Asianet Suvarna News Asianet Suvarna News

ಮಳೆಯ ಅನಾಹುತ ಒಗ್ಗಟ್ಟಿನಿಂದ ಎದುರಿಸೋಣ: ಸಿಎಂ

ಮಳೆಯಿಂದ ಆಗಿರುವ ಇಂದಿನ ಸಂದರ್ಭವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ರಾಜಕೀಯ ಮಾಡುವುದಕ್ಕೆ ಇದು ಸಮಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಮಳೆ ಹಾನಿ ಕುರಿತು ನಗರ ಪರಿಶೀಲನೆಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Lets face rain disaster with unity says CM Basavaraj Bommai  rav
Author
First Published Sep 7, 2022, 6:08 AM IST

ಬೆಂಗಳೂರು (ಸೆ.7) : ಮಳೆಯಿಂದ ಆಗಿರುವ ಇಂದಿನ ಸಂದರ್ಭವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ರಾಜಕೀಯ ಮಾಡುವುದಕ್ಕೆ ಇದು ಸಮಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಮಳೆ ಹಾನಿ ಕುರಿತು ನಗರ ಪರಿಶೀಲನೆಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Bengaluru Flood: ಬೆಂಗಳೂರು ಪ್ರವಾಹಕ್ಕೆ ಕಾಂಗ್ರೆಸ್‌ ಕಾರಣ: ಸಿಎಂ ಬೊಮ್ಮಾಯಿ

ಬಿಬಿಎಂಪಿ ಅಧಿಕಾರಿಗಳು 24/7 ಕಳೆದ 4 ದಿನಗಳಿಂದ ಒಂದು ನಿಮಿಷವೂ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು, ವಲಯ ಆಯುಕ್ತರು ಅತ್ಯಂತ ಕಷ್ಟಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಮಹಾಜನತೆ ಇದನ್ನು ಮೆಚ್ಚಬೇಕು. ಏಕೆಂದರೆ ಇಷ್ಟುದೊಡ್ಡಪ್ರಮಾಣದ ಮಳೆ ಬಂದು ಎಂಥದ್ದೇ ಸಾಮರ್ಥ್ಯ ವಿರುವ ಚರಂಡಿಯಾದರೂ ನೀರು ತುಂಬಿ ಹರಿಯುತ್ತಿದೆ. ಕೆರೆಗಳೂ ತುಂಬಿವೆ. ಇದೊಂದು ವಿಶೇಷ ಸಂದರ್ಭ ಎಂದರು.

ಈಗಿನ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಸಹಕಾರ ನೀಡಿ ಸಹಕಾರಿಸಬೇಕು, ಹೊರತಾಗಿ ಬೇರೆ ವಿಚಾರಗಳನ್ನು ಮಾಡಬಾರದು. ಕೆರೆಗಳ ನೀರನ್ನು ಹರಿಸಲಾಗುತ್ತಿದೆ. ಕಾಲುವೆಗೆ ನೀರು, ಅತಿಕ್ರಮ ತೆರವು ಮತ್ತು ಬಹುತೇಕವಾಗಿ ಮಹದೇವಪುರ ಮತ್ತು ಬೊಮ್ಮನಹಳ್ಳಿಯಲ್ಲಿ ನಿಯಂತ್ರಣ ಮಾಡಲಾಗಿದೆ. 2-3 ಭಾಗದಲ್ಲಿ ಸಮಸ್ಯೆ ಇದ್ದು ಅಲ್ಲಿಯೂ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜಕೀಯ ಮಾಡಲು ಇದು ಸಂದರ್ಭವಲ್ಲ:

ಪಾಲಿಕೆಯ 8 ವಲಯಗಳಲ್ಲಿ 7 ವಲಯಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕವಿಲ್ಲ. ಮಹದೇವಪುರದಲ್ಲಿ ಅತಿಕ್ರಮಣದಿಂದ ಸಮಸ್ಯೆ ಉಂಟಾಗಿದೆ. ಅಲ್ಲಿನ ಜನ ಬಹಳಷ್ಟುಸಹಕಾರ ನೀಡಿದ್ದಾರೆ. ಕೆಲವೆಡೆ ತೆಗೆಯಲು ಸಹಾಯ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯರಿಗೆ ಅಭಿನಂದಿಸಬೇಕು. ಅವರ ಸಹಕಾರ ಇನ್ನೂ ಬೇಕು. ಬೆಂಗಳೂರು ಒಂದಾಗಿ ನಿಲ್ಲುವ ಸಂದರ್ಭ ಇದು. ವಿರೋಧ ಪಕ್ಷದವರೂ ಕೂಡ ಒಂದಾಗಿರುವ ಸನ್ನಿವೇಶ. ರಾಜಕೀಯ ಮಾಡಲು ಇದು ಸಂದರ್ಭವಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ರಾಜಕಾರಣ ಮಾಡುವುದು, ದೋಷಾರೋಪ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲಾ ಪರಿಮಿತರಿಗೆ, ಬಿಬಿಎಂಪಿಯಲ್ಲಿ ಕೆಲಸ ಮಾಡಿದ ಎಂಜಿನಿಯರ್‌ಗಳಿಗೆ ನಿವೃತ್ತ ಅಧಿಕಾರಿಗಳು, ಆಯುಕ್ತರು, ನೌಕರರು ಸಲಹೆ ಸೂಚನೆಗಳನ್ನು ನೀಡಿ, ಅನುಭವ ಹಂಚಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೆರೆ ಒತ್ತುವರಿ ತೆರವಿಗೆ ವಿರೋಧಿಸಿದ್ದೇ ಬಿಜೆಪಿ: ಸಿದ್ದು ತಿರುಗೇಟು

ಸಾರ್ವಜನಿಕರು ಸಹ ಯಾವ ರೀತಿ ಸುಧಾರಣೆ ತರಬಹುದು, ಜನರ ಕಷ್ಟಕಡಿಮೆ ಮಾಡಬಹುದು ಎಂದು ತಿಳಿಸಿದ ಅವರು, ಕೆಳ ಹಂತದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಇದನ್ನು ಯಾವ ರೀತಿ ಜನರಿಗೆ ಸಹಾಯ ಮಾಡಬಹುದು ಹಾಗೂ ನಿಭಾಯಿಸುವ ಬಗೆಯ ಬಗ್ಗೆ ಮುಕ್ತವಾಗಿ ಸಲಹೆ ನೀಡಲು ಕೋರಿದರು. ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

Follow Us:
Download App:
  • android
  • ios