ನಕಲಿ ದಾಖಲೆ ಸೃಷ್ಟಿಸಿ ಅಮಾಯಕ ಸೋಲಿಗರ ಜಮೀನು ಕಬಳಿಕೆ ; ಲೋನ್ ಕೊಡಿಸ್ತೇವೆ ಎಂದು ಸಹಿ ಹಾಕಿಸಿಕೊಂಡು ಮೋಸ!

ಚಾಮರಾಜನಗರ ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಮಾಯಕ ಸೋಲಿಗರ ಜಮೀನು ಕಬಳಿಸಿರುವ ಪ್ರಕರಣ  ಬೆಳಕಿಗೆ ಬಂದಿದೆ.  ನಕಲಿ ಜಮೀನು ಮಾಲೀಕಳನ್ನೇ ಸೃಷ್ಟಿಸಿರುವುದಲ್ಲದೆ ಲೋನ್ ಕೊಡಿಸ್ತೇವೆ ಎಂದು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ಅನಕ್ಷರಸ್ಥ ಸೋಲಿಗರಿಗೆ ಮೋಸ ಎಸಗಲಾಗಿದೆ.

Land acquisition of innocent losers by creating fake documents at chamarajanagar rav

ವರದಿ - ಪುಟ್ಟರಾಜು ಆರ್‌ಸಿ

ಚಾಮರಾಜನಗರ - ಚಾಮರಾಜನಗರ ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಮಾಯಕ ಸೋಲಿಗರ ಜಮೀನು ಕಬಳಿಸಿರುವ ಪ್ರಕರಣ  ಬೆಳಕಿಗೆ ಬಂದಿದೆ.  ನಕಲಿ ಜಮೀನು ಮಾಲೀಕಳನ್ನೇ ಸೃಷ್ಟಿಸಿರುವುದಲ್ಲದೆ ಲೋನ್ ಕೊಡಿಸ್ತೇವೆ ಎಂದು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ಅನಕ್ಷರಸ್ಥ ಸೋಲಿಗರಿಗೆ ಮೋಸ ಎಸಗಲಾಗಿದೆ.

ಹೀಗೆ ದಿಕ್ಕು ತೋಚದಂತೆ ನಿಂತಿರುವ  ಇವರ್ಯಾರು ತಮ್ಮ ಜಮೀನು ಸರ್ವೆಗೆ ಅರ್ಜಿ ಹಾಕಿರಲಿಲ್ಲ . ಆದರೆ ಇದ್ದಕ್ಕಿದ್ದಂತೆ ಸರ್ವೆ ಇಲಾಖೆ ಅಧಿಕಾರಿಗಳು ಬಂದು ತಮ್ಮ ಜಮೀನು ಅಳತೆ ಮಾಡಲು ಮುಂದಾದಾಗ ಗಾಬರಿಗೊಂಡು ಪ್ರಶ್ನಿಸಿದ್ದಾರೆ.  ಆಗ ನೋಡಿ ಅಸಲಿ ವಿಷಯ ಬಯಲಿಗೆ ಬಂದಿದೆ.  ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಅರೆಕಡುವಿನದೊಡ್ಡಿ ಸೋಲಿಗರ  ಜಮೀನು ಅವರ ಅರಿವಿಗೆ ಬಾರದಂತೆ ಬೇರೆ ವ್ಯಕ್ತಿಗೆ ಮಾರಾಟವಾಗಿಬಿಟ್ಟಿದೆ. ಹೌದು 2018 ರಲ್ಲಿಯೇ ಸೋಲಿಗರ ಜಮೀನು ಮೈಸೂರಿನ ವ್ಯಕ್ತಿಯೊಬ್ಬರಿಗೆ ನೊಂದಣಿಯಾಗಿದ್ದು ಇದರಲ್ಲಿ ಮಧ್ಯವರ್ತಿಗಳ ಕರಾಮತ್ತು ಕಂಡು ಬರುತ್ತಿದೆ.  ಜಮೀನು ಖರೀದಿಸಿದ ವ್ಯಕ್ತಿ ಸರ್ವೆ ಮಾಡಿಸಲು ಬಂದಾಗ ತಾವು ಯಾರಿಗೂ ಜಮೀನು ಮಾರಾಟ ಮಾಡಿಲ್ಲ ಅದ್ಹೇಗೆ ಸರ್ವೆ ಮಾಡಿಸಲು ಸಾಧ್ಯ ಎಂಬುದು ಸೋಲಿಗರ ಪ್ರಶ್ನೆಯಾಗಿದೆ.\

ಬರಗಾಲ ಒಂದೆಡೆ; ನಕಲಿ ಈರುಳ್ಳಿ ಬೀಜ ಇನ್ನೊಂದೆಡೆ ಕೋಟೆನಾಡು ರೈತರು ಕಂಗಾಲು!

