* ವಿಕಾಸಸೌಧದಲ್ಲಿ ಕೊಠಡಿ ಪೂಜೆ ಮಾಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್* ಕಚೇರಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಶುಭಾರಂಭ* ಅಸಂಘಟಿತ ಕಾರ್ಮಿಕರ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ವಿಶೇಷ ಯೋಜನೆಗಳ ಅನುಷ್ಠಾನ

ಬೆಂಗಳೂರು(ಆ.13): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿರುವ ಶಿವರಾಂ ಹೆಬ್ಬಾರ್‌ ಅವರು ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಪೂಜೆ ಸಲ್ಲಿಸಿದರು.

ಗುರುವಾರ(ಆ.13) ಕಚೇರಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಶುಭಾರಂಭ ಮಾಡಿದರು. ಇದೇ ವೇಳೆ ಅವರು ಕರ್ನಾಟಕ ಮೋಟಾರು ಸಂಹಿತೆ ಮತ್ತು ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತಾ ಕಲ್ಯಾಣ ವಿಧೇಯಕಕ್ಕೆ ಚಾಲನೆ ನೀಡಿದರು. ಅಸಂಘಟಿತ ವಲಯದ ಕಾರ್ಮಿಕರಾದ ಆಟೋ, ಟ್ಯಾಕ್ಸಿ, ಲಾರಿ ಹಾಗೂ ಬಸ್‌ ಚಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದು, ಅವರ ಸಾಮಾಜಿಕ ಭದ್ರತೆಗಾಗಿ ಕರ್ನಾಟಕ ಮೋಟಾರು ಮತ್ತು ಅದಕ್ಕೆ ಸಂಬಂಧಿಸಿದ ಕಾಯ್ದೆ ಜಾರಿಗೆ ಅವರು ಕಾರ್ಯಪ್ರವೃತ್ತರಾಗಿದ್ದಾರೆ.

Scroll to load tweet…
Scroll to load tweet…

ಮುಳುಗಿದ ತೋಟ, ಕೊಚ್ಚಿಹೋದ ಸೇತುವೆ.. ತತ್ತರಿಸಿದ ಉತ್ತರ ಕನ್ನಡ ವೀಕ್ಷಿಸಿದ ಬೊಮ್ಮಾಯಿ

ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ದಿನವೇ ಅಸಂಘಟಿತ ಕಾರ್ಮಿಕರ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಹೆಬ್ಬಾರ್‌ ಮುಂದಾಗಿದ್ದಾರೆ. ಈ ನಡೆಯು ರಾಜ್ಯದ ಶ್ರಮಿಕ ವರ್ಗದವರಿಗೆ ಹೊಸ ಚೈತನ್ಯ ತಂದಿದೆ ಎಂದು ಕಾರ್ಮಿಕ ವರ್ಗ ಸಂತಸ ವ್ಯಕ್ತಪಡಿಸಿದೆ.