ಯಳಂದೂರು ಪಟ್ಟಣದ ಶ್ರೀರಂಗ ವೈನ್ಸ್ ಶಾಪ್‌ನಲ್ಲಿ MRP ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮದ್ಯಪ್ರಿಯರು ಪ್ರತಿಭಟನೆ ನಡೆಸಿದ್ದಾರೆ. ಕೈಯಲ್ಲಿ ಬಾಟಲಿ ಹಾಗೂ ಬಿಲ್ ಹಿಡಿದು ವೈನ್ಸ್ ಸ್ಟೋರ್ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚಾಮರಾಜನಗರ (ಫೆ.5): ಎಂಆರ್‌ಪಿ ದರದಲ್ಲಿ ಮಾರಾಟ ಮಾಡದೇ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆ ರೊಚ್ಚಿಗೆದ್ದ ಮದ್ಯಪ್ರಿಯರು ಬಾರ್ ಮುಂದೆಯೇ ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.
ಶ್ರೀರಂಗ ವೈನ್ಸ್ ಶಾಪ್‌ನಲ್ಲಿ MRP ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಮದ್ಯಪ್ರಿಯರು. ಹೆಸರಿಗೆ ಎಂಆರ್‌ಪಿ ಬೋರ್ಡ್ ಹಾಕಿದ್ದಾರೆ. ಆದರೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನಿನ್ನೆ ರಾತ್ರಿ ವೈನ್ಸ್ ಸ್ಟೋರ್ ಮುಂದೆ ಜಮಾಯಿಸಿದ ಕುಡುಕರು ರುದ್ರಾವತಾರ ತಾಳಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಶಾಕ್: ಕಾಂಗ್ರೆಸ್ ಗ್ಯಾರಂಟಿ ಸರ್ಕಾರದಿಂದ ಬಿಯರ್ ದರ ಏರಿಕೆ ತೀರ್ಮಾನ!
ಕೈಯಲ್ಲಿ ಬಾಟಲಿ ಹಾಗೂ ಬಿಲ್ ಹಿಡಿದು ನಿಂತ ಕುಡುಕರು ವೈನ್ಸ್ ಸ್ಟೋರ್ ಮಾಲೀಕರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಕುಡುಕರ ಕೋಪಕ್ಕೆ ಬೆಚ್ಚಿಬಿದ್ದ ಬಾರ್ ಮಾಲೀಕರು, ಸಿಬ್ಬಂದಿ. ಕೊನೆಗೆ ರಕ್ಷಣೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹರಸಾಹಸಪಟ್ಟು ಮದ್ಯಪ್ರಿಯರ ಮನವೊಲಿಸುವಲ್ಲಿ ಯಶಸ್ವಿಯಾದ ಪೊಲೀಸರು ಪೊಲೀಸರ ಮನವೊಲಿಸಿದ ಬಳಿಕ ಮನೆಕಡೆ ನಡೆದಿದ್ದಾರೆ.
