ರಾಷ್ಟ್ರೀಯ ಹಬ್ಬಗಳ ಪಟ್ಟಿಗೆ ಬುದ್ಧ ಜಯಂತಿ ಸೇರಿಸುವಂತೆ 30 ಸಾಹಿತಿಗಳಿಂದ ಸಿಎಂಗೆ ಪತ್ರ !
ಭಗವಾನ್ ಬುದ್ಧರ ಜಯಂತಿಯನ್ನು ಕರ್ನಾಟಕದ ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಡಾ.ದೇವನೂರು ಮಹಾದೇವ ಸೇರಿದಂತೆ ಸುಮಾರು 30 ಮಂದಿ ಸಾಹಿತಿಗಳು, ವಿಚಾರವಾದಿಗಳು, ಪ್ರಜ್ಞಾವಂತರು ಗಣ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು (ಸೆ.9) : ಭಗವಾನ್ ಬುದ್ಧರ ಜಯಂತಿಯನ್ನು ಕರ್ನಾಟಕದ ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಡಾ.ದೇವನೂರು ಮಹಾದೇವ ಸೇರಿದಂತೆ ಸುಮಾರು 30 ಮಂದಿ ಸಾಹಿತಿಗಳು, ವಿಚಾರವಾದಿಗಳು, ಪ್ರಜ್ಞಾವಂತರು ಗಣ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಮಹಾವೀರ, ಕನಕದಾಸರು ಸೇರಿದಂತೆ ಅನೇಕ ದಾರ್ಶನಿಕರ ಜಯಂತಿಗಳನ್ನು ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅವುಗಳ ಆಚರಣೆಯನ್ನು ಜಾರಿಗೆ ತಂದಿದೆ. ಆದರೆ, ಬುದ್ಧ ಜಯಂತಿ(Buddha Jayanti)ಯನ್ನು ರಾಷ್ಟ್ರೀಯ ಹಬ್ಬ(National festival list)ದ ಪಟ್ಟಿಗೆ ಸೇರಿಸದಿರುವುದು ಆಶ್ಚರ್ಯಕರವಾಗಿದೆ. ಇಂದಿನ ವಿಷಯ ಪರಿಸ್ಥಿತಿಯಲ್ಲಿ ಬುದ್ಧಜಯಂತಿಯ ಆಚರಣೆಯು ಸಹಿಷ್ಣತೆ ಭ್ರಾತೃತ್ವ ಸಮ ಸಮಾಜದ ನಿರ್ಮಾಣ, ಶಾಂತಿ, ಸೌಹಾರ್ದತೆ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