ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ಸಭಾಪತಿ ಬಸವರಾಜ ಹೊರಟ್ಟಿ; 8 ಬಾರಿ ಗೆಲುವಿನ ಗುಟ್ಟು ಬಹಿರಂಗ!

ರಾಜ್ಯದ ಒಂದು ಕ್ಷೇತ್ರದಿಂದ 8 ಬಾರಿ ಗೆಲುವು, 18 ಮುಖ್ಯಮಂತ್ರಿಗಳ ಜೊತೆಯಲ್ಲಿ ಕೆಲಸ ಮಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಭಾಜನರಾಗಿದ್ದಾರೆ.

Legislative Council Chairman Basavaraj Horatti belongs to Limca Book of Record sat

ವಿಧಾನ ಪರಿಷತ್ (ಫೆ.13): ರಾಜ್ಯದಲ್ಲಿ ವಿಧಾನ ಪರಿಷತ್ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ (Basavaraj Horatti) ಅವರು ಸತತವಾಗಿ ಒಂದೇ ಕ್ಷೇತ್ರದಲ್ಲಿ 8 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಗೆಲುವು ಸಾಧಿಸಿದ್ದು, 18 ಮುಖ್ಯಮಂತ್ರಿಗಳ ಜೊತೆಯಲ್ಲಿ ರಾಜ್ಯದ ಜನತೆಯ ಸೇವೆ ಮಾಡಿದ್ದಾರೆ. ಒಂದು ಬಾರಿ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸತತ 8 ಬಾರಿ ಗೆಲುವಿನ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರು ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ (Limca Book of Records) ಭಾಜನರಾಗಿದ್ದಾರೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಭಾಜನರಾದ  ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಇವತ್ತು ನನ್ನ ಜೀವನದಲ್ಲಿ ಶ್ರೇಷ್ಠವಾದ ದಿನ. ಎಲ್ಲರಿಗೂ ಕೃತಜ್ಞತೆ ತಿಳಿಸುತ್ತೇನೆ. 8 ಬಾರಿ ಗೆಲ್ಲೋಕೆ ನನ್ನ ಬಳಿ ಬಂದೋರಿಗೆ ಇಂದೆ ನಾನು ಸಹಾಯ ಮಾಡುತ್ತೇನೆ. ನಾಳೆ ಬಗ್ಗೆ ಗೊತ್ತಿಲ್ಲ ಎಂಬ ತತ್ವದಲ್ಲಿ ನಾನು ನಡೆದಿದ್ದೇನೆ. ರಾಜ್ಯಸಭೆ ಸದಸ್ಯ ನಾರಾಯಣ್ ಎಂಬ ಸದಸ್ಯರು ಇತಿಹಾಸ ನೆನಪು ಮಾಡಿ ತಮ್ಮ ಗೆಲುವಿನ ರಹಸ್ಯ ಹೇಳಿದರು. ನಾನು 18 ಮುಖ್ಯಮಮತ್ರಿಗಳನ್ನ ನೋಡಿದ್ದೇನೆ. ಬೇರೆ ಬೇರೆ ವರ್ಗದ ಜನ ನೋಡಿದ್ದೇನೆ. ರಾಮಕೃಷ್ಣ ಹೆಗಡೆಯವರ ನಮಗೆ ಮಾರ್ಗದರ್ಶನ ಮಾಡಿದ್ದರು. ಎಸ್. ಬಂಗಾರಪ್ಪ, ಎಸ್. ಎಂ.ಕೃಷ್ಣ, ದೇವೇಗೌಡ, ರಾಚಯ್ಯ ಅವರನ್ನು ನೆನಪು ಮಾಡಿಕೊಂಡರು. 

ಅತಿಥಿ ಉಪನ್ಯಾಸಕರಿಗೆ ಬಂಪರ್ ಗಿಫ್ಟ್ ಕೊಟ್ಟ ಸರ್ಕಾರ: ನೇಮಕಾತಿಯಲ್ಲಿ ಶೇ.5 ಕೃಪಾಂಕ ನೀಡಲು ತೀರ್ಮಾನ

ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನ ಪಕ್ಷಕ್ಕೆ ಕರೆದರು. 2004ರಲ್ಲಿ ದೇವೇಗೌಡರು ನನ್ನನ್ನ ಮಂತ್ರಿ ಮಾಡಿದರು. ದೇವೇಗೌಡರು ಕೊಟ್ಟ ಒಂದು ಅವಕಾಶದಿಂದ ಇಡೀ ದೇಶಕ್ಕೆ ನನ್ನ ಹೆಸರು ಪ್ರಸಾರ ಆಯ್ತು. 8 ಬಾರಿ ಗೆಲ್ಲೋಕೆ ನಾನು ಮಾತು ಕೊಟ್ಟಂತೆ ನಡೆದುಕೊಂಡಿದ್ದೇನೆ. ಯಾರೇ ಒಬ್ಬ ಶಿಕ್ಷಕರಿಂದ ಒಂದು ರೂಪಾಯಿ ಹಣವನ್ನೂ ನಾನು ಮುಟ್ಟಿಲ್ಲ. ನಾನು ಯಾರಿಗೂ ಹಣ ಕೊಟ್ಟಿಲ್ಲ. ಯಾರಿಂದಲೂ ಹಣ ಪಡೆದಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದಿಂದ ಮಂತ್ರಿಯಾದೆ. ಮಂತ್ರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ 600 ಮಂತ್ರಿಗಳು, 2 ಸಾವಿರ ಶಾಸಕರನ್ನ ನಾನು ನೋಡಿದ್ದೇನೆ. ತಂದೆ-ತಾಯಿಯರ ಆಶೀರ್ವಾದ, ಅವರು ಮಾಡಿದ ಪುಣ್ಯ ಇಷ್ಟು ಸಾಧನೆ ಮಾಡಿದ್ದೇನೆ. ಎಲ್ಲರ ಜೊತೆ ನಾನು ಪಕ್ಷ, ಜಾತಿ ನೋಡಿಲ್ಲ. ಇವತ್ತಿನ ಸ್ಥಾನ ಕಲ್ಪಿಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ನನ್ನನ್ನು ಸಭಾಪತಿ ಮಾಡಲು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಗೆ ಅವರೊಂದಿಗೆ ಮಾತನಾಡಿದ್ದರು.

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಯಡಿಯೂರಪ್ಪ ಅವರು ಕೂಡ ಬಿಜೆಪಿ ಅವರಿಗೆ ಉಪ ಸಭಾಪತಿ ಮಾಡಿ, ಹೊರಟ್ಟಿಯನ್ನ ಸಭಾಪತಿ ಮಾಡಿ ಎಂದೇ ಹೇಳಿದ್ದರು. ಆದ್ದರಿಂದ ನಾನು ಯಡಿಯೂರಪ್ಪ ಹಾಗೂ ದೇವೇಗೌಡರನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ. ನಾನು ಇರೋವರೆಗೂ ಈ ಪ್ರೀತಿ ವಿಶ್ವಾಸ ಹೀಗೆ ಕಾಪಾಡಿಕೊಂಡು ಹೋಗ್ತೀನಿ. ಎಲ್ಲರಿಗೂ ಧನ್ಯವಾದ ಹೇಳ್ತೀನಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Latest Videos
Follow Us:
Download App:
  • android
  • ios