ಅರೆಕಡುವಿನದೊಡ್ಡಿ ಬಳಿ ಇರುವ ಮಾಕಾಳಿಯಮ್ಮನಿಗೆ ಸೇರಿದ 4 ಎಕರೆ 65 ಸೆಂಟ್, ಮಾದ ಎಂಬುವರಿಗೆ ಸೇರಿದ 3 ಎಕರೆ 20 ಸೆಂಟ್ ಜಮೀನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಇಲ್ಲಿ ಮಾಕಾಳಿಯಮ್ಮನ್ ಬದಲಿಗೆ ತಮಿಳುನಾಡಿನಿಂದ ಚಿನ್ನಮ್ಮ ಎಂಬಾಕೆಯನ್ನು ಕರೆತಂದು ನೋಂದಣಿ ಮಾಡಿಸಲಾಗಿದೆ. ಇವರೇ  ಮಾಕಾಳಿಯಮ್ಮನ್ ಎಂದು ನಕಲಿ ಆಧಾರ್ ಕಾರ್ಡ್ ಸೃಷ್ಠಿಸಿ ವಂಚಿಸಲಾಗಿದೆ. ತನಗೆ ಮತ್ತು ಬರುವ ಜ್ಯೂಸ್ ಕುಡಿಸಿ ಬಲವಂತವಾಗಿ  ಕರೆತಂದು ನಾನೇ ಮಾಕಾಳಿಯಮ್ಮ ಎಂದು  ಹೆಬ್ಬೆಟ್ಟು ಒತ್ತಿಸಿದರು ಎಂದು ಸ್ವತಃ  ಚಿನ್ನಮ್ಮ ಆರೋಪಿಸುತ್ತಿದ್ದಾಳೆ. ಮಾಕಾಳಿಯಮ್ಮನ್ ಜಮೀನಿನ ಪಕ್ಕದಲ್ಲೇ ಇರುವ ಮಾದ ಎಂಬ ಸೋಲಿಗ ವ್ಯಕ್ತಿಗೆ ಮದ್ಯವರ್ತಿಗಳು ಲೋನ್ ಕೊಡಿಸುವುದಾಗಿ ಹೆಬ್ಬೆಟ್ಟು ಒತ್ತಿಸಿಕೊಂಡು ಆತನ 3 ಎಕರೆ 20 ಸೆಂಟ್ ಜಮೀನನ್ನು ಮೈಸೂರಿನ ವ್ಯಕ್ತಿಗೆ ನೊಂದಣಿ  ಮಾಡಿಸಿದ್ದಾರೆ. 

ತಮಗಾಗಿರುವ ವಂಚನೆ ಕುರಿತು ಹನೂರು  ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ರೂ ಎಫ್ ಐ ಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಸೋಲಿಗರು ಆರೋಪಿಸುತ್ತಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ದೂರು ಕೊಡಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ನೊಂದ ಸೋಲಿಗರನ್ನು ಭೇಟಿ ಮಾಡಿದ ಹನೂರು ಶಾಸಕ ಮಂಜುನಾಥ್ ಮೋಸ ಹೋದ ಸೋಲಿಗರಿಗೆ ನ್ಯಾಯಾ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ತಕ್ಷಣವೇ  ಸೋಲಿಗರಿಗೆ ರಕ್ಷಣೆ ನೀಡಿ ಅವರ ಜಮೀನು ವಾಪಾಸ್ ಕೊಡಿಸಲುಸೂಕ್ತ ಕ್ರಮ ಕೈಗೊಳ್ಳುವಂತೆ ಹನೂರು ತಹಶೀಲ್ಧಾರ್ ಗೆ  ಸೂಚಿಸಿದ್ದಾರೆ. 

ಚಿತ್ರದುರ್ಗ ಜಿಲ್ಲೆಯಾದ್ಯಂತ ಹಲವೆಡೆ ದಾಳಿ: 12 ಪಿಒಪಿ ಗಣೇಶ ಮೂರ್ತಿ ವಶ

ಸದ್ಯಕ್ಕೆ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು ಇದೇ ರೀತಿ ಇನ್ನು ಹಲವು ಸೋಲಿಗರ ಜಮೀನುಗಳು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಸಮಗ್ರ ತನಿಖೆ ನಡೆಸಿ ಅಮಾಯಕ ಸೋಲಿಗರಿಗೆ ನ್ಯಾಯ ಒದಗಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ..

Latest Videos
Follow Us:
Download App:
  • android
  • ios