾಮಗಾರಿ ನಡೆಸಲಾಗಿತ್ತು. ಇದೀಗ ಮೂರನೇ ಹಂತದ ಯೋಜನೆಯ ಡಿಪಿಆರ್ ಸಿದ್ಧವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಹೋಗಿದೆ.
ಮೆಟ್ರೊ ಮೂರನೇ ಹಂತದಲ್ಲಿ ಎರಡು ಕಾರಿಡಾರ್‌ಗಳು ನಿರ್ಮಾಣ ಆಗಲಿವೆ. ಮೊದಲ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ- ಹೆಬ್ಬಾಳದವರೆಗೆ ಒಟ್ಟು 31 ಕಿ.ಮೀ. ಉದ್ದವಿದ್ದು, ಒಟ್ಟು 22 ನಿಲ್ದಾಣಗಳನ್ನು ಹೊಂದಿದೆ. ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿ ನಿಲ್ದಾಣದಿಂದ-ಕಡಬಗೆರೆಯವರೆಗಿದ್ದು ಒಟ್ಟು 11 ಕಿ.ಮೀ. ಉದ್ದದ ಮಾರ್ಗವಾಗಲಿದ್ದು, 9 ನಿಲ್ದಾಣ ಹೊಂದಿರಲಿದೆ.
Bengaluru: ಮಾ.10ರ ನಂತರ ಕೆ.ಆರ್.ಪುರ- ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಆರಂಭ: ಐಟಿ ಉದ್ಯೋಗಿಗಳಿಗೆ ಸಂತಸದ ಸುದ್ದಿ
ಒಟ್ಟು 44.65 ಕಿ.ಮೀ. ಯೋಜನೆಗೆ .13 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹಂತದ ಯೋಜನೆಯಿಂದ ಪ್ರತಿ ದಿನ 6.35 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.
