Asianet Suvarna News Asianet Suvarna News

ನಿವೃತ್ತ ಸಾರಿಗೆ ನೌಕರರಿಗೂ ವೇತನ ಹೆಚ್ಚಳ ಬಾಕಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ

ಸಭೆಯಲ್ಲಿ 2020 ಜ. 1ರಿಂದ 2023ರ ಫೆ. 28 ರವರೆಗೆ ನಿವೃತ್ತರಾದ ಮತ್ತು ಸಂಸ್ಥೆಯಿಂದ ಹೊರಹೋದ ಸುಮಾರು 10 ಸಾವಿರ ಮಾಜಿ ನೌಕರರಿಗೂ ಶೇ. 15ರಷ್ಟು ವೇತನ ಹೆಚ್ಚಳ ಬಾಕಿ ಪಾವತಿಸಲು ಒಪ್ಪಿಗೆ ಸೂಚಿಸಲಾಯಿತು. ಅದಕ್ಕಾಗಿ 220 ಕೋಟಿ ರು. ಗಳ ಅವಶ್ಯಕತೆಯಿದೆ. ಈ ಕುರಿತಂತೆ ಆದೇಶ ಹೊರಡಿಸುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ ಸಾರಿಗೆ ಸಚಿವರು. 

Minister Ramalingareddy Agrees to Salary Hike for Retired KSRTC Employees grg
Author
First Published Mar 8, 2024, 8:58 AM IST

ಬೆಂಗಳೂರು(ಮಾ.08):  ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಂತೆಯೇ 2020ರ ಜ. 1ರಿಂದ2023 ರಫೆ.28ರವರೆಗೆ ನಿವೃತ್ತ ಹಾಗೂ ಸಂಸ್ಥೆಯಿಂದ ಹೊರಹೋಗಿರುವ ಎಲ್ಲನೌಕರರಿಗೂ ಶೇ.15ರಷ್ಟು ವೇತನ ಹೆಚ್ಚಳ ಬಾಕಿ ನೀಡುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ. 

ಸಾರಿಗೆ ನಿಗಮಗಳ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಮುಖರೊಂದಿಗೆ ರಾಮಲಿಂಗಾರೆಡ್ಡಿ ಗುರುವಾರ ಸಭೆ ನಡೆಸಿದರು. 

ಮುಂದಿನ 4 ತಿಂಗಳಿನಲ್ಲಿ ಕಲ್ಯಾಣ ಸಾರಿಗೆಗೆ 485 ಹೊಸ ಬಸ್: ಸಚಿವ ರಾಮಲಿಂಗಾರೆಡ್ಡಿ

ಸಭೆಯಲ್ಲಿ 2020 ಜ. 1ರಿಂದ 2023ರ ಫೆ. 28 ರವರೆಗೆ ನಿವೃತ್ತರಾದ ಮತ್ತು ಸಂಸ್ಥೆಯಿಂದ ಹೊರಹೋದ ಸುಮಾರು 10 ಸಾವಿರ ಮಾಜಿ ನೌಕರರಿಗೂ ಶೇ. 15ರಷ್ಟು ವೇತನ ಹೆಚ್ಚಳ ಬಾಕಿ ಪಾವತಿಸಲು ಒಪ್ಪಿಗೆ ಸೂಚಿಸಲಾಯಿತು. ಅದಕ್ಕಾಗಿ 220 ಕೋಟಿ ರು. ಗಳ ಅವಶ್ಯಕತೆಯಿದೆ. ಈ ಕುರಿತಂತೆ ಆದೇಶ ಹೊರಡಿಸುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಸಚಿವರು ಸೂಚಿಸಿದರು.

Follow Us:
Download App:
  • android
  • ios