'ಮುಂದೆ ಮಹಿಳೆ ಸಿಎಂ ಆಗ್ತಾರೆ' ಕೋಡಿಶ್ರೀ ಭವಿಷ್ಯ ನುಡಿದ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಪೋಸ್ಟ್ ವೈರಲ್!

ರಾಜ್ಯದಲ್ಲಿ ಮಹಿಳೆಯೊಬ್ಬರು ಸಿಎಂ ಆಗ್ತಾರೆ' ಎಂಬ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರ ಭವಿಷ್ಯದ ಬೆನ್ನಲ್ಲೇ ರಾಜ್ಯ ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಾಮಾಜಿ ಜಾಲತಾಣಗಳಲ್ಲಿ 'ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಮಹಿಳಾ ಸಿಎಂ ಆಗಲಿ' ಎಂಬ ಅಭಿಯಾನ ಆರಂಭಿಸಿದ್ದಾರೆ. 

Lakshmi Hebbalkar CM post went viral after Kodishree prediction at belagavi rav

ಬೆಳಗಾವಿ (ಸೆ.12):  ರಾಜ್ಯದಲ್ಲಿ ಮಹಿಳೆಯೊಬ್ಬರು ಸಿಎಂ ಆಗ್ತಾರೆ' ಎಂಬ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರ ಭವಿಷ್ಯದ ಬೆನ್ನಲ್ಲೇ ರಾಜ್ಯ ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಾಮಾಜಿ ಜಾಲತಾಣಗಳಲ್ಲಿ 'ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಮಹಿಳಾ ಸಿಎಂ ಆಗಲಿ' ಎಂಬ ಅಭಿಯಾನ ಆರಂಭಿಸಿದ್ದಾರೆ. 

ರಾಜ್ಯದಲ್ಲಿ ಮಹಿಳಾ ಸಿಎಂ ಆಗುತ್ತಾರೆ ಎಂದು ಇತ್ತೀಚೆಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು.  ಶ್ರೀಗಳ ಭವಿಷ್ಯ ಟ್ಯಾಗ್ ಮಾಡಿರುವ ಅಭಿಮಾನಿಗಳು, ಸಚಿವರ ಬೆಂಬಲಿಗರು. ರಾಜ್ಯಕ್ಕೆ ಮಹಿಳಾ ಸಿಎಂ ನಮ್ಮ ಬೆಳಗಾವಿ ಚೆನ್ನಮ್ಮ, ಕೋಡಿಮಠ ಶ್ರೀಗಳ ಭವಿಷ್ಯ ನಿಜವಾಗುತ್ತೋ? ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಸಿಎಂ ಆಗಿ ಬೆಳಗಾವಿಯ ಲಕ್ಷ್ಮೀ ಅಕ್ಕಾ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.

ಕಾಂಗ್ರೆಸ್‌ನಲ್ಲಿ ಕಂಡ ಕಂಡೋರೆಲ್ಲಾ ಸಿಎಂ ಖುರ್ಚಿ ಖಾಲಿಯಾಗ್ತಿದೆ ಅಂತಾ ಟವೆಲ್ ಹಾಕ್ತಿದ್ದಾರೆ?

 

ಸಾಮಾಜಿಕ ಜಾಲತಾಣದಲ್ಲಿ ಸಿಎಂ ರೇಸ್ ಅಭಿಯಾನ

ಕಾಂಗ್ರೆಸ್‌ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರಿಂದ ಸಿಎಂ ರೇಸ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುಂದುವರಿದಿದೆ. ಸಿಎಂ ರೇಸ್‌ನಲ್ಲಿ ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗರು ಸತೀಶರನ್ನೇ ಸಿಎಂ ಆಗಿಸಬೇಕು ಎಂದು ಒತ್ತಾಯ ಮಾಡಿದ್ದಾಯ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಮುಂದಡಿ ಇಟ್ಟಿದ್ದಾರೆ. ಇವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಸಿಎಂ ಆಗುವ ಅಭಿಯಾನ ಶುರು ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ ಕಂಡ್ರೆ ಅಂಜಿಕೆ ಇದೆ: ಸಚಿವ ಶರಣಬಸಪ್ಪ ದರ್ಶನಾಪುರ

ಮುಂದಿನ ಮಹಿಳಾ ಮುಖ್ಯಮಂತ್ರಿ ಲಕ್ಷ್ಮೀ ಹೆಬ್ಬಾಳಕರ ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರೆ, ಈಗ ಸಿಎಂ ರೇಸ್‌ನಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಮುಂಚೂಣಿಗೆ ಬಂದಿದೆ. ಕರ್ನಾಟಕದ ಸಿಎಂ ಆಗಲು ಸೂಕ್ತ ವ್ಯಕ್ತಿ ಲಕ್ಷ್ಮಣ ಸವದಿ ಎಂದು ಅವರ ಬೆಂಬಲಿಗರು ಪೋಸ್ಟ್‌ ಮಾಡಿದ್ದಾರೆ. ಬೆಳಗಾವಿಯ ನಾಯಕರ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆಯೇ ಬೆಂಬಲಿಗರು ಜಿದ್ದಾಜಿದ್ದಿಗೆ ಬಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios