ಬೆಂಗಳೂರು[ನ.17]: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರಾಜ್ಯದ 16 ಸಣ್ಣ ಮತ್ತು ಮಧ್ಯಮ ನಗರ​-ಪಟ್ಟಣಗಳಲ್ಲಿ ಯಶಸ್ವಿಯಾಗಿ ನಗರ ಸಾರಿಗೆಯನ್ನು ಅನುಷ್ಠಾನಗೊಳಿಸಿರುವ ಉಪಕ್ರಮಕ್ಕೆ ‘ಎಕನಾಮಿಕ್ಸ್‌ ಟೈಮ್ಸ್‌ ಗವರ್ನ್‌ಮೆಂಟ್‌ ಡಾಟ್‌ ಕಾಂ ಗ್ಲೋಬಲ್‌ ಮೊಬಿಲಿಟಿ’ ಪ್ರಶಸ್ತಿ ಲಭಿಸಿದೆ.

ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಏಕರೂಪವಾಗಿರಲಿ

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನಾಗಾಲ್ಯಾಂಡ್‌ನ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಮತ್ತು ಬುಡಕಟ್ಟು ಸಚಿವ ತೆಂಜಮ್‌ ಇಮ್ನಾ ಅಲಾಂಗ್‌ ಮತ್ತು ಎಕನಾಮಿಕ್ಸ್‌ ಟೈಮ್ಸ್‌ ಗವರ್ನ್‌ಮೆಂಟ್‌ ಡಾಟ್‌ ಕಾಂ ಸಂಪಾದಕ ಬಿ.ರಾಧಾಕೃಷ್ಣ ಅವರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.

KSRTC ನೌಕರರಿಗೆ ಬಂಪರ್ ಬೋನಸ್