ಇಂದು ಬೆಳಿಗ್ಗೆ 10.30 ಗಂಟೆ ನಂತರ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಲಿದ್ದಾರೆ.  ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಸೇರಿ ಇತರರ ಮೇಲೆ ದೂರು ದಾಖಲಾಗಿದೆ. 

ಮೈಸೂರು(ಸೆ.27):  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಂದೇ ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಇದೆ, ಹೌದು, ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ. 

ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ಕೋರ್ಟ್ ಆದೇಶ ಪಡೆದೆ ಮೈಸೂರಿಗೆ ಮರಳಿದ್ದಾರೆ. ಕೋರ್ಟ್ ಆದೇಶದೊಂದಿಗೆ ನಿನ್ನೆ(ಗುರುವಾರ) ರಾತ್ರಿ 11 ಗಂಟೆಗೆ ಮೈಸೂರಿಗೆ ಆಗಮಿಸಿದ್ದಾರೆ. 

ಸ್ವಯಂಪ್ರೇರಿತ ತನಿಖಾ ಅಧಿಕಾರಕ್ಕೆ ರಾಜ್ಯದ ಕತ್ತರಿ: ಸಿಬಿಐ ಮೇಲೆಯೇ ಸಿದ್ದರಾಮಯ್ಯ ದಾಳಿ..!

ಇಂದು ಬೆಳಿಗ್ಗೆ 10.30 ಗಂಟೆ ನಂತರ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಸೇರಿ ಇತರರ ಮೇಲೆ ದೂರು ದಾಖಲಾಗಿದೆ. 
14 ಸೈಟ್ ವಿಚಾರದಲ್ಲಿ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮಾಡಬೇಕಿದೆ. ಹೀಗಾಗಿ ಎಲ್ಲರ ಚಿತ್ತ ಮೈಸೂರು ಲೋಕಾಯುಕ್ತದತ್ತ ನೆಟ್ಟಿದೆ.