Asianet Suvarna News Asianet Suvarna News

ಈ ಅವಧಿಯಲ್ಲೇ ಪರಂ ಸಿಎಂ ಆಗಲಿ: ಸಚಿವ ರಾಜಣ್ಣ ಅಚ್ಚರಿ ಹೇಳಿಕೆ!

ರಾಜ್ಯದಲ್ಲಿ ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ಸಿಗರಲ್ಲೇ ಗುಸುಗುಸು ಕೇಳಿಬರುತ್ತಿರುವ ನಡುವೆಯೇ, ‘ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Let dr g parameshwar become CM in this period says Minister KN Rajannas statement at tumakuru rav
Author
First Published Aug 21, 2023, 5:16 AM IST

ತುಮಕೂರು (ಆ.21) :  ರಾಜ್ಯದಲ್ಲಿ ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ಸಿಗರಲ್ಲೇ ಗುಸುಗುಸು ಕೇಳಿಬರುತ್ತಿರುವ ನಡುವೆಯೇ, ‘ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ವಾ? ಅವರು ಮುಖ್ಯಮಂತ್ರಿಯಾಗಬೇಕೆಂಬುದು ಆಂತರಿಕವಾಗಿಯಷ್ಟೇ ಅಲ್ಲ, ಬಹಿರಂಗವಾಗಿಯೂ ಸಾಕಷ್ಟುಬಾರಿ ಚರ್ಚೆ ಆಗಿದೆ. ಈ ಅವಧಿಯಲ್ಲೇ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ. ಈ ಅವಧಿಯಲ್ಲಿ ಆಗದಿದ್ದರೆ ಇನ್ನೊಂದು ಅವಧಿಯಲ್ಲಾದರೂ ಆಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಬೇರೆ ಅರ್ಥ ಕಲ್ಪಿಸುವುದು ಬೇಡ-ಪರಂ:

ಆದರೆ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಜಿ.ಪರಮೇಶ್ವರ್‌, ನಾನು ಮುಖ್ಯಮಂತ್ರಿಯಾಗಬೇಕೆಂದು ಕೆ.ಎನ್‌.ರಾಜಣ್ಣ ಸಂತೋಷದ ಸಂದರ್ಭದಲ್ಲಿ ಹಂಚಿಕೊಂಡ ಮಾತು. ಅವರ ಹೇಳಿಕೆಗೆ ಅವರ ಬಳಿಯೇ ಪ್ರತಿಕ್ರಿಯೆ ಕೇಳಬೇಕು. ಅದಕ್ಕೆ ಬೇರೆ ಅರ್ಥ ಕಲ್ಪಿಸಲು ಹೋಗುವುದು ಬೇಡ ಎಂದು ಹೇಳಿದರು.

 ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ನೀಡಿ : ರಾಜಣ್ಣ

Follow Us:
Download App:
  • android
  • ios