ಬೆಂಗಳೂರು :   ಕರ್ನಾಟಕ ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ.   ಇನ್ನು ಮುಂದೆ ಕಾಲೇಜಿನಲ್ಲಿ ಮೊಬೈಲ್ ಬಳಕೆ ಮಾಡದಂತೆ ಆದೇಶ ನೀಡಲಾಗಿದೆ. 

ಕಾಲೇಜಿನಲ್ಲಿ  ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆ ಮಾಡದಂತೆ ಆದೇಶ ನೀಡಿ ವಿವಾದಕ್ಕೆ ಈಡಾಗಿದೆ. ಕಾಲೇಜಿನಲ್ಲಿ ಅವಧಿಯಲ್ಲಿ ಬಳಕೆ ಮಾಡದಂತೆ ತಿಳಿಸಲಾಗಿದೆ. 

ಸರ್ಕಾರಿ, ಅನುದಾನಿತ, ಖಾಸಗೀ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಬ್ಯಾನ್ ಮಾಡಿ ಪಿಯು ಬೋರ್ಡ್ ಆದೇಶ ನೀಡಿದೆ.  ಎಲ್ಲಾ ಉಪ ನಿರ್ದೇಶಕರಿಗೆ ಪಿಯು ಬೋರ್ಡ್ ಸುತ್ತೋಲೆ ಹೊರಡಿಸಿದೆ. 

ಇನ್ನು ಈ ನಿರ್ಧಾರ ಸದ್ಯಕ್ಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಮೊಬೈಲ್ ಬ್ಯಾನ್ ಸರಿ, ಆದರೆ‌ ಲ್ಯಾಪ್‌ಟಾಪ್ ಬಳಕೆಯನ್ನು ಬ್ಯಾನ್ ಮಾಡಿರುವುದೇಕೆ ಎನ್ನುವ ಪ್ರಶ್ನೆ ಎದ್ದಿದೆ. 

ಸರ್ಕಾರವೇ ಡಿಗ್ರಿ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುತ್ತಿದ್ದು,  ವಾಣಿಜ್ಯ ಶಾಸ್ತ್ರ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅವಶ್ಯಕವಾಗಿದೆ.  ಹೀಗಿದ್ದರೂ ಕೂಡ ಲ್ಯಾಪ್‌ ಟಾಪ್ ನಿಷೇಧ ಮಾಡಿದ ಪಿಯುಸಿ ಬೋರ್ಡ್ ನಿರ್ಧಾರ ಎಷ್ಟು ಸರಿ ಎನ್ನಲಾಗಿದೆ. ಅಲ್ಲದೇ ಇದರಿಂದ ವಿವಾದವೊಂದನ್ನು ಸರ್ಕಾರ ಎಳೆದುಕೊಂಡಂತಾಗಿದೆ.