ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದ್ದ ಕೆಎಸ್ಆರ್‌ಸಿ ಬಸ್ಗಳ ಸಂಚಾರ ನಾಲೆಯಿಂದ ಗೋವಾ ರಾಜ್ಯಕ್ಕೆ ಮತ್ತೆ ಆರಂಭವಾಗಲಿದೆ. 

ಬೆಂಗಳೂರು (ಸೆ.06): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸೆ. 7ರಿಂದ ಗೋವಾಕ್ಕೆ ಬಸ್‌ ಸಂಚಾರ ಆರಂಭಿಸಲಿದೆ. ಲಾಕ್‌ಡೌನ್‌ ಸಡಿಲಕೆ ಹಿನ್ನೆಲೆಯಲ್ಲಿ ನಿಗಮ ಸೆ.7ರಿಂದ ಗೋವಾ ರಾಜ್ಯಕ್ಕೆ ಬೆಂಗಳೂರು, ಮೈಸೂರು ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ಗಳು ಕಾರ್ಯಾಚರಿಸಲಿವೆ.

ಪ್ರತಿ ಪ್ರಯಾಣಿಕರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮುಂಗಡ ಆಸನಗಳನ್ನು ಡಿಡಿಡಿ.ks್ಟಠ್ಚಿ.ಜ್ಞಿವೆಬ್‌ಸೈಟ್‌ ಮತ್ತು ನಿಗಮದ/ಫ್ರಾಂಚೈಸಿ ಕೌಂಟರ್‌ಗಳ ಮುಖಾಂತರ ಕಾಯ್ದಿರಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ದೇಶದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಹಿನ್ನೆಲೆಯಲ್ಲಿ ಬಸ್ ಸಂಚಾರವನ್ನು ರದ್ದು ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಬಸ್ ಸಂಚಾರವನ್ನು ಆರಂಭ ಮಾಡಲಾಗುತ್ತಿದೆ.