Asianet Suvarna News Asianet Suvarna News

'ಸಾಹಿತಿಗಳೂ ರಾಜಕಾರಣಿಗಳೇ' ಎಂಬ ಡಿಸಿಎಂ ಹೇಳಿಕೆಗೆ ತಿರುಗಿಬಿದ್ದ ಪ್ರಗತಿಪರರು!

'ಸಾಹಿತಿಗಳೂ ರಾಜಕಾರಣಿಗಳೇ' ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು ಪ್ರಗತಿಪರರ ಆಕ್ರೋಶ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

Literature outraged against DCM DK Shivakumar and shivaraj tangadagi for controversy stats at gadag rav
Author
First Published Jun 22, 2024, 4:02 PM IST

ಗದಗ (ಜೂ.22): 'ಸಾಹಿತಿಗಳೂ ರಾಜಕಾರಣಿಗಳೇ' ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು ಪ್ರಗತಿಪರರ ಆಕ್ರೋಶ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಗದಗನಲ್ಲಿಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಗತಿಪರ ಸಾಹಿತಿ ಬಸವರಾಜ್ ಸೂಳಿಭಾವಿ ಅವರು, ಆ ರೀತಿ ಹೇಳಿಕೆ ನೀಡಿರುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಡಿಸಿಎಂಗೆ ಬುದ್ಧಿ ಹೇಳಲು  ಕೇಳಿಕೊಂಡಿದ್ದೇನೆ. ವಿಚಾರವಾದಿಗಳ, ಪ್ರಗತಿಪರರ ಆಶಯದಂತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬರಹಗಾರರನ್ನ, ಸಾಹಿತಿಗಳನ್ನ ಅವಮಾನಿಸುವ, ದರ್ಪ ತೋರುವ ಕೃತ್ಯ ದುರಂತವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇರಿದ ಅಕಾಡೆಮಿಗಳು ಸ್ವಾಯತ್ತವಾಗಿ ಕೆಲಸ ಮಾಡುತ್ತವೆ. ಹೀಗಿರುವಾಗ ಅಕಾಡೆಮಿ ಅಧ್ಯಕ್ಷರನ್ನ ಪಕ್ಷದ ಕಚೇರಿಗೆ ಕರೆದು ಸಭೆ ಮಾಡಿದ್ದು ಸಂವಿಧಾನಿಕ ಕ್ರಮ ಅಲ್ಲ. ಸಭೆಯಲ್ಲಿ ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡುವ ಬಗ್ಗೆ ಹೇಳಿದ್ದಾರೆ. ಇಷ್ಟು ಸಾಲದ್ದಕ್ಕೆ ಡಿಸಿಎಂ ಅವರು 'ನಾನೇ ಸಭೆ ಕರೆದಿದ್ದೇನೆ, ಸಾಹಿತಿಗಳೂ ರಾಜಕಾರಣಿಗಳು. ಅದರಲ್ಲಿ ತಪ್ಪೇನಿದೆ' ಅಂತಾರೆ ಪ್ರಶ್ನಿಸಿ ಸಾಂಸ್ಕೃತಿಕ ವಲಯವನ್ನ ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಪಕ್ಷದ ನಿರ್ಧಾರ ಹೀಗಾಗಿ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳ್ತಾರೆ, ಅವರ ಹೇಳಿಕೆಯೇ ಕಾಂಗ್ರೆಸ್ ಪಕ್ಷದ ಸಾಂಸ್ಕೃತಿಕ ಅಧಃಪತನಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

ಪೆಟ್ರೋಲ್ ಡೀಸೆಲ್ ದರ ಏರಿಕೆ: ಸಿಎಂ ಆಡಳಿತ ನಡೆಸಲು ಆಗದಿದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಯತ್ನಾಳ್ ಕಿಡಿ

ಪಕ್ಷದ ನಿರ್ಧಾರ ಅನ್ನೋದಾದ್ರೆ ಸಚಿವ ಸಂಪುಟ ಸಭೆಯನ್ನ ಪಕ್ಷದ ಕಚೇರಿಯಲ್ಲಿ ಕರೆಯಿರಿ. ಸಾಂಸ್ಕೃತಿಕ ರಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಸರಿಯಲ್ಲ. ಸಂಪುಟದ ಸದಸ್ಯರಿಗೆ ತಿಳಿಹೇಳುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೇಳಿಕೊಂಡಿದ್ದೇವೆ‌‌. ಸಿಎಂ ಮಾತನಾಡುತ್ತಿರೋದು ಅನುಮಾನ ಮೂಡಿಸಿದೆ ಎಂದಿದ್ದಾರೆ.

ಇದೇ ವೇಳೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, 'ಅಕಾಡೆಮಿಯಲ್ಲಿ ಅವಕಾಶ ಸಿಗದವರು ವಿರೋಧಿಸುತ್ತಿದ್ದಾರೆ'ಎಂದು ಹೇಳಿದ್ದಾರೆ. ಸಾಹಿತಿಗಳು ರಾಜಕಾರಣಿಗಳ ಹಿಂದೆ ಓಡಾಡುತ್ತಿದ್ದರು ಅಂತೆಯೂ ಹೇಳಿದ್ದಾರೆ. ಹಾಗಾದರೆ ಹಿಂದೆ ಓಡಾಡಿದ ಸಾಹಿತಿಗಳ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡಲಿ, ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಪಡೆಯಲಿ ಎಂದು ರಮೇಶ್ ಬಾಬುಗೆ ಸವಾಲು ಹಾಕಿದರು.

ನಾನು, ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತಾಡ್ತೇವೆ: ಸಚಿವ ಶರಣ್ ಪ್ರಕಾಶ್ ಪಾಟೀಲ್

ಕಾಂಗ್ರೆಸ್ ಪಕ್ಷವನ್ನ ಜನರಿಂದ ದೂರ ತೆಗೆದುಕೊಂಡು ಹೋಗುವ ಕೆಲಸವನ್ನ ಡಿಸಿಎಂ, ಸಚಿವ ತಂಗಡಗಿ ಮಾಡ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios