ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋದ ಹೊಸ ಹಳದಿ ಮಾರ್ಗದ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮೊದಲ ಬಾರಿ ‘ಪ್ಲಾಟ್‌ಫಾಮ್‌ರ್‍ ಸ್ಕ್ರೀನ್‌ ಡೋರ್‌’ (ಪಿಎಸ್‌ಡಿ) ಅಳವಡಿಕೆಗೆ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಸಿದ್ಧತೆ ಮಾಡಿಕೊಂಡಿದೆ.

ಬೆಂಗಳೂರು (ಜು.31) :  ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋದ ಹೊಸ ಹಳದಿ ಮಾರ್ಗದ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮೊದಲ ಬಾರಿ ‘ಪ್ಲಾಟ್‌ಫಾಮ್‌ರ್‍ ಸ್ಕ್ರೀನ್‌ ಡೋರ್‌’ (ಪಿಎಸ್‌ಡಿ) ಅಳವಡಿಕೆಗೆ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಸಿದ್ಧತೆ ಮಾಡಿಕೊಂಡಿದೆ.

ವರ್ಷಾಂತ್ಯಕ್ಕೆ ತೆರೆದುಕೊಳ್ಳಲಿರುವ ನಮ್ಮ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ (18.8 ಕಿ.ಮೀ.) ಮಾರ್ಗ ಚಾಲಕ ರಹಿತ ರೈಲು ಸಂಚಾರ ನಿರೀಕ್ಷೆಯಿದೆ. ಈ ಮಾರ್ಗದ ಕೋನಪ್ಪನ ಅಗ್ರಹಾರ ನಿಲ್ದಾಣದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪಿಎಸ್‌ಡಿ ಅಳವಡಿಸಲು ಬಿಎಂಆರ್‌ಸಿಎಲ್‌ ಟೆಂಡರ್‌ ಕರೆದಿದೆ.

Bengaluru: ಕೆ.ಆರ್.ಪುರ- ಬೈಯಪ್ಪನಹಳ್ಳಿಗೆ ಮೊದಲ ಮೆಟ್ರೋ ಸಂಚಾರ ಯಶಸ್ವಿ

ಈ ನಿಲ್ದಾಣದ ನಿರ್ಮಾಣಕ್ಕೆ ಇಸ್ಫೋಸಿಸ್‌ ಸಂಸ್ಥೆ .136 ಕೋಟಿಯನ್ನು ಬಿಎಂಆರ್‌ಸಿಎಲ್‌ಗೆ ನೀಡುತ್ತಿದೆ. ಪಿಎಸ್‌ಡಿಗೆ ತಗಲುವ ಹೆಚ್ಚುವರಿ ವೆಚ್ಚವನ್ನೂ ನೀಡಲು ಒಪ್ಪಿಗೆ ನೀಡಿದೆ. ಇಸ್ಫೋಸಿಸ್‌ಗೆ ಈ ನಿಲ್ದಾಣದಿಂದ ವಾಕ್‌ವೇ ಕೂಡ ಇರುವುದರಿಂದ ಸಂಸ್ಥೆಗೂ ಅನುಕೂಲವಾಗಲಿದೆ. ಅಲ್ಲದೆ ಅವರು ಮೂರು ಸಾವಿರ ಚದರ ಅಡಿಯಷ್ಟುವಾಣಿಜ್ಯ ಬಳಕೆಯ ಸ್ಥಳಾವಕಾಶವನ್ನೂ ನಿರ್ಮಿಸಿ ಕೊಡುತ್ತಿದ್ದಾರೆ.

ಮುಂದಿನ ತಿಂಗಳು ಜನಸಂಚಾರಕ್ಕೆ ಮುಕ್ತವಾಗಲಿರುವ ನೇರಳೆ ಮಾರ್ಗದ ಸುಮಾರು 4 ಕಿ.ಮೀ. ಉದ್ದದ ಮಾರ್ಗ ಸೇರಿದಂತೆ ಒಟ್ಟಾರೆ 73 ಕಿ.ಮೀ. ಮಾರ್ಗದ ನಡುವಿನ ಅಂಡರ್‌ಗ್ರೌಂಡ್‌ ಜಂಕ್ಷನ್‌ಗಳು ಸೇರಿ 63 ನಿಲ್ದಾಣಗಳಲ್ಲಿ ಎಲ್ಲಿಯೂ ಈ ವ್ಯವಸ್ಥೆ ಇಲ್ಲ. 750 ಕೆವಿ ವಿದ್ಯುತ್‌ ಲೈನ್‌ ಮೆಟ್ರೋ ಹಳಿಗಳ ನಡುವೆ ಹಾದು ಹೋಗಿದ್ದು, ತೀರಾ ಅಪಾಯಕಾರಿಯಾಗಿದೆ. ಹೀಗಾಗಿ ಒಂದೊಂದು ನಿಲ್ದಾಣದ ಪ್ಲಾಟ್‌ಫಾಮ್‌ರ್‍ನಲ್ಲಿ ಕನಿಷ್ಠ ನಾಲ್ವರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಿಎಂಆರ್‌ಸಿಎಲ್‌ ನೇಮಿಸಿದೆ. ಇವರು ಪ್ಲಾಟ್‌ಫಾಮ್‌ರ್‍ ಅಂಚಿಗೆ ಮಕ್ಕಳು, ಜನತೆ ಹೋಗದಂತೆ ನಿಗಾ ವಹಿಸುತ್ತಿದ್ದಾರೆ.

ದುರ್ಘಟನೆ ತಡೆ

ಅದಲ್ಲದೆ, ದೆಹಲಿ ಸೇರಿ ಇತರೆಡೆ ಮೆಟ್ರೋ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿವೆ. ಕಳೆದ ಫೆಬ್ರವರಿಯಲ್ಲಿ ನಮ್ಮ ಮೆಟ್ರೋದ ಮಹಾಕವಿ ಕುವೆಂಪು ರಸ್ತೆಯ ನಿಲ್ದಾಣದಲ್ಲೇ ಇಬ್ಬರು ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿದು ಎದುರಿನ ಪ್ಲಾಟ್‌ಫಾಮ್‌ರ್‍ಗೆ ಹೋಗಲು ಮುಂದಾಗಿದ್ದ ಘಟನೆಯೂ ನಡೆದಿತ್ತು. ಹೀಗಾಗಿ ಪ್ರಯಾಣಿಕರ ದೃಷ್ಟಿಯಿಂದ ಪಿಎಸ್‌ಡಿ ಅಳವಡಿಸಲು ತೀರ್ಮಾನಿಸಿರುವುದಾಗಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಮಾರ್ಗದಲ್ಲಿ ಗೇಟ್‌

ಹಳದಿ ಮಾರ್ಗವಲ್ಲದೆ ನಿರ್ಮಾಣ ಹಂತದಲ್ಲಿರುವ ಹೊಸ ಮಾರ್ಗಗಳಾದ ನಾಗವಾರ-ಕಾಳೇನ ಅಗ್ರಹಾರ ನಡುವಿನ ಗುಲಾಬಿ ಮಾರ್ಗ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲಿರುವ ನೀಲಿ ಮಾರ್ಗದ ಪ್ಲಾಟ್‌ಫಾಮ್‌ರ್‍ನಲ್ಲೂ ಪಿಎಸ್‌ಡಿ ಅಳವಡಿಸಲು ನಮ್ಮ ಮೆಟ್ರೋ ಮುಂದಾಗಿದೆ. ಇದಕ್ಕಾಗಿ ಬಿಎಂಆರ್‌ಸಿಎಲ್‌ನಿಂದ ಪಿಎಸ್‌ಡಿ ವಿನ್ಯಾಸ, ಅಳವಡಿಕೆ ಹಾಗೂ ನಿರ್ವಹಣೆಗೆ ಟೆಂಡರ್‌ ಕರೆಯಲಾಗಿದೆ.

ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ-ಮಗು ಸಾವು: 10 ಕೋಟಿ ಪರಿಹಾರಕ್ಕೆ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೊಟೀಸ್

ಹೇಗೆ ಕೆಲಸ?

ಪ್ಲಾಟ್‌ಫಾಮ್‌ರ್‍ ಸ್ಕ್ರೀನ್‌ ಡೋರ್‌ ಇದು ಪ್ಲಾಟ್‌ಫಾಮ್‌ರ್‍ ಅಂಚು ಹಾಗೂ ರೈಲ್ವೆ ಟ್ರ್ಯಾಕ್‌ ನಡುವೆ ತಡೆಗೋಡೆಯಂತೆ ಕೆಲಸ ಮಾಡುತ್ತದೆ. ಮೆಟ್ರೋ ಪ್ಲಾಟ್‌ಫಾಮ್‌ರ್‍ಗೆ ಬಂದಾಗ ಮಾತ್ರ ರೈಲಿನ ದ್ವಾರದೆದುರು ಪಿಎಸ್‌ಡಿ ಸ್ಲೈಡ್‌ ಮಾದರಿಯದಲ್ಲಿ ತೆರೆದುಕೊಳ್ಳಲಿದೆ. ಜೊತೆಗೆ ರೈಲು ಬಂದು ಹೋಗುವ ಸಂದರ್ಭದಲ್ಲಿ ಕೆಂಪು ಹಸಿರು ಹಳದಿ ಬಣ್ಣದ ವಿದ್ಯುದೀಪಗಳು ಕೂಡ ಉರಿಯಲಿವೆ. ಹೀಗಾಗಿ ಪ್ರಯಾಣಿಕರು ಮತ್ತಷ್ಟುಎಚ್ಚರಿಕೆ ವಹಿಸಲು ಸಾಧ್ಯವಾಗಲಿದೆ. ದೆಹಲಿ ಹಾಗೂ ಚೆನ್ನೈ ಮೆಟ್ರೋದಲ್ಲಿ ಈಗಾಗಲೇ ಪಿಎಸ್‌ಡಿ ಅಳವಡಿಕೆಯಾಗಿದೆ.