ಕೆಆರ್‌ಎಸ್ ನೀರಿನ ಮಟ್ಟ ಕುಸಿತ; ಸಂಸದೆ ಸುಮಲತಾ ಅಂಬರೀಶ ಕಳವಳ

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆಆರ್‌ಎಸ್  ನೀರಿನ ಮಟ್ಟ ದಿನೇದಿನೆ ಇಳಿಯುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ ಆತಂಕ ವ್ಯಕ್ತಪಡಿಸಿದರು.

Lack of rain It is impossible to release water to Tamil Nadu says mp sumalata at mandya rav

ಮಂಡ್ಯ (ಜು.15): ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆಆರ್‌ಎಸ್  ನೀರಿನ ಮಟ್ಟ ದಿನೇದಿನೆ ಇಳಿಯುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ ಆತಂಕ ವ್ಯಕ್ತಪಡಿಸಿದರು.

ತಮಿಳುನಾಡು ಕಾವೇರಿ ನೀರು ಕೇಳಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟ್ರಿಬ್ಯೂನಲ್ ಪ್ರಕಾರ ನೀರಿನ ಹಂಚಿಕೆ ವಿಚಾರದಲ್ಲಿ ಕೆಲವು ನಿಯಮಗಳು ಇವೆ. ಆದರೆ ಸದ್ಯ ಮಳೆ ತುಂಬಾ ಕಡಿಮೆ‌ ಬೀಳ್ತಾ ಇದೆ. ಕೆಆರ್‌ಎಸ್‌ ನೀರಿನ ಮಟ್ಟ ಆತಂತಕರವಾಗಿದೆ. ಎರಡು ತಿಂಗಳಿಗೆ ಮಾತ್ರ ಸಾಕಾಗುವಷ್ಟು ಕುಡಿಯುವ ನೀರು ಇರೋದು ಇಂಥ ಪರಿಸ್ಥಿತಿಯಲ್ಲಿ ನಾವು ರೈತರ ಸಮಸ್ಯೆಯನ್ನೂ ಬಗೆಹರಿಸಬೇಕು ಕಾವೇರಿ ನೀರು ತಮಿಳುನಾಡಿಗೆ ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಈ ಬಗ್ಗೆ ರಾಜ್ಯದ ಸಚಿವರ ತುರ್ತು ಸಭೆ ನಡೆಸಬೇಕು. ಬಳಿಕ ಈ ಸಂಬಂಧ ಕೇಂದ್ರದ ಬಳಿ ಪ್ರಸ್ತಾಪಿಸುತ್ತೇನೆ ಎಂದರು.

ಕೆಆರ್‌ಎಸ್‌ನಲ್ಲಿ ನೀರು ಕಡಿಮೆ: ಸಂಸದೆ ಸುಮಲತಾ ಅಂಬರೀಶ್‌ ಕಳವಳ

ರಾಜ್ಯಾದ್ಯಂತ ಬಹುತೇಕ ಪ್ರದೇಶದಲ್ಲಿ ಮಳೆ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಸದ್ಯ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಆದ್ರೆ ನೀರಿನ ಸಮಸ್ಯೆ ಬಂದಾಗ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗುತ್ತೆ. ಮುಂದಿನ ದಿನಗಳಲ್ಲಿ ಮಳೆ ಬೀಳದಿದ್ರೆ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತೆ. ಹೀಗಾಗಿ ರೈತರು ಇರುವ ಬೆಳೆಗಳನ್ನು ಉಳಿಸಿಕೊಳ್ಳಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚರ್ಚೆಗಳು, ಊಹಾಪೋಹಗಳು, ಅಂತೆಕಂತೆಗಳಿಗೆ ನಾನು ಉತ್ತರ ಕೊಡಲ್ಲ.
ಅಂತಹ ಸಂದರ್ಭಗಳು ಬಂದಾಗ ನಾನು ಮಾತಾಡುತ್ತೇನೆ ಎಂದರು. ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದರು.

ಸುಮಲತಾ ಅವರನ್ನು ನೋಡಿ ಕಲಿ: ಪವನ್ ಕಲ್ಯಾಣ್ ವಿರುದ್ಧ ಕೊಡಲಿ ನಾನಿ ಕಿಡಿ

 

Latest Videos
Follow Us:
Download App:
  • android
  • ios