ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾಳ್ಕರ್‌ಗೆ ಉಡುಪಿ, ಬೆಂಗಳೂರು ನಗರಕ್ಕೆ ಡಿಕೆಶಿ!
ಕಾಂಗ್ರೆಸ್ ಸರ್ಕಾರ ಇದೀಗ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಹಲವರ ಸ್ಥಾನ ಪಲ್ಲಟವಾಗಿದೆ. ಸ್ವಂತ ಜಿಲ್ಲೆಯಿಂದ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಬೆಳಗಾವಿ ಉಸ್ತುವಾರಿ ಕೇಳಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಉಡುಪಿ ನೀಡಲಾಗಿದೆ. ಕೆಜೆ ಚಾರ್ಜ್‌ಗೆ ಚಿಕ್ಕಮಗಳೂರು ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಬೆಂಗಳೂರು(ಜೂ.09): ಕರ್ನಾಟಕ ಉಸ್ತುವಾರಿ ಜಿಲ್ಲಾ ಸಚಿವರ ನೇಮಕವಾಗಿದೆ. ಹಲವು ಸಚಿವರ ಸ್ಥಾನ ಪಲ್ಲಟ ಮಾಡಲಾಗಿದೆ. ಕೆಲ ಜಿಲ್ಲೆಗಳಿಗೆ ಪಟ್ಟು ಹಿಡಿದ್ದ ನಾಯಕರಿಗೆ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ನಗರ ಉಸ್ತುವಾರಿ ಪಡೆದುಕೊಳ್ಳುವಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಡಾ.ಜಿ ಪರಮೇಶ್ವರ್ ತಮ್ಮ ಸ್ವಂತ ಜಿಲ್ಲೆ ತುಮಕೂರು ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ರಾಜ್ಯ ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಡಿಕೆ ಶಿವಕುಮಾರ್: ಬೆಂಗಳೂರು ನಗರ
ಡಾ.ಜಿ ಪರಮೇಶ್ವರ: ತುಮಕೂರು
ಹೆಚ್‌ಕೆ ಪಾಟೀಲ: ಗದಗ
ಕೆಹೆಚ್ ಮನಿಯಪ್ಪ: ಬೆಂಗಳೂರು ಗ್ರಾಮಾಂತರ
ಎಂಬಿ ಪಾಟೀಲ್ : ವಿಜಯಪುರ
ಹೆಚ್‌ಸಿ ಮಹದೇಪವ್ವ: ಮೈಸೂರು
ಪ್ರಿಯಾಂಕ್ ಖರ್ಗೆ: ಕಲಬುರಗಿ
ರಾಮಲಿಂಗ ರೆಡ್ಡಿ - ರಾಮನಗರ
ಲಕ್ಷ್ಮೀ ಹೆಬ್ಬಾಳಕರ್ - ಉಡುಪಿ
ದಿನೇಶ್ ಗಂಡುರಾವ್ - ದಕ್ಷಿಣ ಕನ್ನಡ
ಜಾರ್ಜ್: ಚಿಕ್ಕಮಗಳೂರು
ಜಮೀರ್: ವಿಜಯನಗರ
ಕೆ ಎನ್ ರಾಜಣ್ಣ: ಹಾಸನ
ಮಧು ಬಂಗಾರಪ್ಪ: ಶಿವಮೊಗ್ಗ
ಶಿವಾನಂದ ಪಾಟೀಲ್ - ಹಾವೇರಿ
ಬೋಸರಾಜು: ಕೊಡಗು
ಬೈರತಿ ಸುರೇಶ್: ಕೋಲಾರ
ಶರಣ್ ಪ್ರಕಾಶ ಪಾಟೀಲ್ : ರಾಯಚೂರು
ಕೆ ವೆಂಕಟೇಶ: ಚಾಮರಾಜನಗರ
ಸತೀಶ್ ಜಾರಕಿಹೊಳಿ: ಬೆಳಗಾವಿ
ಬೈರತಿ ಸುರೇಶ್: ಕೋಲಾರ
ಶರಣಬಸಪ್ಪ ದರ್ಶನಾಪುರ:ಯಾದಗಿರಿ
ಈಶ್ವರ್ ಖಂಡ್ರೆ: ಬೀದರ್
ಎನ್ ಚೆಲುವರಾಯಸ್ವಾಮಿ: ಮಂಡ್ಯ
ಎಸ್ಎಸ್ ಮಲ್ಲಿಕಾರ್ಜುನ: ದಾವಣಗೆರೆ
ಸಂತೋಷ್ ಎಸ್ ಲಾಜ್: ಧಾರವಾಡ
ಶಣಪ್ರಕಾಶ ಪಾಟೀಲ: ರಾಯಚೂರು
ಆರ್‌ಬಿ ತಿಮ್ಮಾಪೂರ: ಬಾಗಲಕೋಟೆ
ಶಿವರಾಜ ತಂಗಡಗಿ: ಕೊಪ್ಪಳ
ಡಿ ಸುಧಾಕರ್ :ಚಿತ್ರದುರ್ಗ
ನಾಗೇಂದ್ರ: ಬಳ್ಳಾರಿ
ಮಂಕಾಳ್ ವೈದ್ಯ:ಉತ್ತರ ಕನ್ನಡ
ಎಂಸಿ ಸುಧಾಕರ್: ಚಿಕ್ಕಬಳ್ಳಾಪುರ
ಅವನು ಯಾವ ಪಿಹೆಚ್‌ಡಿ ಮಾಡಿದ್ದಾರೆ? ಸೂಲಿಬೆಲೆ ಪಠ್ಯ ತೆಗೆಯುತ್ತೇವೆ; ಜೂನಿಯರ್ ಖರ್ಗೆ!
ಇದರಲ್ಲಿ ಸ್ಥಾನಪಲ್ಲಟವಾದ ಪ್ರಮುಖ ಸಚಿವರ ಪೈಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಂತ ಜಿಲ್ಲೆ ಬೆಳಗಾವಿ ಆದರೆ ಉಡುಪಿ ಉಸ್ತುವಾರಿ ನೀಡಲಾಗಿದೆ. ತುಮಕೂರಿನ ಕೆಎನ್ ರಾಜಣ್ಣಗೆ ಹಾಸನ ಉಸ್ತುವಾರಿ ನೀಡಲಾಗಿದೆ. ರಾಯಚೂರು ಜಿಲ್ಲೆಯ ಎನ್ ಎಸ್ ಬೋಸರಾಜುಗೆ ಕೊಡುಗು ಉಸ್ತುವಾರಿ ನೀಡಲಾಗಿದೆ. ವಿಜಯಪುರ ಜಿಲ್ಲೆಯ ಶಿವಾನಂದ ಪಾಟೀಲ್‌ಗೆ ಹಾವೇರಿ ಉಸ್ತುವಾರಿ ಆಗಿ ನೇಮಕ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಡಾ ಶರಣ ಪ್ರಕಾಶ್ ಪಾಟೀಲಗೆ ರಾಯಚೂರು ಜಿಲಾ ಉಸ್ತುವಾರಿ ನೀಡಲಾಗಿದೆ. ಇತ್ತ ಪಿರಿಯಾಪಟ್ಟಣ ಶಾಸಕ ವೆಂಕಟೇಶ್ ಮೂಲತಹ ಮೈಸೂರು ಜಿಲ್ಲೆಯವರು. ಅವರಿಗೆ ಚಾಮರಾಜನಗರ ಉಸ್ತುವಾರಿ ನೀಡಲಾಗಿದೆ.
ರಾಜ್ಯದಲ್ಲಿ ವರ್ಗಾವಣೆಗೆ ಪ್ರತಿ ಹುದ್ದೆಗೂ ದರ ನಿಗದಿ: ಎಚ್.ಡಿ.ಕುಮಾರಸ್ವಾಮಿ ಕಿಡಿ
ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಬಿಗಿಗೊಳಿಸುತ್ತಿರುವ ಪ್ರಿಯಾಂಕ್ ಖರ್ಗೆ ಕಲಬರುಗಿ ಉಸ್ತುವಾರಿ ಪಡೆದುಕೊಂಡಿದ್ದಾರೆ. ರಾಮಲಿಂಗ ರೆಡ್ಡಿಗೆ ರಾಮಗನರ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.