Asianet Suvarna News Asianet Suvarna News

ಕೈಕೊಟ್ಟ ಮಳೆ  ಹೂತಿಟ್ಟ ಶವ ತೆಗೆದ ವಿಚಾರ ಎರಡು ಸಮುದಾಯಗಳ ನಡುವೆ ಮಾರಾಮಾರಿ

ಅವರೆಲ್ಲ ಒಂದೇ ಗ್ರಾಮದ ಯುವಕರು. ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದರು. ಅದ್ಯಾವ ಕೇಡುಗಾಳಿ ಬೀಸಿತೋ ಏನೋ  ಗೊತ್ತಿಲ್ಲ. ಇಡೀ ಗ್ರಾಮವೇ ರಣರಂಗವಾಗಿ ಮಾರ್ಪಟ್ಟಿದೆ. ಖುಷಿಯಾಗಿ ಹಬ್ಬ ಮಾಡುವ ಸಂದರ್ಭದಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.

Lack of rain issue clash between two communities at davanagere district rav
Author
First Published Sep 3, 2023, 9:29 PM IST

ರಿಪೋರ್ಟರ್ : ವರದರಾಜ್

 ದಾವಣಗೆರೆ (ಸೆ.3): ಅವರೆಲ್ಲ ಒಂದೇ ಗ್ರಾಮದ ಯುವಕರು. ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದರು. ಯಾವುದೇ ಜಾತಿ ಧರ್ಮ‌ ಇಲ್ಲದೆ ಒಂದೇ ಮನೆಯವರಾಗಿ ಅಣ್ಣತಮ್ಮದಿರ ತರ ಜೀವನ ನಡೆಸುತ್ತಿದ್ದರು.. ಅದರೆ ಅದ್ಯಾವ ಕೇಡುಗಾಳಿ ಬೀಸಿತೋ ಏನೋ  ಗೊತ್ತಿಲ್ಲ. ಇಡೀ ಗ್ರಾಮವೇ ರಣರಂಗವಾಗಿ ಮಾರ್ಪಟ್ಟಿದೆ. ಖುಷಿಯಾಗಿ ಹಬ್ಬ ಮಾಡುವ ಸಂದರ್ಭದಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.

 ದಾವಣಗೆರೆ ತಾಲ್ಲೂಕು ಮಾಯಕೊಂಡ ಸಮೀಪದ ನಲ್ಕುಂದ  ಗ್ರಾಮ(Nalkund village)ದಲ್ಲಿ ಅಕ್ಷರಶಃ  ಬಿಗುವಿನ ವಾತಾವರಣ ಇದೆ. ಗ್ರಾಮದಲ್ಲಿ ಎಲ್ಲೆಲ್ಲೂ  ಪೊಲೀಸ್ ಕಣ್ಗಾವಲು ಇದ್ದು ವಾತವರಣ ಬೂದಿ ಮುಚ್ಚಿದ ಕೆಂಡದಂತಿದೆ. ನಲ್ಕುಂದ ಗ್ರಾಮದಲ್ಲಿ ಎರಡು ಸಾವಿರಕ್ಕೂ‌ ಹೆಚ್ವು ಜನರಿದ್ದು, ಎಲ್ಲಾ ಜಾತಿ ಧರ್ಮದವರು ಒಟ್ಟಾಗಿ‌ ಜಾತ್ರೆ ಹಬ್ಬ ಹರಿದಿನಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು. ಆದರೆ ಕಳೆದ ರಾತ್ರಿ ನಡೆದ ಕೆಲ ಮನಸ್ಥಾಪಗಳಿಂದ ಇಡೀ ಗ್ರಾಮದ ಜನರಲ್ಲಿ ನೆಮ್ಮದಿ ಹಾಳಾಗಿದೆ.

