ಕರ್ನಾಟಕ ಮತ್ತು ತಮಿಳುನಾಡು ಜನರು ಅಣ್ಣ-ತಮ್ಮಂದಿರಂತೆ ಇರಬೇಕು. ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು. ಅದನ್ನೇ ನಾನು ಪಾಲಿಸುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ಆ.22) :  ಕರ್ನಾಟಕ ಮತ್ತು ತಮಿಳುನಾಡು ಜನರು ಅಣ್ಣ-ತಮ್ಮಂದಿರಂತೆ ಇರಬೇಕು. ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು. ಅದನ್ನೇ ನಾನು ಪಾಲಿಸುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ 124 ಟಿಎಂಸಿ ಅಡಿಗಳಷ್ಟುಕಾವೇರಿ ನದಿ ನೀರಿನ ಅವಶ್ಯಕತೆಯಿದೆ. ಆದರೆ, ಸದ್ಯ 55 ಟಿಎಂಸಿ ಅಡಿ ನೀರು ಮಾತ್ರ ನಮ್ಮ ಬಳಿಯಿದೆ. ಕೆಆರ್‌ಎಸ್‌ನಲ್ಲಿ 22 ಟಿಎಂಸಿ, ಕಬಿನಿಯಲ್ಲಿ 6.6 ಟಿಎಂಸಿ ಹಾಗೂ ಹಾರಂಗಿಯಲ್ಲಿ 7 ಟಿಎಂಸಿ ನೀರಿದೆ. ಹೀಗಾಗಿ ನಾವು ಹೆಚ್ಚಿಗೆ ನೀರು ಬಿಟ್ಟಿಲ್ಲ. ಆದರೂ, ಆಗಸ್ಟ್‌ 31ರವರೆಗೆ ನೀರು ಬಿಡುವಂತೆ ತಮಿಳುನಾಡು ಕೇಳಿದೆ. ಆದರೆ, ನೀರು ಬಿಡಲು ಆಗುವುದಿಲ್ಲ ಎಂದು ಹೇಳಿದ್ದೇವೆ ಎಂದರು.

ರಾಮನಗರದಲ್ಲಿ ಹಿಡಿತ ಕಳೆದುಕೊಳ್ತಾ ಜೆಡಿಎಸ್..? ದಳಪತಿಗಳ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್..!

ಎಚ್‌.ಡಿ. ಕುಮಾರಸ್ವಾಮಿ ಅವರು 2021ರಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಜನ ಅಣ್ಣ-ತಮ್ಮಂದಿರಿದ್ದಂತೆ, ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು. ಅದನ್ನೇ ನಾನು ಪಾಲಿಸುತ್ತಿದ್ದೇನೆ. ಇನ್ನು ಬಿಜೆಪಿಯವರು ಕಾವೇರಿ ನದಿ ನೀರಿನ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ. ಬಿಜೆಪಿ ಶಾಸಕರು ಮಾಡಿದ್ದ ಆರೋಪಗಳಿಗೆಲ್ಲ ನಾನು ಮಾತನಾಡುವುದಿಲ್ಲ. ನಮ್ಮ ರಾಜ್ಯ, ಜನರನ್ನು ಕಾಪಾಡುವುದು ನನ್ನ ಕೆಲಸವಷ್ಟೇ ಎಂದರು. ಬಿಜೆಪಿ ಅಧಿಕಾರಿದಲ್ಲಿದ್ದಾಗ ಏನು ಮಾಡಿದರು, ಪ್ರಧಾನಿ ನರೇಂದ್ರ ಮೋದಿ ಅವರು ಏನು ಮಾಡಿದರು ಎಂಬುದು ಗೊತ್ತಿದೆ. ಅದು ಜನಕ್ಕೂ ತಿಳಿದಿದೆ ಎಂದು ತಿಳಿಸಿದರು.

ಎಚ್ಡಿಕೆ ನೈಸ್‌ ದಾಖಲೆ ಬಿಡುಗಡೆ ಮಾಡಲಿ: ಡಿಕೆಶಿ

ಬೆಂಗಳೂರು: ನೈಸ್‌ ಯೋಜನೆ ಅಕ್ರಮ ಕುರಿತು ದಾಖಲೆಗಳಿದ್ದರೆ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ. ದಾಖಲೆ ಬಿಡುಗಡೆ ಮಾಡದಂತೆ ಅವರನ್ನು ಯಾರೂ ತಡೆದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಡಿಕೆ ಬ್ರದರ್ಸ್‌ ವಿರುದ್ಧ ನೈಸ್‌ ಅಕ್ರಮದ ದಾಖಲೆ ನಾಳೆ ರಿಲೀಸ್‌: ಎಚ್‌ಡಿಕೆ

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರಾರ‍ಯರ ಆಸ್ತಿ ಎಲ್ಲೆಲ್ಲಿ ಇದೆ ಎಂಬುದೂ ನಮಗೆ ಗೊತ್ತಿದೆ. ಬಿಡದಿ, ಚನ್ನಪಟ್ಟಣಕ್ಕೆ ಏನೇನು ನಷ್ಟವಾಗಿದೆ ಎಂಬುದೂ ತಿಳಿದಿದೆ. ನಾನು ಎಷ್ಟುಹೆದರುತ್ತೇನೆ ಎಂಬುದು ಕುಮಾರಸ್ವಾಮಿ ಅವರಿಗೆ ತಿಳಿದಿದೆ. ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಬೇಕು ಎಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗೆಲ್ಲ ಉತ್ತರ ಕೊಡೋಕೆ ಆಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.