KSRTC ಇದೀಗ ಹೊಸ ಆಫರ್ ಒಂದನ್ನು ನೀಡಿದೆ. ಭರ್ಜರಿ ಆಫರ್ ಮೂಲಕ ಬಹುಮಾನ ಗೆಲ್ಲಬಹುದಾಗಿದೆ. ಅಂಬಾರಿ ಬಸ್‌ಗಳಿಗೆ ಬ್ರಾಡಿಂಗ್‌ ಹೆಸರು ನಿರೀಕ್ಷಿಸಿದ್ದು, ಅಂಬಾರಿ ಹೆಸರು ಉಳಿಸಿಕೊಂಡು ಹೊಸ ಬ್ರಾಂಡ್‌ ಹೆಸರು ಸೂಚಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ‘ಅಂಬಾರಿ ಬಸ್‌’ ಸೇವೆಯನ್ನು ಉನ್ನತೀಕರಿಸಲು ನಿರ್ಧರಿಸಿದ್ದು, ಅಂಬಾರಿ ಮಲ್ಟಿಆಕ್ಸೆಲ್‌(ಸ್ಲೀಪರ್‌) ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. 

ಈ ಬಸ್‌ಗಳಿಗೆ ಬ್ರಾಡಿಂಗ್‌ ಹೆಸರು ನಿರೀಕ್ಷಿಸಿದ್ದು, ಅಂಬಾರಿ ಹೆಸರು ಉಳಿಸಿಕೊಂಡು ಹೊಸ ಬ್ರಾಂಡ್‌ ಹೆಸರು ಸೂಚಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದೆ.

ಸಾರ್ವಜನಿಕರಿಂದ ಬರುವ ಬ್ರಾಂಡ್‌ ಪರಿಕಲ್ಪನೆಗಳ ಪೈಕಿ ಅತ್ಯುತ್ತಮವಾದ ಒಂದಕ್ಕೆ .5 ಸಾವಿರ ಬಹುಮಾನ ನೀಡಲಾಗುವುದು. ಬ್ರಾಡಿಂಗ್‌ ಹೆಸರು ಸೂಚಿಸಲು ಫೆ.20 ಕಡೆಯ ದಿನವಾಗಿದೆ. ಆಸಕ್ತರು ಕೆಎಸ್ಸಾರ್ಟಿಸಿಯ ಫೇಸ್‌ಬುಕ್‌ (facebook/KSRTC.karnataka) ಮೂಲಕ ಬ್ರಾಂಡಿಂಗ್‌ ಹೆಸರು ಸಲ್ಲಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.