ಮಳೆ ಇಲ್ಲದೇ ಒಣಗಿ ಹೋದ ಮಕ್ಕೆಜೋಳ ಬೆಳೆ! ಲೋನ್‌ ಕಟ್ಟುವಂತೆ ರೈತರಿಗೆ ಬ್ಯಾಂಕ್‌ ನೋಟಿಸ್

ಮಾಯಕೊಂಡ ಹೋಬಳಿಯ ಬಹುತೇಕ  ಗ್ರಾಮದಲ್ಲಿ ಮಳೆಯಾಗಿಲ್ಲ. ಇದರಿಂದ ಇಲ್ಲಿನ ಜನರು ಮೂಡನಂಬಿಕೆಯ ಮೊರೆ ಹೋಗುತ್ತಿದ್ದಾರೆ. ಅದೇ ರೀತಿಯಾಗಿ ನಲ್ಕುಂದ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಚರ್ಮರೋಗ ಬಂದು ಸಾವನ್ನಪ್ಪಿದ ‌ಮಹಿಳೆಯನ್ನು ಹೂತು ಹಾಕಿದ್ದರು. ಅದ್ದರಿಂದ ನಮ್ಮ ಭಾಗದಲ್ಲಿ ಮಳೆಯಾಗುತ್ತಿಲ್ಲ, ಬೆಳೆ ಒಣಗುತ್ತಿವೆ ಎಂದು ಹೇಳಿ ಆಕೆಯ ಶವವನ್ನು ಹೊರ ತೆಗೆದು ಸುಡಲು ಇಡೀ ಗ್ರಾಮದ ಜನರು ತೀರ್ಮಾನಿಸಿದರು. ಅಲ್ಲದೆ ಗ್ರಾಮದ ದೇವರ ಅಪ್ಪಣೆಯನ್ನು  ಕೂಡ ತೆಗೆದುಕೊಂಡಿದ್ದರಂತೆ. ಅದರ  ಕಾರ್ಯ ಮಾಡುವಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ  ಜಗಳವಾಗಿದೆ. ಇದು ದೊಡ್ಡದಾಗಿ ಎರಡು ಸಮುದಾಯಗಳ ನಡುವಿನ ಜಗಳಕ್ಕೆ ಕಾರಣವಾಗಿದೆ‌.

ಇನ್ನು ಎಲ್ಲಾ ಗ್ರಾಮಸ್ಥರು ಅ ಕಾರ್ಯಕ್ರಮ ‌ಮುಗಿಸಿಕೊಂಡು ವಾಪಸ್ಸು ಬಂದಿದ್ದಾರೆ. ಆದರೆ ಇಬ್ಬರಿಂದ ಶುರುವಾದ ಜಗಳ ಎರಡು ಸಮುದಾಯದ ಜನರ ನಡುವೆ ಕೊಳ್ಳಿ ಇಟ್ಟಿದ್ದು, ನೂರಾರು ಜನರು ಹೊಡದಾಡಿಕೊಂಡಿದ್ದು, ಅ ಗ್ರಾಮದವರು ಅಲ್ಲದೆ ಬೇರೆ ಗ್ರಾಮದ ಯುವಕರು ಕೂಡ ಬಂದು ಪರಸ್ಪರ ಜಗಳಕ್ಕೆ ಬಿದ್ದಿದ್ದಾರೆ. ಕೂಡಲೇ ಎಸ್ ಪಿ ಉಮಾ ಪ್ರಶಾಂತ ಅ ಗ್ರಾಮಕ್ಕೆ ಭೇಟಿ‌ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದು, ಹಲ್ಲೆ ನಡೆಸಿದ ಎರಡು ಸಮುದಾಯದ 28 ಜನರನ್ನು ಬಂಧಿಸಿದ್ದಾರೆ.

 ಅಲ್ಲದೆ ನೂರಕ್ಕೂ ಹೆಚ್ವು ಜನ ಪೊಲೀಸರ ಭದ್ರತೆ ವಹಿಸಿದ್ದು ಮುನ್ನೆಚ್ಚರಿಕೆ ವಹಿಸಿದ್ದಾರೆ. ಆದರೆ ಇತ್ತ ಜೈಲಿಗೆ ಹೋದವರ ಕುಟುಂಬದವರ  ಪರಿಸ್ಥಿತಿ ಹೇಳತೀರದಂತಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಇಬ್ಬರು ಮಾಡಿದ ಕಿತಾಪತಿಗೆ ಇಡೀ ಗ್ರಾಮದ ಜನರು ಸಂಕಷ್ಟ ಅನುಭವಿಸಿದಂತಾಗಿದೆ. ಅಲ್ಲದೆ ಹೊರಗಿನಿಂದ ಬಂದು ಹಲ್ಲೆ ನಡೆಸಿದವರಿಗೆ‌ ಕಠಿಣ ಕ್ರಮ ಕೈಗೊಳ್ಳಿ ಎಂದು ಹಿಡಿ ಶಾಪ ಹಾಕಿದರು.

Davanagere: ರಾಗಿ ಖರೀದಿ ಹಣ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಆದೇಶ

 ಕಳೆದ ಎರಡು ತಿಂಗಳಿನಿಂದ‌  ಮಳೆ ಇಲ್ಲದ ಪರಿಸ್ಥಿತಿ ಯಿಂದ ಊರಿನ ಗ್ರಾಮಸ್ಥರು  ಮೂಡ ನಂಬಿಕೆ ಮೊರೆ ಹೋಗಿದ್ದರು. ಅಲ್ಲಿ ನಡೆದ ಕೆಲವರ ಕಿತಾಪತಿಯಿಂದ ಇಡೀ ಗ್ರಾಮದ‌ ಜನರು ನೋವು ಅನುಭವಿಸುವಂತಾಗಿದೆ.. ಇನ್ನಾದರೂ ಇಡೀ ಗ್ರಾಮಸ್ಥರು ಮಾಡಿದ ತಪ್ಪಿನ ಅರಿವಾಗಿ ಸೌಹಾರ್ಧಯುತವಾಗಿ ಬದುಕು ನಡೆಸಲಿ.

Follow Us:
Download App:
  • android
  • ios