Asianet Suvarna News Asianet Suvarna News

ನ.26. ದೇಶವ್ಯಾಪಿ ಮುಷ್ಕರ : ರಾಜ್ಯದಲ್ಲಿ ಯಾರಿಂದ ಬೆಂಬಲ..?

ಕಾರ್ಮಿಕ ಸಂಘಟನೆಗಳಿಂದ ನಾಳೆ ದೇಶವ್ಯಾಪಿ ಮುಷ್ಕರ ನಡೆಯುತ್ತಿದ್ದು ಇದಕ್ಕೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ

Labour unions call nationwide general strike on November 26 snr
Author
Bengaluru, First Published Nov 25, 2020, 7:02 AM IST

ನವದೆಹಲಿ (ನ.25): ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಂಗಳೂರು ಸೇರಿದಂತೆ ದೇಶದ ಹಲವು ಕಾರ್ಮಿಕ ಸಂಘಟನೆಗಳು ನ.26ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟಿದೆ. ಇದರಲ್ಲಿ ವಿವಿಧ ಸಂಘಟನೆಗಳ 25 ಕೋಟಿ ಕಾರ್ಮಿಕರು ಭಾಗಿಯಾಗುವ ಸಾಧ್ಯತೆ ಇದ್ದು, ಆಟೋ ರಿಕ್ಷಾ, ಓಲಾ, ಊಬರ್‌ ಸೇರಿ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. 

ಖಾಸಗಿ ಹಾಗೂ ಸರ್ಕಾರಿ ನೌಕಕರಿಗೆ, ಕೈಗಾರಿಕಾ ವಲಯದಲ್ಲಿ ದುಡಿಯುತ್ತಿರುವ ನೌಕರರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ನ.26ರ ಮುಷ್ಕರಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದ್ದು, ಯಶ ಕಾಣಲಿದೆ ಎಂದು ಕಾರ್ಮಿಕ ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ವಿಶ್ವಾಸ ವ್ಯಕ್ತ ಪಡಿಸಿವೆ.

ನಿನಗೆ ತಾಕತ್ತಿದ್ರೆ ಬಂದ್ ಮಾಡು: ವಾಟಾಳ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ ವಾರ್ನ್ ...

ಅಖಿಲ ಭಾರತೀಯ ವ್ಯಾಪಾರಿ ಕಾಂಗ್ರೆಸ್‌, ಹಿಂದ್‌ ಮಜ್ದೂರ್‌ ಸಭಾ, ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್ಸ್‌, ಅಲ್‌ ಇಂಡಿಯಾ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ ಮುಂತಾದ ಪ್ರಮುಖ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಬಿಜೆಪಿ ಬೆಂಬಲಿತ ಭಾರತೀಯ ಮಜ್ದೂರ್‌ ಸಂಘ ಮುಷ್ಕರದಿಂದ ದೂರ ಉಳಿದಿದೆ.

ನರೇಗಾ ಯೋಜನೆಯಡಿ ಕೆಲಸದ ದಿನವನ್ನು 200ಕ್ಕೆ ಏರಿಸಬೇಕು, ನೌಕರರಿಗೆ ಪ್ರತಿ ತಿಂಗಳು 7500 ನಗದು ವರ್ಗಾವಣೆ, ಬಡ ಕುಟುಂಬಕ್ಕೆ ತಿಂಗಳಿಗೆ 10 ಕೇಜಿ ಅಕ್ಕಿ ವಿತರಣೆ ಹಾಗೂ ಹೊಸ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.

Follow Us:
Download App:
  • android
  • ios