Asianet Suvarna News Asianet Suvarna News

ಕೆಎಸ್‌ಆರ್‌ಟಿಸಿ ಸಿಬ್ಬಂದಿ ರಜೆ, ಹಾಜರಾತಿ ಈಗ ಆನ್‌ಲೈನ್‌..!

ಕೆಎಸ್ಸಾರ್ಟಿಸಿಗಾಗಿಯೇ ಎಚ್‌ಆರ್‌ಎಂಎಸ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇನ್ನು ಮುಂದೆ ಹಾಜರಾತಿ ಹಾಗೂ ರಜೆತೆಗೆದುಕೊಳ್ಳುವ ವ್ಯವಸ್ಥೆಯನ್ನು ಎಚ್‌ಆರ್‌ಎಂಎಸ್ ಮೂಲಕವೇ ನಿರ್ವಹಿಸಲಾಗುತ್ತದೆ. 

KSRTC Staff Leave Attendance Now Online in Karnataka grg
Author
First Published Mar 10, 2024, 10:17 AM IST

ಬೆಂಗಳೂರು(ಮಾ.10):  ಕೆಎಸ್‌ಆರ್‌ಟಿಸಿ ಘಟಕ, ವಿಭಾಗಗಳಲ್ಲಿ ಸಿಬ್ಬಂದಿಗೆ ರಜೆ ನೀಡುವ ವಿಚಾರದಲ್ಲಿ ಆಗುತ್ತಿರುವ ಕಿರುಕುಳ ತಪ್ಪಿಸಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್ ಎಂಎಸ್) ಜಾರಿಗೆ ತರಲಾಗಿದೆ. ಈ ವ್ಯವಸ್ಥೆ ಮೂಲಕ ಇನ್ನು ಮುಂದೆ ಸಿಬ್ಬಂದಿ ಹಾಜರಾತಿ ಹಾಗೂ ರಜೆ ಪಡೆಯಬೇಕಾಗುತ್ತದೆ.

ಈವರೆಗೆ ಹಾಜರಾತಿ ನಮೂದು ಹಾಗೂ ರಜೆ ನೀಡುವ ವ್ಯವಸ್ಥೆಯು ಮ್ಯಾನ್ಯುಯಲ್ ಆಗಿ ನಡೆಯುತ್ತಿತ್ತು. ಇದರಿಂದ ಘಟಕ ಮತ್ತು ವಿಭಾಗದ ಮುಖ್ಯಸ್ಥರು ರಜೆ ನೀಡುವಲ್ಲಿ ಕಿರುಕುಳ ನೀಡುತ್ತಾರೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ನೌಕರರು ಆಗ್ರಹಿಸುತ್ತಿದ್ದರು. ಹೀಗಾಗಿಯೇ ಕೆಎಸ್ಸಾರ್ಟಿಸಿಗಾಗಿಯೇ ಎಚ್‌ಆರ್‌ಎಂಎಸ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇನ್ನು ಮುಂದೆ ಹಾಜರಾತಿ ಹಾಗೂ ರಜೆತೆಗೆದುಕೊಳ್ಳುವ ವ್ಯವಸ್ಥೆಯನ್ನು ಎಚ್‌ಆರ್‌ಎಂಎಸ್ ಮೂಲಕವೇ ನಿರ್ವಹಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಕೇಂದ್ರೀಯ, ಹಾಸನ, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ವಿಭಾಗ ವ್ಯಾಪ್ತಿಯಲ್ಲಿ ಮಾತ್ರ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದ್ದು, ಅದರ ಬಳಕೆ ಹಾಗೂ ಕಾರ್ಯದಕ್ಷತೆ ಆಧರಿಸಿ ಉಳಿದ 11 ವಿಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ನಿವೃತ್ತ ಸಾರಿಗೆ ನೌಕರರಿಗೂ ವೇತನ ಹೆಚ್ಚಳ ಬಾಕಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ

ನಿಗದಿತ 5 ವಿಭಾಗ ವ್ಯಾಪ್ತಿಯಲ್ಲಿ ಮಾ.1ರಿಂದ ಎಚ್‌ಆರ್‌ಎಂಎಸ್ ಕಡ್ಡಾಯಗೊಳಿಸಲಾಗಿದೆ. ಆ ವಿಭಾಗಗಳಲ್ಲಿ ಪ್ರತಿದಿನದ ಹಾಜರಾತಿಯನ್ನು ಸಿಬ್ಬಂದಿ ಎಚ್‌ಆರ್‌ಎಂಎಸ್ ತಂತ್ರಾಂಶದಲ್ಲಿಯೇ ನಮೂದಿಸಬೇಕಿದೆ. ತಮಗೆ ಯಾವ ದಿನ ರಜೆ ಬೇಕು ಎಂಬುದನ್ನು ತಂತ್ರಾಂಶದಲ್ಲಿಯೇ ನಮೂದಿಸಬೇಕು. ಅದನ್ನಾಧರಿಸಿ ವಿಭಾಗ ಮತ್ತು ಘಟಕ ಮುಖ್ಯಸ್ಥರು ಸಿಬ್ಬಂದಿ ರಜೆ ಹಂಚಿಕೆ ಮಾಡಲು ಸಹಾಯವಾಗಲಿದೆ.

Follow Us:
Download App:
  • android
  • ios