ಬೆಂಗಳೂರು, (ಜೂನ್.27): ನಾಳೆಯ ಭಾನುವಾರ ಬಿಟ್ಟು ಮುಂದಿನ ಭಾನುವಾರದಿಂದ ಅಂದ್ರೆ ಜುಲೈ 05ರಿಂದ ಪ್ರತಿ ಭಾನುವಾರವೂ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದಲ್ಲದೆ ಪ್ರತಿದಿನವೂ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ವಿಧಿಸಲು ತೀರ್ಮಾನಿಸಲಾಗಿದೆ. ಈ ಕರ್ಫ್ಯೂ ನಾಳೆಯಿಂದಲೇ (ಭಾನುವಾರ) ಜಾರಿಗೆ ಬರಲಿದ್ದು, ಲಾಕ್‌ಡೌನ್‌ ಮಾತ್ರ ಮುಂದಿನ ಭಾನುವಾರದಿಂದ (ಜುಲೈ 5) ಜಾರಿಯಾಗಲಿದೆ.

ಪ್ರತಿ ಭಾನುವಾರ ಕರ್ನಾಟಕ ಕಂಪ್ಲೀಟ್ ಬಂದ್, ಸರ್ಕಾರಿ ನೌಕರರಿಗೆ 5 ದಿನ ಕೆಲಸ.!

ಭಾನುವಾರ ಮದ್ಯ ಬಂದ್
ಹೌದು...ಕುಡುಕರಿಗೆ ವಾರದಲ್ಲಿ ಒಂದು ದಿನ ಎಣ್ಣೆ ಸಿಗಲ್ಲ. ಜುಲೈ 5ರಿಂದ  ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಪ್ರತಿ ಭಾನುವಾರದಂದು ಮದ್ಯ ಅಂಗಡಿಗಳು ಬಂದ್ ಇರಲಿವೆ. ಅದು ಭಾನುವಾರವೇ ಮದ್ಯ ಸಿಗದಿರುವುದು ಎಣ್ಣೆ ಪ್ರಿಯರಿಗೆ ಕೊಂಚ ಬೇಸರ ತರಿಸಿದೆ. ಆದ್ರೂ ಸಂಡೇ ಪಾರ್ಟಿ ಮಾಡಬೇಕೆನ್ನುವರು ಪ್ಲಾನ್ ಮಾಡಿ ಶನಿವಾರವೇ ಸ್ಟಾಕ್ ಮಾಡಿಕೊಳ್ಳುತ್ತಾರೆ. ಏನೇ ಆಗಲಿ ಈ ಒಂದು ಎಣ್ಣೆ ಪ್ರಿಯರು ಸಮಾಧಾನದಿಂದ ಇರಬೇಕು.

ಅಗತ್ಯ ಸೇವೆ ಲಭ್ಯ
ಹೆಚ್ಚುತ್ತಿರುವ ಕೊರೋನಾ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಜುಲೈ 5ರಿಂದ ಪ್ರತಿ ಭಾನುವಾರ ಬಂದ್. ಆದ್ರೆ, ಆಟೋ-ಟ್ಯಾಕ್ಸಿ, ಕ್ಯಾಬ್, ಬಸ್ ಯಾವುದು ಓಡಾಡುವುದಿಲ್ಲ. ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ಇರುತ್ತದೆ.